ಜನಪ್ರಿಯ 'ನಾಟು ನಾಟು' ಸಾಂಗ್ ನಿಂದ ಜಗತ್ತಿನಾದ್ಯಂತ ಹೆಸರುವಾಸಿಯಾಗಿರುವ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್ ಟಿಆರ್ ಅಭಿನಯದ ಎಸ್ ಎಸ್ ರಾಜಮೌಳಿ ನಿರ್ದೇಶನದ 'ಆರ್ ಆರ್ ಆರ್'' ಸ್ವೀಕೆಲ್ ಬರೋದು ಸ್ಪಷ್ಟವಾಗಿದೆ.
ಇತ್ತೀಚಿನ ಮಾತುಕತೆಯೊಂದರಲ್ಲಿ ರಾಜಮೌಳಿ ಅವರ ತಂದೆ ಹಾಗೂ ಚಿತ್ರ ಕಥೆಗಾರ ವಿಜೇಂದ್ರ ಪ್ರಸಾದ್ ಸ್ವೀಕೆಲ್ ವಿಚಾರವನ್ನು ಹಂಚಿಕೊಂಡಿದ್ದು, ರಾಜಮೌಳಿ ಅವರ ಮಾರ್ಗದರ್ಶನದಲ್ಲಿ ಹಾಲಿವುಡ್ ನಿರ್ದೇಶಕರೊಬ್ಬರು ನಿರ್ದೇಶನ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ಆರ್ ಆರ್ ಆರ್ ಮೊದಲ ಭಾಗದಲ್ಲಿರುವಂತೆ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರ ನಿರ್ವಹಿಸುವಂತೆ ಸೀಕ್ವೆಲ್ ಬರೆಯಲಾಗಿದೆಯಂತೆ. ಆರ್ ಆರ್ ಆರ್ ಚಿತ್ರಕ್ಕೆ ಹೋಲಿಸಿದರೆ ಮಹೇಶ್ ಬಾಬು ಅವರೊಂದಿಗಿನ ರಾಜಮೌಳಿ ಅವರ ಮುಂದಿನ ಸಿನಿಮಾ ಹೆಚ್ಚಿನ ಸಾಹಸಮಯ ಸಿನಿಮಾ ಎಂದು ವಿಜಯೇಂದ್ರ ಬಹಿರಂಗಪಡಿಸಿದರು. ತಾತ್ಕಾಲಿಕವಾಗಿ ಈ ಚಿತ್ರಕ್ಕೆ SSMB 29 ಎಂದು ಹೆಸರಿಡಲಾಗಿದ್ದು, ಈ ಚಿತ್ರದ ನಿರ್ಮಾಣ ಡಿಸೆಂಬರ್ 2023 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ.
ಐತಿಹಾಸಿಕ 'ಮಹಾಭಾರತ'' ಸಿನಿಮಾವನ್ನು ಕೂಡಾ ರಾಜಮೌಳಿ ನಿರ್ದೇಶನ ಮಾಡುವುದಾಗಿ ವಿಜೇಂದ್ರ ಅವರು ಬಹಿರಂಗಪಡಿಸಿದರು. ಅವರ ಮುಂದಿನ ಪ್ರಾಜೆಕ್ಟ್ ಜೊತೆಗೆ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದ್ದಾರೆ ಅದನ್ನು ಅವರ ಮಗ ಎಸ್.ಎಸ್. ಕಾರ್ತಿಕೇಯನ್ ನಿರ್ವಹಿಸುತ್ತಾರಂತೆ. ಆರ್ ಆರ್ ಆರ್ ಬಿಡುಗಡೆಯಾದಾಗಿನಿಂದ ಜಾಗತಿಕವಾಗಿ ಹೆಚ್ಚು ಪ್ರಸಿದ್ಧಿಯಾಗಿದೆ.
Advertisement