ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಖ್ಯಾತ ಹಾಸ್ಯನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಜತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗುತ್ತಿದ್ದು, ಈ ಸುದ್ದಿ ಕಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ.
ಅರ್ಜುನ್ ಸರ್ಜಾ ಮೊದಲ ಪುತ್ರಿ ಐಶ್ವರ್ಯಾ ಮದುವೆ ಮ್ಯಾಟರ್ ಜೋರಾಗಿಯೇ ಹರಿದಾಡುತ್ತಿದೆ. ಐಶ್ವರ್ಯಾ ಅರ್ಜುನ್ ಹಾಗೂ ಉಮಾಪತಿ ರಾಮಯ್ಯ ಇಬ್ಬರೂ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ. ಈಗ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದು, ಮದುವೆ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. ಈ ಜೋಡಿ ಸಾಕಷ್ಟು ಸಮಯದಿಂದ ಡೇಟಿಂಗ್ ನಡೆಸುತ್ತಿತ್ತು. ಇಬ್ಬರ ಮನೆಯಲ್ಲಿ ಮದುವೆ ಮಾತುಕತೆ ನಡೆದಿದೆ ಎಂದು ಕನಕರಾಜ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.
ಅರ್ಜುನ್ ಸರ್ಜಾ ಹಾಗೂ ಹಿರಿಯ ಹಾಸ್ಯ ನಟ ತಂಬಿ ರಾಮಯ್ಯ ಇಬ್ಬರೂ ಮಕ್ಕಳ ಮದುವೆಗೆ ಅಸ್ತು ಎಂದಿದ್ದಾರೆ. ಯಾವುದೇ ಸಂದರ್ಭದಲ್ಲಾದರೂ ಈ ಖುಷಿ ವಿಷಯವನ್ನು ತಮ್ಮ ಅಭಿಮಾನಿಗಳಿಗೆ ತಿಳಿಸಬಹುದು ಎಂದು ಮಾಧ್ಯಮಗಳು ವರದಿ ಮಾಡಿವೆ. ಆದರೆ, ಎರಡೂ ಕುಟುಂಬಗಳು ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿಲ್ಲ.
80-90ರ ದಶಕದ ಪ್ರಮುಖ ನಾಯಕರಲ್ಲಿ ಒಬ್ಬರಾದ ಅರ್ಜುನ್ ಸರ್ಜಾ ಬಹುಭಾಷಾ ನಟ. 1998ರಲ್ಲಿ ಆಶಾ ರಾಣಿ ಅವರನ್ನು ವಿವಾಹವಾದರು. ಇವರಿಗೆ ಐಶ್ವರ್ಯ ಮತ್ತು ಅಂಜನಾ ಇಬ್ಬರು ಪುತ್ರಿಯರು. ʼಪ್ರೇಮ ಬರಹʼ ಸಿನಿಮಾ ಮೂಲಕ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಐಶ್ವರ್ಯ ಸರ್ಜಾ ಪದಾರ್ಪಣೆ ಮಾಡಿದರು.
ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ಜತೆಗೆ ಐಶ್ವರ್ಯ ತೆರೆ ಹಂಚಿಕೊಳ್ಳಲಿದ್ದಾರೆ. ಇದು ತೆಲುಗು ಸಿನಿಮಾವಾಗಿದೆ. ಅರ್ಜುನ್ ಸರ್ಜಾ ನಿರ್ಮಾಣ ಹಾಗೂ ನಿರ್ದೇಶನವಿದೆ.
Advertisement