'ಅಭಿವಾ' ಸಂಗೀತ್ ಕಾರ್ಯಕ್ರಮದಲ್ಲಿ 'ಜೋಡೆತ್ತು'ಗಳ ದರ್ಬಾರ್: ಒಟ್ಟಿಗೆ ಹೇಗೆ ಹೆಜ್ಜೆ ಹಾಕಿದ್ದಾರೆ ನೋಡಿ....
ಬೆಂಗಳೂರು: ನಟ ಅಭಿಷೇಕ್ ಅಂಬರೀಷ್ ಮತ್ತು ಅವಿವಾ ಬಿಡಪ್ಪ ವಿವಾಹ, ಆರತಕ್ಷತೆ ನಂತರ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಸಂಗೀತ ಕಾರ್ಯಕ್ರಮ ನಡೆಸಲಾಯಿತು. ಅವಿವಾ ಬಿಡಪ ಅವರ ತಂದೆ ಪ್ರಸಾದ್ ಬಿಡಪ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದರು.
ಸ್ಯಾಂಡಲ್ವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿಯಾಗಿ ಸಂಭ್ರಮಪಟ್ಟಿದ್ದಾರೆ.ಖ್ಯಾತ ಕಲಾವಿದರಾದ ಯಶ್, ರಿಷಬ್ ಶೆಟ್ಟಿ, ಜಯಪ್ರದಾ, ರಮ್ಯಾಕೃಷ್ಣ, ಶಿವರಾಜ್ಕುಮಾರ್, ಮಾಲಾಶ್ರೀ, ಗುರುಕಿರಣ್, ಭಾರತಿ ವಿಷ್ಣುವರ್ಧನ್ ಪ್ರಭುದೇವ, ಮಂಚು ಮನೋಜ್ ಸೇರಿದಂತೆ ಹಲವರು ಸಂಗೀತ್ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ನಿಂತಿದ್ದ ಸುಮಲತಾ ಅಂಬರೀಷ್ ಅವರ ಪರ ಜೋಡೆತ್ತುಗಳು ಎಂದು ಹೇಳಿಕೊಂಡು ಮಂಡ್ಯ ಜಿಲ್ಲೆಯಾದ್ಯಂತ ಭರ್ಜರಿ ಪ್ರಚಾರ ನಡೆಸಿ ಅವರ ಗೆಲುವಿಗೆ ಕಾರಣರಾಗಿದ್ದ ಯಶ್ ಮತ್ತು ದರ್ಶನ್ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಸ್ಪರ ಕಾಲೆಳೆಯುತ್ತಾ, ನಗುತ್ತಾ ಅಂಬರೀಷ್ ಅವರ ಚಿತ್ರದ ಹಾಡುಗಳಿಗೆ ಸುಮಲತಾ, ಅಭಿಷೇಕ್ ಜೊತೆ ಹೆಜ್ಜೆ ಹಾಕುತ್ತಿರುವ ಫೋಟೋ ವಿಡಿಯೊ ಸಾಕಷ್ಟು ವೈರಲ್ ಆಗಿದೆ.