ಮಹಿಳಾ ಪಾತ್ರಗಳಿಗೂ ಸಮಾನ ಪ್ರಾಮುಖ್ಯತೆ ನೀಡುವ ಶಶಾಂಕ್ ಬದ್ಧತೆ ಬಗ್ಗೆ ಮೆಚ್ಚುಗೆ ಇದೆ: ಬೃಂದಾ ಆಚಾರ್ಯ

ರೊಮ್ಯಾಂಟಿಕ್ ಸಿನಿಮಾ ಕಥೆಯನ್ನು ಹೊಂದಿರುವ ಪ್ರೇಮ ಪೂಜ್ಯಂ ನಿಂದ ಮಹಿಳಾ ಕೇಂದ್ರಿತ ಸಿನಿಮಾ ಕಥೆಯನ್ನು ಹೊಂದಿರುವ ಜ್ಯೂಲಿಯೆಟ್ ನಂತಹ ಸಿನಿಮಾಗಳವರೆಗೂ ನಟಿ ಬೃಂದಾ ಆಚಾರ್ಯ ವಿವಿಧ ಪ್ರಕಾರಗಳಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದ್ದಾರೆ.
ಬೃಂದಾ ಆಚಾರ್ಯ
ಬೃಂದಾ ಆಚಾರ್ಯ

ಬೆಂಗಳೂರು: ರೊಮ್ಯಾಂಟಿಕ್ ಸಿನಿಮಾ ಕಥೆಯನ್ನು ಹೊಂದಿರುವ ಪ್ರೇಮ ಪೂಜ್ಯಂ ನಿಂದ ಮಹಿಳಾ ಕೇಂದ್ರಿತ ಸಿನಿಮಾ ಕಥೆಯನ್ನು ಹೊಂದಿರುವ ಜ್ಯೂಲಿಯೆಟ್ ನಂತಹ ಸಿನಿಮಾಗಳವರೆಗೂ ನಟಿ ಬೃಂದಾ ಆಚಾರ್ಯ ವಿವಿಧ ಪ್ರಕಾರಗಳಲ್ಲಿ ತಮ್ಮ ಅಭಿನಯ ಚಾತುರ್ಯವನ್ನು ಪ್ರದರ್ಶಿಸಿದ್ದಾರೆ.

ಶಶಾಂತ್ ನಿರ್ದೇಶನದ ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಬೃಂದಾ ಮಹತ್ವದ ಪಾತ್ರದಲ್ಲಿ ನಟಿಸಿದ್ದಾರೆ. ಜು.28 ರಂದು ಬಿಡುಗಡೆಯಾಗಲಿದೆ. ಸಿನಿಮಾದ ನಿಂಗೆ ಸೋತುಬಿಟ್ನಲ್ಲೇ ಶಿವಾನಿ ಹಾಡು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದೆ. ಸಿನಿಮಾದಲ್ಲಿ ಬೃಂದಾ ನಟಿಸಿರುವ ಶಿವಾನಿ ಪಾತ್ರ ವಿಶಿಷ್ಟವಾದ ಆದರೆ ಪ್ರಬುದ್ಧತೆಯೊಂದಿಗೆ, ಸಂತೋಷದಿಂದಿರುವ ಯುವತಿಯಾಗಿದ್ದು, ಮಹಿಳೆಯರ ವಿರುದ್ಧದ ಪುರುಷರಿಗೆ ಇರುವ ಪೂರ್ವಾಗ್ರಹಗಳ ಶೋಧನೆಯಲ್ಲಿ ಈ ಪಾತ್ರ ತೊಡಗುತ್ತದೆ.

ಸಂಬಂಧಗಳು ಮತ್ತು ಮೌಲ್ಯಗಳನ್ನು ಅನ್ವೇಷಿಸುತ್ತದೆ ಈ ಶಿವಾನಿಯ ಪಾತ್ರ. “ನಾನು ಪಾತ್ರದಲ್ಲಿ ನನ್ನನ್ನು ಆಳವಾಗಿ ತೊಡಸಿದ್ದೇನೆ. ಇದು ಪಾತ್ರದೊಂದಿಗೆ ಆಳವಾದ ಹಂತ ಸಂಪರ್ಕ ಸಾಧಿಸಲು ನನಗೆ ಸಹಾಯ ಮಾಡಿತು. ಕ್ರಿಶನ್ ನಿರ್ವಹಿಸಿದ ರಾಮ್ ಪಾತ್ರವನ್ನು ನಾನು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಬೃಂದಾ ಆಚಾರ್ಯ ಹೇಳಿದ್ದಾರೆ.

ಮೊಗ್ಗಿನ ಮನಸು ನಂತಹ ಸಿನಿಮಾ ನಿರ್ದೇಶನ ಮಾಡಿರುವ ಶಶಾಂಕ್ ಅವರಂತಹ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದು, ನನಗೆ ಸಿಕ್ಕ ಅತಿ ದೊಡ್ದ ಅನುಭವ. ಮಹಿಳಾ ಪಾತ್ರಗಳಿಗೆ ಸಮಾನ ಪ್ರಾಮುಖ್ಯತೆ ನೀಡುವ ಶಶಾಂಕ್ ಅವರ ಬದ್ಧತೆಯನ್ನು ನಾನು ಮೆಚ್ಚುತ್ತೇನೆ, ಅವರೊಂದಿಗೆ ಕೆಲಸ ಮಾಡುವುದು ಹೆಮ್ಮೆಯ ಸಂಗತಿ ಎಂದು ಬೃಂದಾ ಆಚಾರ್ಯ ಹೇಳಿದ್ದಾರೆ.

<strong>ಬೃಂದಾ ಆಚಾರ್ಯ</strong>
ಬೃಂದಾ ಆಚಾರ್ಯ

 
ಮಿಲನಾ ನಾಗರಾಜ್ ಅವರೊಂದಿಗೆ ನಟಿಸಿರುವುದರ ಬಗ್ಗೆ  ಮಾತನಾಡಿರುವ ಬೃಂದಾ ಆಚಾರ್ಯ, ನಾವಿಬ್ಬರೂ ಜೊತೆಗೆ ನಟಿಸಿರುವುದರ ಬಗ್ಗೆ ವೀಕ್ಷಕರು ಅಭಿಪ್ರಾಯ ತಿಳಿಸಬೇಕು ಎಂದು ಹೇಳಿದ್ದಾರೆ. 

ಕೌಸಲ್ಯ ಸುಪ್ರಜಾ ರಾಮ ಸಿನಿಮಾವನ್ನು ಬಿಸಿ ಪಾಟೀಲ್ ಅವರ ಕೌರವ ಪ್ರೊಡಕ್ಷನ್ ಹೌಸ್ ಹಾಗೂ ಶಶಾಂಕ್ ಸಿನಿಮಾ ಜಂಟಿ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದೆ. ನಾಗಭೂಷಣ, ಸುಧಾ ಬೆಳವಾಡಿ, ಅಚ್ಯುತ್ ಕುಮಾರ್ ಅವರು ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯಾ ಸಂಗೀತ, ಸುಜ್ಞಾನ್ ಸಿನಿಮೆಟೋಗ್ರಾಫಿ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com