ರಕ್ಷಿತ್ ಶೆಟ್ಟಿಗೆ ರಿಚರ್ಡ್ ಆಂಟೋನಿ ಜೊತೆಗಿನ ನಂಟು 'ನಾ ಕಂಡಂತೆ...' ವಿಡಿಯೋದಲ್ಲಿ ಬೆಳಕಿಗೆ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯನ್ನು ಕಾತುರದಿಂದ ಕಾಯುತ್ತಿರುವ ರಕ್ಷಿತ್ ಶೆಟ್ಟಿ, ತಮ್ಮದೇ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ರಿಚರ್ಡ್ ಆಂಟೋನಿ ಸಿನಿಮಾದಲ್ಲೂ ವ್ಯಸ್ತರಾಗಿದ್ದಾರೆ. 
ನಟ ರಕ್ಷಿತ್ ಶೆಟ್ಟಿ
ನಟ ರಕ್ಷಿತ್ ಶೆಟ್ಟಿ

ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯನ್ನು ಕಾತುರದಿಂದ ಕಾಯುತ್ತಿರುವ ರಕ್ಷಿತ್ ಶೆಟ್ಟಿ, ತಮ್ಮದೇ ನಿರ್ದೇಶನದ, ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ರಿಚರ್ಡ್ ಆಂಟೋನಿ ಸಿನಿಮಾದಲ್ಲೂ ವ್ಯಸ್ತರಾಗಿದ್ದಾರೆ.
 
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಬಿಡುಗಡೆಯ ನಂತರ ರಕ್ಷಿತ್ ಶೆಟ್ಟಿ ತಮ್ಮ ಮುಂದಿನ ನಿರ್ದೇಶನದ ಸಿನಿಮಾದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಿದ್ದಾರೆ

ಈ ನಡುವೆ ವೀಕ್ಷಕರೊಂದಿಗೆ ಸಂವಾದ ನಡೆಸುವಂತಹ ಸರಣಿ ವೀಡಿಯೋಗಳ ಮೂಲಕ ರಕ್ಷಿತ್ ಶೆಟ್ಟಿ ಸಿನಿ ಆಸಕ್ತರನ್ನು ಆಹ್ವಾನಿಸಿದ್ದು,  ಈ ವೀಡಿಯೋದಲ್ಲಿ ಪುರಾತನ ಪುರಾಣಗಳು, ಇತಾಸಗಳು ಮತ್ತು ಪೂಜ್ಯ ದೇವತೆಯಾದ ಪರಶುರಾಮನನ್ನು ಅಧ್ಯಯನ ಮಾಡಿದ ಅಂಶಗಳಿವೆ.

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ, ರಕ್ಷಿತ್ ಶೆಟ್ಟಿ, ನಾ ಕಂಡಂತೆ"ಸರಣಿಯ  ವೀಡಿಯೊಗಳನ್ನು ಪ್ರಾಚೀನ ಕಾಲದ ವೈಜ್ಞಾನಿಕ ಅಧ್ಯಯನಗಳ ತಾತ್ವಿಕ ಪ್ರಾತಿನಿಧ್ಯ ಎಂದು ವಿವರಿಸಿದ್ದಾರೆ.

ಈ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಅವರು,  3-4 ನಿಮಿಷಗಳಿರುವ 10 ಭಾಗಗಳ ವೀಡಿಯೋಗಳನ್ನು ಬಿಡುಗಡೆ ಮಾಡಲು ಉದ್ದೇಶಿಸಿರುವುದಾಗಿ ತಿಳಿಸಿದ್ದಾರೆ. ಈ ಭಾಗಗಳಲ್ಲಿನ ಅಂಶಗಳಿಂದ ಗ್ರಾಹಕರು ರಿಚರ್ಡ್ ಆಂಟೋನಿ ಸಿನಿಮಾ ಕುರಿತಂತೆ ಆಳವಾಗಿ ಅರ್ಥ ಮಾಡಿಕೊಳ್ಳಬಹುದೆಂಬುದು ರಕ್ಷಿತ್ ಶೆಟ್ಟಿ ನಿರೀಕ್ಷೆಯಾಗಿದೆ.

ಸರಣಿಯಲ್ಲಿ ಪರಶುರಾಮ ಕ್ಷೇತ್ರದ ಕುರಿತ ಉಲ್ಲೇಖಗಳು ರಿಚರ್ಡ್ ಆಂಟೋನಿ ಸಿನಿಮಾಗೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ರಕ್ಷಿತ್ ಶೆಟ್ಟಿ, ಈ ಕಥೆಗಳೊಂದಿಗೆ ಪರಿಚಿತರಾಗುವ ಮೂಲಕ, ವೀಕ್ಷಕರು ವಿಭಿನ್ನ ದೃಷ್ಟಿಕೋನವನ್ನು ಪಡೆಯಬಹುದು ಮತ್ತು ಚಿತ್ರದ ಬಗ್ಗೆ ತಮ್ಮ ಗ್ರಹಿಕೆಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಸರಣಿಯನ್ನು ಉಳಿದವರು ಕಂಡಂತೆ ಯ ಸಣ್ಣ ಅವತರಣಿಕೆ ಎಂದೂ ಹೇಳಿದ್ದು ತಮ್ಮ ಮುಂದಿನ ಚಿತ್ರ ಪುಣ್ಯಕೋಟಿಗೂ ಇದೇ ಮಾದರಿ ಅನುಸರಿಸುವುದಾಗಿ ತಿಳಿಸಿದ್ದಾರೆ.

ರಕ್ಷಿತ್ ಶೆಟ್ಟಿ ಇರಲಿರುವ ನಾ ಕಂಡಂತೆ ಸರಣಿಯನ್ನು ಚಂದ್ರಜಿತ್ ಬೆಳ್ಳಿಯಪ್ಪ ಸೃಷ್ಟಿಸಿದ್ದು, ದರ್ಶನ್ ಕುಮಾರ್ ಚಿತ್ರೀಕರಿಸಿದ್ದಾರೆ. ನಾಗಾರ್ಜುನ್ ಶರ್ಮಾ ಡಬ್ಬಿಂಗ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿನ ಪತ್ರದಲ್ಲಿ ರಕ್ಷಿತ್ ಶೆಟ್ಟಿ  ತನ್ನ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದ್ದು,  ತಮ್ಮ ತಾಯಿ ತಮಗೆ ಹೇಳಿದ ಕಥೆಗಳನ್ನು, ಉಳಿದಂತೆ ದೇವಾಲಯದ ಬಳಿಯ ಜನರಿಂದ ಕೇಳಿ ತಿಳಿದಿದ್ದನ್ನು ಸ್ವಲ್ಪ ತಮ್ಮ ಊಹೆಗಳನ್ನು ನೆನಪಿಸಿಕೊಂಡಿದ್ದಾರೆ. ಈ ಪೈಕಿ ರಕ್ಷಿತ್ ಶೆಟ್ಟಿ ಅವರನ್ನು ಬಹಳ ಆಕರ್ಷಿಸಿದ್ದು, ಅನಂತೇಶ್ವರ ದೇವಾಲಯ ಹಾಗೂ ತಮ್ಮ ಹೃದಯಕ್ಕೆ ಹತ್ತಿರವಾಗಿದ್ದು ಶಿವ.
 
ಆದರೆ ಈ ದೇವಾಲಯ ಲಿಂಗ ರೂಪದಲ್ಲಿರುವ ಪರಶುರಾಮನ ಆರಾಧನೆಗೆ ಸಂಬಂಧಪಟ್ಟಿದ್ದು ಎಂಬುದನ್ನು ಅರಿಯುತ್ತಿದ್ದಂತೆಯೇ ರಕ್ಷಿತ್ ಶೆಟ್ಟಿ ಆಶ್ಚರ್ಯ ಚಕಿತರಾದರು. ಈ ಶೋಧನೆ ಅವರಲ್ಲಿ ಹಲವಾರು ಪ್ರಶ್ನೆಗಳನ್ನು ಮೂಡಿಸಿತ್ತು. ಈ ಜ್ಞಾನದ ದಾಹ ಮತ್ತು ಬಯಕೆಯೇ ರಕ್ಷಿತ್ ಅವರನ್ನು ಕಥೆಗಾರನಾಗಲು ಪ್ರೇರೇಪಿಸಿತು.

ಈ ಪ್ರಾಚೀನ ತತ್ತ್ವಚಿಂತನೆಗಳನ್ನು ಆಧುನಿಕ ಕಾಲದ ನಿರೂಪಣೆಗಳಲ್ಲಿ ಅಳವಡಿಸಿಕೊಳ್ಳುವ ಪ್ರಾಮುಖ್ಯತೆಯನ್ನು ರಕ್ಷಿತ್ ಶೆಟ್ಟಿ ಒತ್ತಿಹೇಳಿದ್ದು, ಇದು ಮಾನವ ವಿಕಾಸಕ್ಕೆ ಅಮೂಲ್ಯವಾದ ಪಾಠಗಳನ್ನು ಹೊಂದಿದ್ದಾರೆಂದು ನಂಬಿದ್ದಾರೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com