ದರ್ಶನ್ ಸೋದರಳಿಯನಿಗೆ ಶ್ರುತಿ-ಶರಣ್‌ ಸಹೋದರಿ ಮಗಳು ಕೀರ್ತಿ ಕೃಷ್ಣ ನಾಯಕಿ!

ನಟ ಶರಣ್ ಮತ್ತು ಶೃತಿ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
ಕೀರ್ತಿ ಕೃಷ್ಣ
ಕೀರ್ತಿ ಕೃಷ್ಣ

ನಟ ಶರಣ್ ಮತ್ತು ಶೃತಿ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಸುಧೀರ್ ಶಾನಭೋಗ್ ಅವರ (ಅನಂತು v/s ನುಸ್ರತ್) ಮುಂಬರುವ ಚಿತ್ರ ಧರಣಿಮೂಲಕ ಪಾದಾರ್ಪಣೆ ಮಾಡಲಿದ್ದಾರೆ. ಸರಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ರಾಮ್ ಕುಮಾರ್ ಮತ್ತು ಶ್ರುತಿ  ಅಭಿನಯದ ʻಶ್ರೀ ನಾಗ ಶಕ್ತಿʼ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಬಣ್ಣ ಹಚ್ಚಿದ್ದವರು ಕೀರ್ತಿ.

ವಿದ್ಯಾಭ್ಯಾಸದ ಕಾರಣಕ್ಕೆ ಚಿತ್ರರಂಗದಿಂದ ದೂರವೇ ಉಳಿದಿದ್ದಿದ್ದರು. ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಬಿಬಿಎ ಮುಗಿಸಿರುವ ಕೀರ್ತಿ ಈಗ ಪೂರ್ಣ ಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ.

ಶೃತಿ ಅವರ ಇಡೀ ಕುಟುಂಬ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದೆ. ತಂದೆ ಕೃಷ್ಣ, ತಾಯಂದಿರಾದ ರಾಧ- ರುಕ್ಮಿಣಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ.

ಸುಧೀರ್ ಶಾನಭೋಗ್ ಅವರ ಧರಣಿ 2000 ರಲ್ಲಿ ಸೆಟ್ ಆಗಿದ್ದು, ಕೋಲಾರ ಮತ್ತು ಮಂಡ್ಯದಲ್ಲಿ ನಡೆದ ನೈಜ ಘಟನೆಯ ಸುತ್ತ ಕಥೆ ಸುತ್ತುತ್ತದೆ.

<strong>ಕೀರ್ತಿ ಕೃಷ್ಣ</strong>
ಕೀರ್ತಿ ಕೃಷ್ಣ

2012ರವರೆಗೆ ಕರ್ನಾಟಕದಲ್ಲಿ ಹುಂಜಗಳ ಕಾದಾಟ ಜನಪ್ರಿಯವಾಗಿತ್ತು. ಜನರು ಹೆಚ್ಚಾಗಿ ಹುಂಜಗಳ ಮೇಲೆ ಬೆಟ್ಟಿಂಗ್ ಕಟ್ಟುತ್ತಿದ್ದರು ಎಂದು ಸುಧೀರ್ ವಿವರಿಸುತ್ತಾರೆ. ಈ ಆಟವನ್ನು ನಿಷೇಧಿಸಲಾಗಿದೆ. ಆ ಸಮಯವನ್ನು ಬೆಳ್ಳಿ ಪರದೆಯ ಮೇಲೆ ಜೀವಂತವಾಗಿ ತರಲು ನಾವು ಪ್ರಯತ್ನಿಸುತ್ತಿದ್ದೇವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೋದರಳಿಯ ಮನೋಜ್, ಟಕ್ಕರ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು. ಈಗ ಧರಣಿ ಸಿನಿಮಾದಲ್ಲಿ ಮನೋಜ್ ಗೆ ಕೀರ್ತಿ ಕೃಷ್ಣ ನಾಯಕರಾಗಿದ್ದಾರೆ.

ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶಾನುಭೋಗ್ ನಿರ್ದೇಶನದ ʻಧರಣಿʼ ಚಿತ್ರವನ್ನು ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು  ನಿರ್ಮಿಸುತ್ತಿದ್ದಾರೆ.

ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣ, ಅರುಣೋದಯ ಕಥೆ , ಶ್ರೀನಿಧಿ ಡಿ ಎಸ್ ಸಂಭಾಷಣೆ ಜೊತೆಗೆ ಡಾ.ವಿ.ನಾಗೇಂದ್ರ ಪ್ರಸಾದ್ ಹಾಗೂ ಶಿವಕುಮಾರ್ ಮಾವಲಿ ಸಾಹಿತ್ಯ, ಟೈಗರ್ ಶಿವು ಸಾಹಸ ಸಂಯೋಜನೆ ಇದೆ. ಪ್ರಮುಖ ಪಾತ್ರವರ್ಗದ ಆಯ್ಕೆ ಇನ್ನೂ ನಡೆಯುತ್ತಿದೆ, ಫೆಬ್ರವರಿ ಮಧ್ಯದಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ತಂಡ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com