ಟಾಲಿವುಡ್ 'ಪವರ್‌ಸ್ಟಾರ್' ಪವನ್ ಕಲ್ಯಾಣ್‌ಗೆ 'ಕಬ್ಜ' ನಿರ್ದೇಶಕ ಆರ್ ಚಂದ್ರು ಆ್ಯಕ್ಷನ್ ಕಟ್?

ಆರ್‌. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ರಿಲೀಸ್ ಆಗಿ ಭಾರೀ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡಲು ಶುರು ಮಾಡಿದೆ. ಇದೇ ವೇಳೆ ಆರ್‌. ಚಂದ್ರು ನಿರ್ದೇಶನದ ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸಲಿದ್ದಾರೆ ಎಂಬ  ಸುದ್ದಿ ಬಂದಿದೆ.
ಪವನ್ ಕಲ್ಯಾಣ್ ಜೊತೆ ಆರ್ ಚಂದ್ರು
ಪವನ್ ಕಲ್ಯಾಣ್ ಜೊತೆ ಆರ್ ಚಂದ್ರು
Updated on

ಆರ್‌. ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ರಿಲೀಸ್ ಆಗಿ ಭಾರೀ ಸದ್ದು ಮಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸದ್ದು ಮಾಡಲು ಶುರು ಮಾಡಿದೆ. ಇದೇ ವೇಳೆ ಆರ್‌. ಚಂದ್ರು ನಿರ್ದೇಶನದ ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸಲಿದ್ದಾರೆ ಎಂಬ  ಸುದ್ದಿ ಬಂದಿದೆ.

'ಕಬ್ಜ' ಸಿನಿಮಾ ನೋಡಿ ಟಾಲಿವುಡ್ ಪವರ್ ಸ್ಟಾರ್ ಮೆಚ್ಚಿಕೊಂಡಿದ್ದಾರೆ. ಮಧ್ಯರಾತ್ರಿ ಆರ್‌. ಚಂದ್ರು ಪವನ್ ಕಲ್ಯಾಣ್‌ಗೆ ಸಿನಿಮಾ ತೋರಿಸಿದ್ದಾರೆ. ಪವನ್ ಚಿತ್ರವನ್ನು ಮೆಚ್ಚಿ ಮಾತನಾಡಿದ್ದಾರಂತೆ. ಸಿನಿಮಾ ನೋಡಿ ಚಂದ್ರುನ ಹಾಡಿ ಹೊಗಳಿದ್ದಲ್ಲದೇ ಮೇಕಿಂಗ್, ಕಥೆ, ಚಿತ್ರಕಥೆ ಅದರಲ್ಲೂ ಕ್ಲೈಮಾಕ್ಸ್ ಬಗ್ಗೆ ಕೊಂಡಾಡಿದ್ದಾರೆ.

ಇದೆಲ್ಲದರ ನಡುವೆ ಆರ್. ಚಂದ್ರು ನಿರ್ದೇಶನದ ಚಿತ್ರದಲ್ಲಿ ಪವನ್ ಕಲ್ಯಾಣ್ ನಟಿಸುತ್ತಾರೆ ಎನ್ನುವ ಗುಸು ಗುಸು ಶುರುವಾಗಿದೆ. ಟಾಲಿವುಡ್‌ ಅಂಗಳದಲ್ಲಿ ಈ ಬಗ್ಗೆ ಚರ್ಚೆ ನಡೀತಿದೆ. ಆರ್‌. ಚಂದ್ರು ಪ್ಯಾನ್ ಇಂಡಿಯಾ ಸಿನಿಮಾ ಪ್ಲ್ಯಾನ್ ಮಾಡುತ್ತಿದ್ದು ಇದರಲ್ಲಿ ಪವರ್ ಸ್ಟಾರ್ ನಟಿಸುತ್ತಾರೆ ಎಂದು ಕೇಳಿ ಬಂದಿದೆ.

ನಿರ್ದೇಶಕರ ಕಡೆಯಿಂದ ಮಾಹಿತಿ  ನಿರೀಕ್ಷಿಸಲಾಗಿದ್ದು, ಈ ಪ್ರಾಜೆಕ್ಟ್ ಕುರಿತು ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ತಿಳಿದು ಬಂದಿದೆ. ಉಪೇಂದ್ರ, ಸುದೀಪ್ ಮತ್ತು ಶಿವರಾಜ್‌ಕುಮಾರ್  ನಟಿಸಿರುವ  ಕಬ್ದ  ಶುಕ್ರವಾರ ರಿಲೀಸ್ ಆಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com