‘ವಾಘಚಿಪಾಣಿ' ಒಂದು ವಿಶಿಷ್ಟ ದೃಶ್ಯ ಅನುಭವ ನೀಡಲಿದೆ: ನಿರ್ದೇಶಕ ನಟೇಶ್ ಹೆಗ್ಡೆ

ಇಂದಿನ ಡಿಜಿಟಲ್ ಯುಗದಲ್ಲಿ ಚಿತ್ರ ತಯಾರಕರು ಚಿತ್ರ ನಿರ್ಮಾಣದಲ್ಲಿ ಹಳೆಯ ವಿಧಾನ ಅನುಸರಿಸುವುದು ತೀರಾ ವಿಶೇಷ ಮತ್ತು ಅಸಹಜವಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪೆಡ್ರೊ ಚಿತ್ರದ ನಿರ್ದೇಶಕ ನಟೇಶ್ ಹೆಗ್ಡೆ ಅವರು ತಮ್ಮ ಮುಂದಿನ ಚಿತ್ರ ವಾಘಚಿಪಾಣಿಯ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ವಾಘಚಿಪಾಣಿ ಚಿತ್ರದ ದೃಶ್ಯ
ವಾಘಚಿಪಾಣಿ ಚಿತ್ರದ ದೃಶ್ಯ

ಇಂದಿನ ಡಿಜಿಟಲ್ ಯುಗದಲ್ಲಿ ಚಿತ್ರ ತಯಾರಕರು ಚಿತ್ರ ನಿರ್ಮಾಣದಲ್ಲಿ ಹಳೆಯ ವಿಧಾನ ಅನುಸರಿಸುವುದು ತೀರಾ ವಿಶೇಷ ಮತ್ತು ಅಸಹಜವಾಗಿದೆ. ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪೆಡ್ರೊ ಚಿತ್ರದ ನಿರ್ದೇಶಕ ನಟೇಶ್ ಹೆಗ್ಡೆ ಅವರು ತಮ್ಮ ಮುಂದಿನ ಚಿತ್ರ ವಾಘಚಿಪಾಣಿಯ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಇದರಲ್ಲಿ 16 ಎಂಎಂ ರೀಲ್ ಬಳಸಿ ಚಿತ್ರೀಕರಿಸಿರುವುದು ವಿಶೇಷವಾಗಿದೆ. ರಿಷಬ್ ಶೆಟ್ಟಿ ಫಿಲಂಸ್ ನಿರ್ಮಿಸಿರುವ ವಾಘಚಿಪಾಣಿ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.

16 ಎಂಎಂ ರೀಲ್‌ನಲ್ಲಿ ಚಿತ್ರೀಕರಣ ಮಾಡುವುದು ಕರೆನ್ಸಿ ನೋಟುಗಳನ್ನು ಬಳಸಿದಂತೆ. ಅದನ್ನು ಬಳಸುವ ಮೊದಲು ಸಾಕಷ್ಟು ಯೋಚಿಸಬೇಕು ಎಂದು ನಟೇಶ್ ಹೇಳುತ್ತಾರೆ. ನಾನು ನನ್ನ ಮೊದಲ ಚಿತ್ರ ಪೆಡ್ರೊದಲ್ಲಿ 16 ಎಂಎಂ ರೀಲ್‌ನಲ್ಲಿ ಚಿತ್ರೀಕರಣ ಮಾಡಬೇಕೆಂದು ಅಂದುಕೊಂಡಿದ್ದೆ. ಆದರೆ ನಾನು ಹೊಸದನ್ನು ಪ್ರಯತ್ನಿಸುವ ಮೊದಲು ಚಲನಚಿತ್ರ ನಿರ್ಮಾಣದ ಬಗ್ಗೆ ಅನುಭವ ಪಡೆದುಕೊಳ್ಳಲು ಬಯಸಿದೆ. ವಾಘಚಿಪಾಣಿಗೆ ಮೊದಲು ರಿಷಬ್ ಶೆಟ್ಟಿ ಅವರ ಬಳಿ ನನ್ನ ಆಸೆಯನ್ನು ಹೇಳಿದಾಗ ಅವರು ನನಗೆ ಒಪ್ಪಿಗೆ ಕೊಟ್ಟರು ಎನ್ನುತ್ತಾರೆ, ಕೊಡಾಕ್ ನಿಂದ ರೀಲ್ ಪಡೆದುಕೊಂಡಿದ್ದಾರೆ. 

ರೀಲ್‌ನಲ್ಲಿ ಚಿತ್ರೀಕರಣವು ಅದರ ನಿರ್ಬಂಧಗಳನ್ನು ಹೊಂದಿದ್ದರೂ, ಇದು ನಿಖರತೆ ಮತ್ತು ಸ್ಪಷ್ಟತೆಗೆ ಸಹಾಯ ಮಾಡುತ್ತದೆ ಎನ್ನುತ್ತಾರೆ ನಿರ್ದೇಶಕರು. "ಡಿಜಿಟಲ್‌ನಲ್ಲಿ ಚಿತ್ರೀಕರಣವು ಗಂಟೆಗಳ ವಿಷಯಕ್ಕೆ ಕಾರಣವಾಗಬಹುದು, ಆದರೆ 16 ಎಂಎಂ ಅದರ ಮಿತಿಗಳನ್ನು ಹೊಂದಿದೆ. ಲೊಕೇಶನ್‌ನಲ್ಲಿ ಏನನ್ನು ಚಿತ್ರೀಕರಿಸಲಾಗಿದೆ ಎಂಬುದನ್ನು ನಾವು ನೋಡಲಾಗುವುದಿಲ್ಲ, ಇದು ರೀಲ್ ನ್ನು ಅಭಿವೃದ್ಧಿಪಡಿಸುವವರೆಗೂ ನಮಗೆ ಕುತೂಹಲವನ್ನು ಉಳಿಸಿಕೊಳ್ಳುತ್ತದೆ. 

ವಾಘಚಿಪಾಣಿ ಎಂಬುದು ಒಂದು ಊರಿನ ಹೆಸರು, ಚಿತ್ರವು ಮಾನಸಿಕ ಅಸ್ವಸ್ಥ ಗರ್ಭಿಣಿ ಕುರುಬ ಮಹಿಳೆಯ ಸುತ್ತ ಸುತ್ತುತ್ತದೆ. ಸಿರ್ಸಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಅಚ್ಯುತ್ ಕುಮಾರ್, ದಿಲೀಶ್ ಪೋತನ್ ಮತ್ತು ಗೋಪಾಲ್ ಹೆಗ್ಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

16 ಎಂಎಂ ರೀಲ್‌ನಲ್ಲಿ ಚಿತ್ರೀಕರಣ ಉತ್ತಮ ಫಲಿತಾಂಶವನ್ನು ನೀಡಿದೆ ಮತ್ತು ಪ್ರೇಕ್ಷಕರು ಖಂಡಿತವಾಗಿಯೂ ವ್ಯತ್ಯಾಸವನ್ನು ಗಮನಿಸುತ್ತಾರೆ ಎಂದು ನಟೇಶ್ ನಂಬುತ್ತಾರೆ. ಚಿತ್ರದ ಆಳ ಮತ್ತು ತೀಕ್ಷ್ಣತೆಯು ಡಿಜಿಟಲ್‌ಗಿಂತ ಭಿನ್ನವಾಗಿದೆ. ಇದು ಪರದೆಯ ಮೇಲೆ ಅನನ್ಯ ಅನುಭವವನ್ನು ನೀಡುತ್ತದೆ ಎನ್ನುತ್ತಾರೆ. 

ಚಿತ್ರಕ್ಕೆ ಮಾರ್ಕ್ ಮಾರ್ಡರ್ ಅವರ ಸಂಗೀತವಿದೆ. ನಟೇಶ್ ಅವರೊಂದಿಗೆ ಪೆಡ್ರೊದಲ್ಲಿ ಕೆಲಸ ಮಾಡಿದ ಛಾಯಾಗ್ರಾಹಕ ವಿಕಾಸ್ ಅರಸ್ ಮತ್ತೊಮ್ಮೆ ಇದರಲ್ಲಿ ಕೂಡ ಕೈಚೋಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com