
ಆಯುರ್ವೇದ ವೈದ್ಯ ಹಾಗೂ ನಿರ್ಮಾಪಕ ಮಧುಸೂದನ್ ಅವರು ಚಿತ್ರಕಥೆ ಬರೆದು, ನಿರ್ದೇಶನ ಮಾಡಿರುವ ಮೊದಲ ಚಿತ್ರ ಮಧುರ ಕಾವ್ಯ ಜುಲೈ 21 ರಂದು ತೆರೆಗೆ ಬರಲಿದೆ.
"ಮಧುರ ಕಾವ್ಯ ಚಿತ್ರ ಹೊಡೆದಾಟ, ಅತಿರಂಜಕ ಇಲ್ಲದ ಕೇವಲ ಜನರಲ್ಲಿ ಅರಿವು ಮೂಡಿಸುವ ಚಿತ್ರವಾಗಿದೆ. ಆಲೋಪತಿ ವೈದ್ಯರು ಹಾಗೂ ಔಷಧಿ ಕಂಪನಿಗಳು ಜನರನ್ನು ಹೇಗೆ ವಂಚಿಸುತ್ತಿವೆ ಎಂಬ ಬಗ್ಗೆ ಬೆಳಕು ಚೆಲ್ಲುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಈ ಚಿತ್ರದ ಟ್ರೇಲರ್ ಅನ್ನು ಹಿರಿಯ ನಟ ದೇವರಾಜ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದ್ದರು ಮತ್ತು ಅಲೋಪತಿ ಹಾಗೂ ಆಯುರ್ವೇದದ ಸುತ್ತ ಸುತ್ತುವ ಚಿತ್ರವನ್ನು ಶ್ಲಾಘಿಸಿದ್ದರು.
“ಚಿತ್ರವು ಅಲೋಪತಿ ವೈದ್ಯರು ಸಾಂಪ್ರದಾಯಿಕ ವೈದ್ಯರನ್ನು ನಿಗ್ರಹಿಸುವುದನ್ನು ಬಹಿರಂಗಪಡಿಸುತ್ತದೆ” ಎಂದು ತಮ್ಮ ವಿಖ್ಯಾತ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರವನ್ನು ಬೆಂಬಲಿಸುತ್ತಿರುವ ಮಧುಸೂದನ್ ಅವರು ಹೇಳಿದ್ದಾರೆ. ಈ ಚಿತ್ರಕ್ಕೆ ಸತೀಶ್ ಶರ್ಮಾ ಸಂಗೀತ ನೀಡಿದ್ದಾರೆ.
Advertisement