ಕಿಚ್ಚ ಸುದೀಪ್ ನಿಂದಾಗಿ ಲಕ್ಷಗಟ್ಟಲೆ ಕಳೆದುಕೊಂಡಿದ್ದೇನೆ, ಅವರು ನನ್ನ ಹಣ ಕೊಟ್ಬಿಡಲಿ ಸಾಕು: ನಿರ್ಮಾಪಕ ರೆಹಮಾನ್

ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂ.ಎನ್​. ಕುಮಾರ್ ಅವರ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿರುವುದರ ಮಧ್ಯೆ ಇದೀಗ ಮೂರನೇ ವ್ಯಕ್ತಿಯ ಎಂಟ್ರಿಯಾಗಿದೆ. ಅದು ಸುದೀಪ್ ನಟನೆಯ ಹುಚ್ಚ, ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಯಜಮಾನ ಚಿತ್ರ ನಿರ್ಮಾಪಕ ರೆಹಮಾನ್.
ನಿರ್ಮಾಪಕ ರೆಹಮಾನ್, ಕಿಚ್ಚ ಸುದೀಪ್(ಸಂಗ್ರಹ ಚಿತ್ರ)
ನಿರ್ಮಾಪಕ ರೆಹಮಾನ್, ಕಿಚ್ಚ ಸುದೀಪ್(ಸಂಗ್ರಹ ಚಿತ್ರ)
Updated on

ಬೆಂಗಳೂರು: ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಹಾಗೂ ನಿರ್ಮಾಪಕ ಎಂ.ಎನ್​. ಕುಮಾರ್ ಅವರ ನಡುವಿನ ವಿವಾದ ಕೋರ್ಟ್ ಮೆಟ್ಟಿಲೇರಿರುವುದರ ಮಧ್ಯೆ ಇದೀಗ ಮೂರನೇ ವ್ಯಕ್ತಿಯ ಎಂಟ್ರಿಯಾಗಿದೆ. ಅದು ಸುದೀಪ್ ನಟನೆಯ ಹುಚ್ಚ, ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಯಜಮಾನ ಚಿತ್ರ ನಿರ್ಮಾಪಕ ರೆಹಮಾನ್.

ನಿರ್ಮಾಪಕ ರೆಹಮಾನ್ ಕೂಡ ನಿನ್ನೆ ಸುದ್ದಿಗೋಷ್ಠಿ ನಡೆಸಿ ಸುದೀಪ್ ವಿರುದ್ಧ ಆರೋಪ ಮಾಡಿದ್ದಾರೆ. ‘ನಾನು ಇಲ್ಲಿಯವರೆಗೆ 20 ಸಿನಿಮಾ ಮಾಡಿದ್ದೇನೆ. ‘ಯಜಮಾನ’ ಮತ್ತು ‘ಹುಚ್ಚ’ದಂತಹ ಸಿನಿಮಾ ನಿರ್ಮಾಣ ಮಾಡಿದ್ದೇನೆ. ನ್ಯಾಯ ಕೇಳೋಕೆ ಸುದ್ದಿಗೋಷ್ಠಿ ಕರೆದಿದ್ದೇನೆ’ ಎಂದು ಮಾತು ಆರಂಭಿಸಿದರು. 

‘ಸುದೀಪ್ ಮೇಲೆ ನಾನು ದೂರು ಹೇಳುತ್ತಿಲ್ಲ, ನ್ಯಾಯ ಕೇಳುತ್ತಿದ್ದೇನೆ. ಅವರು ಈಗ ದೊಡ್ಡ ಹೀರೋ. ಅವರ ಮೇಲೆ ಆಪಾದನೆ ಮಾಡೋದು ಅಷ್ಟು ಉತ್ತಮ ಅಲ್ಲ. ‘ಯಜಮಾನ’ ಸಿನಿಮಾ ಆದ್ಮೇಲೆ ಉಪೇಂದ್ರ ಬಳಿ ಹೋಗಿ ‘ಹುಚ್ಚ’ ಸಿನಿಮಾ ಬಗ್ಗೆ ಹೇಳಿದೆ. ಟೈಟಲ್ ಕೇಳಿ ಅವರು ಬೇಡ ಎಂದರು. ನಂತರ ಸುದೀಪ್ ಜೊತೆ ‘ಹುಚ್ಚ’ ಸಿನಿಮಾ ಮಾಡಿದೆ. ‘ಯಜಮಾನ’ದಂತಹ ಸಿನಿಮಾ ಮಾಡಿ ಈಗ ‘ಹುಚ್ಚ’ ಸಿನಿಮಾ ಮಾಡ್ತಿಯಾ ಎಂದು ಗಾಂಧಿನಗರದಲ್ಲಿ ನನಗೆ ಬೈದರು ಎಂದರು.

ಸಿನಿಮಾ ಮಾಡಿಕೊಡಲಿಲ್ಲ: ಹುಚ್ಚ ಸಿನಿಮಾದ ಶಿವಮೊಗ್ಗ ಏರಿಯಾದ ವಿತರಣೆ ಸುದೀಪ್ ಅವರಿಗೆ ನಾಲ್ಕೂವರೆ ಲಕ್ಷ ರೂಪಾಯಿಗೆ ಕೊಟ್ಟೆ. ಸಿನಿಮಾ‌ ರಿಲೀಸ್ ‌ಆಗಿ 100 ದಿನ ಆಯ್ತು ಎಂದು ಸುದೀಪ್​ ಅವರನ್ನು ಕರೆದು ಲಾಡು ಹಂಚಿದ್ದೆವು. ಅಣ್ಣಾವ್ರು ಕೂಡ ‘ಹುಚ್ಚ’ ಸಿನಿಮಾ ನೋಡಿ ಖುಷಿಪಟ್ಟರು. ಬಳಿಕ ಸುದೀಪ್ ಬೆಳೆದರು. ಒಂದು ದಿನ ಸುದೀಪ್ ಅವರು ‘ಸ್ವರ್ಗ್’ ಸಿನಿಮಾನ ರಿಮೇಕ್ ಮಾಡೋಣ, ವಿಷ್ಣು ಅವರನ್ನು ಅತಿಥಿ ಪಾತ್ರದಲ್ಲಿ ಕರೆತರೋಣ ಎಂದರು. ಅವರು ಹೇಳಿದರು ಅಂತ ನಾನು ‘ಸ್ವರ್ಗ್​’ ಚಿತ್ರದ ರಿಮೇಕ್​ನ ಹತ್ತು ಲಕ್ಷ ರೂಪಾಯಿ ಕೊಟ್ಟ ತೆಗೆದುಕೊಂಡು ಬಂದೆ. ಈ ಸಿನಿಮಾ ಮಾಡೋಕೆ ವಿಷ್ಣುವರ್ಧನ್ ಅವರು ಹಿಂದೆಮುಂದೆ ನೋಡಿದರು. ನಾವು ಆ ಸಿನಿಮಾ ಕೈಬಿಟ್ಟೆವು. ‘ಅಂದಾಜ್ ಅಪ್ನಾ ಅಪ್ನಾ’ ಮಾಡೋಣ ಅಂದ್ರು. ಅದರ ಹಕ್ಕನ್ನು ತಂದೆ. ಅದು ಕೂಡ ಅರ್ಧಕ್ಕೆ ನಿಂತೋಯ್ತು’ ಎಂದರು.

ರಿಮೇಕ್ ರೈಟ್ಸ್ ತಗೊಂಡು ಬಂದು 35 ಲಕ್ಷ ಕಳೆದುಕೊಂಡೆ: ನಿರ್ಮಾಪಕರ ಸಂಘಕ್ಕೆ ಎಂಟು ವರ್ಷದ ಹಿಂದೆ ದೂರು ನೀಡಿದ್ದೆ. ಆದರೆ, ಆ ಕೇಸ್ ಮುಚ್ಚೋಯ್ತು. ಸುದೀಪ್​ಗೆ ನಾಲ್ಕುವರೆ ಲಕ್ಷ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದೆ. ಇದರ ಜೊತೆಗೆ ರಿಮೇಕ್ ರೈಟ್ಸ್ ದುಡ್ಡು 35 ಲಕ್ಷ ರೂಪಾಯಿ ವಾಪಸ್ ಕೊಡಬೇಕು ಎಂದು ದೂರಿನಲ್ಲಿ ತಿಳಿಸಿದ್ದೆ. ನನ್ನ ಹಣ ಹಿಂಪಡೆಯಲು ನಾನು ಸುದೀಪ್ ಮನೆ ಹತ್ರ ಹೋಗೋಕೆ ಶುರು ಮಾಡಿದೆ. ಸುಮಾರು ನೂರೈವತ್ತು ಸಾರಿ ಹೋಗಿದ್ದೀನಿ. ಯಾವಾಗ ಹೋದ್ರೂ ಅವ್ರು ಇಲ್ಲ ಅಂಥ ಹೇಳಿ ಕಳುಹಿಸುತ್ತಿದ್ದರು. ಒಂದು ದಿನ ಒಳಗೆ ಹೋದರೂ ಆವಾಗಲೂ ಇಲ್ಲ ಅಂದ್ರು. ಬರ್ತಡೇ ದಿನ‌ ಸಿಗಬಹುದು ಎಂದು ನಾನು ಹೋದೆ. ನಾನು ಒಳಗೆ ಹೋದರೆ ಮೇಲಗಡೆ ಎಲ್ಲಾ ನಿರ್ಮಾಪಕರು ಕೂತಿದ್ದರು. ನನ್ನನ್ನು ಫ್ಯಾನ್ಸ್ ಕೂರಿಸೋ ಜಾಗದಲ್ಲಿ ಕೊನೆಯಲ್ಲಿ ಕೂರಿಸಿದ್ರು ಎಂದು ಅಳಲು ತೋಡಿಕೊಂಡರು. 

ಸುದೀಪ್ ಗೆ 4.5 ಲಕ್ಷ ಕೊಟ್ಟಿದ್ದೆ: ಸುದೀಪ್ ಅವರಿಗೆ 4.5 ಲಕ್ಷ ಹಣಕೊಟ್ಟಿದ್ದೆ ಅದ್ರೆ ಅದರಲ್ಲಿ 1.8 ಲಕ್ಷ ವಾಪಸ್ ಕೊಟ್ಟಿದ್ದಾರೆ. ನನಗೆ ನಾಚಿಗೆ ಮಾನ ಮರ್ಯಾದೆ ಇಲ್ಲ 150 ಸಲ ಸುದೀಪ್ ಮನೆ ಬಳಿ ಹೋಗಿದ್ದೀನಿ. ನಾನು ಯಾವಾಗ ಮನೆ ಬಳಿ ಹೋದ್ರು ಮನೆಯಲ್ಲಿ ಇಲ್ಲ ಅಂತ ಹೇಳಿಸಿದ್ದಾರೆ.

ನಾನು ಸುದೀಪ್ ಅವರಿಗೆ ಹುಚ್ಚ ಸಿನಿಮಾ ಮಾಡಿದ್ದೆ ತಪ್ಪಾ, ಜಾಕ್ ಮಂಜು ಸುದೀಪ್ ಅವರ ಬಳಿ ಮಾತನಾಡಿ 30 ಲಕ್ಷ ಕೊಡೊಕೆ‌ ಹೇಳಿದ್ದಾರೆ ಅಂತ ಹೇಳಿದ್ರು. ಸ್ವಲ್ಪ ದಿನ ಅದ್ಮೇಲೆ ನಾನು ಜಾಕ್ ಮಂಜು ಅವರಿಗೆ ಎಷ್ಟು ಸಲ ಕಾಲ್ ಮಾಡಿದ್ರು ಪ್ರಯೋಜನ‌ ಆಗಿಲ್ಲ. ಶೂಟಿಂಗ್ ಸೆಟ್​ಗೆ ಹೋದ್ರೆ ಇಲ್ಲಿ‌ಗೆ ಬರಬೇಡಿ ಮನೆ ಹತ್ರ ಬನ್ನಿ ಅಂತ ಹೇಳಿದ್ರು. ಇಷ್ಟಾದ್ರು ನಾನು ಸುದೀಪ್ ವಿರುದ್ದ ಎಲ್ಲೂ ಅರೋಪ ಮಾಡಿರಲಿಲ್ಲ. ಮೂರು ದಿನಗಳ ಟಿವಿಯಲ್ಲಿ ಎಮ್ ಎನ್ ಕುಮಾರ್ ಅವರ ನೋಡಿ ಈಗ ಎಲ್ಲಾ ಎಚ್ಚೆತ್ತುಕೊಂಡ್ರ ಅನ್ಕೊಂಡೆ.

ಜಾಕ್ ಮಂಜು ನನ್ನ ಬಳಿ ಬಂದು ನಿಮಗೆ ಹಣ ಕೊಡೋಕೆ ಹೇಳಿದ್ದಾರೆ ಎಂದರು. 1,350 ಕಾಲ್ ಮಾಡಿದ್ದೀನಿ. ಕಾಲ್ ಕಟ್ ಮಾಡುತ್ತಿದ್ದರು. ನೂರಾರು ಸುಳ್ಳು ಹೇಳ್ತಿದ್ರು. ಹಣ ಮಾತ್ರ ಕೊಡಲಿಲ್ಲ. ಒಂದು ದಿನ ಜಾಕ್ ಮಂಜು ಕಾಲ್ ಮಾಡಿ ‘ವಿಕ್ರಾಂತ್ ರೋಣ ನಾನು ಸಿನಿಮಾ ಮಾಡಿ ಮುಳುಗಿಹೋದೆ’ ಎಂದರು. ನನಗೆ ಸುದೀಪ ಹೆಚ್ಚುವರಿ ಹಣ ಕೊಡೋದು ಬೇಡ, ರಿಮೇಕ್​ ಹಕ್ಕನ್ನು ತಂದಿದ್ದಕ್ಕೆ ಸಾಲ ಆಗಿದೆ. ಅದನ್ನು ಕೊಡಿ. ಸದ್ಯ ಮನೆ ಮಾರಿ ಬಾಡಿಗೆ ಮನೆಯಲ್ಲಿದ್ದೇನೆ ಎಂದು ಸುದ್ದಿಗೋಷ್ಠಿಯಲ್ಲಿ ರೆಹಮಾನ್ ತಮ್ಮ ಪರಿಸ್ಥಿತಿ ತೋಡಿಕೊಂಡರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com