ಪ್ರಭುದೇವ-ಹಿಮಾನಿ ದಂಪತಿಗೆ ಹೆಣ್ಣು ಮಗು ಜನನ; 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದು ಸಂತೋಷ ಎಂದ ನಟ!

ನೃತ್ಯ ಸಂಯೋಜಕ, ನಿರ್ದೇಶಕ ಮತ್ತು ನಟ ಪ್ರಭುದೇವ ಮತ್ತೆ ತಂದೆಯಾಗಿದ್ದಾರೆ. 2020 ರಲ್ಲಿ ಮದುವೆಯಾದ ಅವರ ಎರಡನೇ ಪತ್ನಿ ಹಿಮಾನಿ ಅವರಿಗೆ ಮೊದಲ ಹೆಣ್ಣು ಮಗುವಾಗಿದೆ.
ಪ್ರಭುದೇವ ಅವರ ಎರಡನೇ ಹೆಂಡತಿ ಹಿಮಾನಿ
ಪ್ರಭುದೇವ ಅವರ ಎರಡನೇ ಹೆಂಡತಿ ಹಿಮಾನಿ
Updated on

ನೃತ್ಯ ಸಂಯೋಜಕ, ನಿರ್ದೇಶಕ ಮತ್ತು ನಟ ಪ್ರಭುದೇವ ಮತ್ತೆ ತಂದೆಯಾಗಿದ್ದಾರೆ. 2020 ರಲ್ಲಿ ಮದುವೆಯಾದ ಅವರ ಎರಡನೇ ಪತ್ನಿ ಹಿಮಾನಿ ಅವರಿಗೆ ಮೊದಲ ಹೆಣ್ಣು ಮಗುವಾಗಿದೆ.

ಇದನ್ನು ಖಚಿತಪಡಿಸಿರುವ ಪ್ರಭುದೇವ, ಇದು ನಿಜ. 50ನೇ ವಯಸ್ಸಿನಲ್ಲಿ ಮತ್ತೆ ತಂದೆಯಾಗಿದ್ದು, ತುಂಬಾ ಸಂತೋಷ ಮತ್ತು ಸಂಪೂರ್ಣತೆಯ ಭಾವ ಆವರಿಸಿದೆ ಎಂದು ಹೇಳಿದ್ದಾರೆ. ಇದು ಪ್ರಭು ಕುಟುಂಬದ ಮೊದಲ ಹೆಣ್ಣು ಮಗು, ಅವರು ಹಿಂದೆ ಮದುವೆಯಾಗಿದ್ದ ಪತ್ನಿಗೆ ಮೂವರು ಗಂಡು ಮಕ್ಕಳಿದ್ದಾರೆ.

ಸಾಧ್ಯವಾದಷ್ಟು ಮನೆಯಲ್ಲಿ ಸಮಯ ಕಳೆಯಲು ಬಯಸುತ್ತೇನೆ. ಈಗಾಗಲೇ ನನ್ನ ಕೆಲಸದ ಹೊರೆಯನ್ನು ಕಡಿಮೆ ಮಾಡಿದ್ದೇನೆ.  ನನ್ನ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸುತ್ತೇನೆ ಎಂದು ಅವರು ತಿಳಿಸಿದ್ದಾರೆ. 

ಪ್ರಭು  ತಮ್ಮ ಸಮಯವನ್ನು ಮುಂಬೈ ಮತ್ತು ಚೆನ್ನೈ ನಡುವೆ ಹಂಚಿಕೆ ಮಾಡಿದ್ದಾರೆ. ಅವರು ಎರಡೂ ನಗರಗಳಲ್ಲಿ ನಿರ್ದೇಶಕ ಮತ್ತು ನಟರಾಗಿ ವೃತ್ತಿಜೀವನದ ಉತ್ತುಂಗದಲ್ಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com