'ಡೇವಿಡ್' ನಿರ್ದೇಶನ ಒಂದು ಅದ್ಭುತ ಅವಕಾಶ, ಆದರೆ ನಟನೆ ನನ್ನ ಪ್ರಮುಖ ಆದ್ಯತೆ: ಶ್ರೇಯಸ್

ನಟ ಹಾಗೂ ನಿರ್ದೇಶಕ ಶ್ರೇಯಸ್ ಚಿಂಗಾ ಅವರ ಮುಂದಿನ ಚಿತ್ರ ಡೇವಿಡ್‌ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದು ಅವರ ವೃತ್ತಿಜೀವನದ ಮಹತ್ವದ ಚಿತ್ರವಾಗಿದೆ.
ಡೇವಿಡ್ ಚಿತ್ರದ ಸ್ಟಿಲ್
ಡೇವಿಡ್ ಚಿತ್ರದ ಸ್ಟಿಲ್
Updated on

ನಟ ಹಾಗೂ ನಿರ್ದೇಶಕ ಶ್ರೇಯಸ್ ಚಿಂಗಾ ಅವರ ಮುಂದಿನ ಚಿತ್ರ ಡೇವಿಡ್‌ ಬಿಡುಗಡೆಗೆ ಸಜ್ಜಾಗುತ್ತಿದ್ದು, ಇದು ಅವರ ವೃತ್ತಿಜೀವನದ ಮಹತ್ವದ ಚಿತ್ರವಾಗಿದೆ.

ನಾನು ಮೊದಲ ಬಾರಿಗೆ ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿಯೂ ನಟಿಸಿದ್ದೇನೆ. ಈ ಚಿತ್ರ ರೊಮ್ಯಾಂಟಿಕ್ ಮರ್ಡರ್ ಮಿಸ್ಟರಿ ಹೊಂದಿದ್ದು, ನಾಲ್ಕು ಕಥೆಗಳ ಸುತ್ತ ಸುತ್ತುತ್ತದೆ. ನಾಯಕನು ತನ್ನ ಸಾಮರ್ಥ್ಯಕ್ಕೆ ಮೀರಿದ ಶಕ್ತಿಗಳ ವಿರುದ್ಧ ಬಲವಂತವಾಗಿ ತೊಡಗಿಸಿಕೊಳ್ಳುತ್ತಾನೆ. ಇದೇ ಈ ಚಿತ್ರದ ಕಥಾಹಂದರ' ಎಂದು ಶ್ರೇಯಸ್ ಚಿಂಗಾ ಹೇಳಿದ್ದಾರೆ.

ಜುಲೈ 21 ರಂದು ಚಿತ್ರ ಬಿಡುಗಡೆಗೆ ಮುಂಚಿತವಾಗಿ ಸಿನಿಮಾ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ, ಡೇವಿಡ್ ಈಗಾಗಲೇ 2019 ರ ಕ್ಯಾನೆಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುವ ಮೂಲಕ ಅಂತರರಾಷ್ಟ್ರೀಯ ವಿತರಕರ ಗಮನವನ್ನು ಸೆಳೆದಿದೆ ಎಂದು ಶ್ರೇಯಸ್ ತಿಳಿಸಿದ್ದಾರೆ.

"ನಾವು ಆರಂಭದಲ್ಲಿ ವಿಶ್ವದಾದ್ಯಂತ ಬಹು ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಒಪ್ಪಂದಕ್ಕೆ ಬಂದಿದ್ದರೂ, ದುರದೃಷ್ಟವಶಾತ್, ವಿವಿಧ ಕಾರಣಗಳಿಂದ ಅದು ಕಾರ್ಯರೂಪಕ್ಕೆ ಬರಲಿಲ್ಲ" ಎಂದು ಶ್ರೇಯಸ್ ಹೇಳಿದ್ದಾರೆ.

ಶ್ರೇಯಸ್ ಅವರು ಚಿತ್ರ ಜಗತ್ತಿಗೆ ಹೊಸಬರೇನಲ್ಲ. ಅವರ ತಂದೆ ಸೂರಿ, ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್‌ನಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಜುವೆಲ್ ಇನ್ ದಿ ಕ್ರೌನ್, ಎ ಪ್ಯಾಸೇಜ್ ಟು ಇಂಡಿಯಾ ಮತ್ತು ಡ್ಯಾನ್ಸ್ ಲೈಕ್ ಎ ಮ್ಯಾನ್ ಸೇರಿದಂತೆ ಏಳು ಇಂಗ್ಲಿಷ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಶ್ರೇಯಸ್ ಅವರು ಈಗ 14ನೇ ವರ್ಷದಲ್ಲೇ ನಿರ್ದೇಶನಕ್ಕೆ ಕೈಹಾಕಿದ್ದಾರೆ.

ಮೂಲ ನಿರ್ದೇಶಕ ಭಾರ್ಗವ್ ಅವರು ಮಧ್ಯದಲ್ಲೇ ಚಿತ್ರದಿಂದ ಹಿಂದೆ ಸರಿದ ನಂತರ ಡೇವಿಡ್‌ ಚಿತ್ರದ  ನಿರ್ದೇಶಕನ ಜವಾಬ್ದಾರಿಯನ್ನು ಶ್ರೇಯಸ್ ವಹಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com