ನನ್ನ ಭಾವನೆಗಳ ಜತೆ ಆಟ ಆಡಿದ, ನನ್ನ ಜೀವನ ನರಕ ಮಾಡಿದ: ನಟಿ ಜಾಕ್ವೆಲಿನ್ ಫರ್ನಾಂಡೀಸ್

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಸುಕೇಶ್ ಚಂದ್ರಶೇಖರ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಸುಕೇಶ್ ವಿರುದ್ಧ ಜಾಕ್ವೆಲಿನ್ ಹಲವು ಆರೋಪಗಳನ್ನು ಮಾಡಿದ್ದಾರೆ.
ಸುಖೇಶ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್
ಸುಖೇಶ್ ಮತ್ತು ಜಾಕ್ವೆಲಿನ್ ಫರ್ನಾಂಡೀಸ್
Updated on

ನವದೆಹಲಿ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಪಟಿಯಾಲ ಹೌಸ್ ಕೋರ್ಟ್ ನಲ್ಲಿ ಸುಕೇಶ್ ಚಂದ್ರಶೇಖರ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಸುಕೇಶ್ ವಿರುದ್ಧ ಜಾಕ್ವೆಲಿನ್ ಹಲವು ಆರೋಪಗಳನ್ನು ಮಾಡಿದ್ದಾರೆ.

ಸುಕೇಶ್ ಚಂದ್ರಶೇಖರ್  ಅವರು ನಡೆಸಿದ 200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಜಾಕ್ವೆಲಿನ್​​ ಫರ್ನಾಂಡಿಸ್​​ಗೆ ಸಂಕಷ್ಟ ಉಂಟಾಗಿದೆ. ಸುಕೇಶ್ ಜತೆ ಆಪ್ತವಾಗಿದ್ದ ಕಾರಣಕ್ಕೆ ಅವರು ಕೂಡ ಈ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಈಗ ದೆಹಲಿ ಕೋರ್ಟ್​ಗೆ ಹಾಜರಾಗಿರುವ ಜಾಕ್ವೆಲಿನ್ ಅವರು, ‘ಸುಕೇಶ್ ನನ್ನ ಭಾವನೆಗಳ ಜತೆ ಆಟ ಆಡಿದ ಹಾಗೂ ನನ್ನ ಜೀವನವನ್ನು ನರಕ ಮಾಡಿದ’ ಎಂದು ಹೇಳಿದ್ದಾರೆ. ಸುಕೇಶ್ ಚಂದ್ರಶೇಖರ್ ಮಾಡಿದ ಮೋಸದ ಬಗ್ಗೆ ಅವರು ಕೋರ್ಟ್​ಗೆ ವಿವರಿಸಿದ್ದಾರೆ.

ಸುಕೇಶ್ ಚಂದ್ರಶೇಖರ್ ಸ್ನೇಹದಿಂದಾಗಿ ನಾನು ನೆಮ್ಮದಿ ಕಳೆದುಕೊಂಡೆ ಎಂದಿದ್ದಾರೆ ಬಾಲಿವುಡ್ ನಟಿ ಹಾಗೂ ಕನ್ನಡದ ವಿಕ್ರಾಂತ್ ರೋಣ ಚಿತ್ರದ ನಟಿ ಜಾಕ್ವೆಲಿನ್ ಫರ್ನಾಂಡಿಸ್  ಬಹುಕೋಟಿ ವಂಚನೆಯ ಆರೋಪಿ ಆಗಿರುವ ಸುಖೇಶ್ ಚಂದ್ರಶೇಖರ್ ಕಡೆಯಿಂದ ದುಬಾರಿ ಬೆಲೆಯ ಗಿಫ್ಟ್ ಪಡೆದುಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಜಾಕ್ವೆಲಿನ್ ಇಡಿ ವಿಚಾರಣೆಯನ್ನು ಎದುರಿಸಿದರು.

ಆತನ ಸ್ನೇಹದಿಂದಾಗಿ ನೆಮ್ಮದಿ ಕಳೆದುಕೊಂಡೆ ಹಾಗೂ ಅವನು ನನ್ನ ಭಾವನೆಗಳೊಂದಿಗೆ ಆಟವಾಡಿ, ಜೀವನವನ್ನೇ ನರಕ ಮಾಡಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ. ಜೀವನವನ್ನು ಮಾತ್ರವಲ್ಲ, ವೃತ್ತಿ ಜೀವನವನ್ನೇ ಅವನು ಹದಗೆಡಿಸಿಬಿಟ್ಟಿದ್ದಾನೆ ಎಂದು ದೂರಿದ್ದಾರೆ. ಸುಕೇಶ್ ತಮಗೆ ಪರಿಚಯವಾಗಿದ್ದು ಪಿಂಕಿ ಇರಾನಿ ಎನ್ನುವ ಮಹಿಳೆಯಿಂದ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ.

ಸುಕೇಶ್ ಚಂದ್ರಶೇಖರ್ ಸಹಚರೆ ಪಿಂಕಿ ಇರಾನಿಯಿಂದ ಜಾಕ್ವೆಲಿನ್​ಗೆ ಆತನ ಪರಿಚಯ ಆಗಿತ್ತು. ಸರ್ಕಾರಿ ಅಧಿಕಾರಿ ಎಂದು ಸುಕೇಶ್​​ನನ್ನು ಪಿಂಕಿ ಪರಿಚಯಿಸಿದ್ದಳು. ‘ನಾನು ಸನ್ ಟಿವಿ ಮಾಲೀಕ’ ಎಂದು ಕೂಡ ಸುಕೇಶ್ ಹೇಳಿಕೊಂಡಿದ್ದ. ಜಯಲಲಿತಾ ತನ್ನ ಚಿಕ್ಕಮ್ಮ ಎಂದು ಆತ ಹೇಳಿಕೊಂಡಿದ್ದ.

‘ನಾನು ನಿಮ್ಮ ದೊಡ್ಡ ಫ್ಯಾನ್ ಎಂದು ಚಂದ್ರಶೇಖರ್ ಹೇಳಿದ್ದ. ನನ್ನ ಬಳಿ ದಕ್ಷಿಣ ಭಾರತದಲ್ಲಿ ಸಿನಿಮಾ ಮಾಡುವಂತೆ ಹೇಳಿದ್ದ. ಸನ್​ ಟಿವಿ ಮಾಲೀಕ ಆಗಿರುವುದರಿಂದ ಹಲವು ಪ್ರಾಜೆಕ್ಟ್​​ಗಳು ಲೈನಪ್​ ಆಗಿವೆ. ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಆತ ಹೇಳಿದ್ದ. ಸುಕೇಶ್ ನನ್ನ ದಾರಿ ತಪ್ಪಿಸಿದ. ನನ್ನ ಜೀವನ ಹಾಗೂ ವೃತ್ತಿಜೀವನವನ್ನು ಆತ ಹಾಳು ಮಾಡಿದ’ ಎಂದು ಜಾಕ್ವೆಲಿನ್ ಹೇಳಿದ್ದಾರೆ.

‘ಸುಕೇಶ್ ಅರೆಸ್ಟ್​ ಆದ ನಂತರವೇ ಆತನ ನಿಜವಾದ ಹೆಸರು ನನಗೆ ಗೊತ್ತಾಗಿತ್ತು. ಆತ ಮಾಡುತ್ತಿದ್ದ ಕೆಲಸಗಳ ಬಗ್ಗೆ ಗೊತ್ತಾಯಿತು. ಪಿಂಕಿ ನನಗೆ ಮೋಸ ಮಾಡಿದಳು. ಆತನ ಹಿನ್ನೆಲೆ ಬಗ್ಗೆ ಪಿಂಕಿ ಎಂದಿಗೂ ಹೇಳಿಲ್ಲ. ಸುಕೇಶ್ ಹಿನ್ನಲೆ ಬಗ್ಗೆ ಆಕೆಗೆ ಗೊತ್ತಿತ್ತು’ ಎಂದು ಜಾಕ್ವೆಲಿನ್ ಹೇಳಿದ್ದಾರೆ.

ಜನವರಿ 27ಕ್ಕೆ ಕೆಲಸದ ನಿಮಿತ್ತ ದುಬೈಗೆ ಹಾರಲು ಅವಕಾಶ ನೀಡಬೇಕು ಎಂದು ಜಾಕ್ವೆಲಿನ್ ಕೋರಿದ್ದಾರೆ. ಈ ಸಂಬಂಧ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೋಟಿಸ್ ನೀಡಿದ್ದು, ಈ ಸಂಬಂಧ ಪ್ರತಿಕ್ರಿಯಿಸುವಂತೆ ಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಜನವರಿ 25ಕ್ಕೆ ಮುಂದೂಡಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com