ಹಿರಿಯ ನಟ ಅನಂತ್ ನಾಗ್
ಹಿರಿಯ ನಟ ಅನಂತ್ ನಾಗ್

ಮೋದಿ ಪ್ರಧಾನಿಯಾದ ಮೇಲೆ ದೇಶದಲ್ಲಿ ಹೆಚ್ಚು ಅಭಿವೃದ್ಧಿ, ಬಿಪಿಎಲ್ ಎನ್ನುವ ಪದ ಬೇಗನೆ ನಿರ್ಮೂಲನೆ ಆಗಲಿ: ಅನಂತ್ ನಾಗ್

ಕನ್ನಡ ಚಿತ್ರರಂಗದ, ಸಮಾಜಮುಖಿ ಚಿಂತನೆ ಹೊಂದಿರುವ ನಟ ಎಂದು ಗುರುತಿಸಿಕೊಂಡಿರುವ ಹಿರಿಯ ನಟ ಅನಂತ್ ನಾಗ್ ಇಂದು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ್ದಾರೆ.
Published on

ಬೆಂಗಳೂರು: ಕನ್ನಡ ಚಿತ್ರರಂಗದ, ಸಮಾಜಮುಖಿ ಚಿಂತನೆ ಹೊಂದಿರುವ ನಟ ಎಂದು ಗುರುತಿಸಿಕೊಂಡಿರುವ ಹಿರಿಯ ನಟ ಅನಂತ್ ನಾಗ್ ಇಂದು ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಮಾತನಾಡಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳಾಗಿವೆ, ಮೂಲಭೂತ ಸೌಕರ್ಯಗಳು ಇಂದು ಎಲ್ಲರಿಗೂ ದೊರೆಯುತ್ತಿವೆ.

ನರೇಂದ್ರ ಮೋದಿಯವರು ಬಂದ ನಂತರವಂತೂ ಒಳ್ಳೆಯ ಅಭಿವೃದ್ಧಿ ಆಗುತ್ತಿವೆ. ಫ್ಲೈ ಓವರ್, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳು ಎಲ್ಲ ಬಹಳ ಚೆನ್ನಾಗಿ ಆಗುತ್ತಿವೆ. ಮೂಲಭೂತ ಸೌಕರ್ಯದಿಂದ ಮೇಲೆ ಹೋಗುವ ಪ್ರಯತ್ನ ನಾವು ಮಾಡಬೇಕು. ಪ್ರತಿಸಲವೂ ನಾವು ಸಾಲ ಮನ್ನಾ, ಉಚಿತ ರೇಷನ್​ ಇವುಗಳನ್ನು ದಾಟಿ ಮುಂದೆ ಹೋಗಬೇಕು ಎಂದಿದ್ದಾರೆ. ಆ ಮೂಲಕ ಪರೋಕ್ಷವಾಗಿ ಸಾಲ ಮನ್ನಾ ಮಾಡುವ, ಉಚಿತ ಅಕ್ಕಿ ನೀಡುವ ಭರವಸೆ ನೀಡುವ ಪಕ್ಷಗಳು ಮುಂದುವರಿದು ಚಿಂತಿಸಬೇಕಿದೆ ಎಂದು ಹೇಳಿದ್ದಾರೆ. 

ಯೂರೋಪ್, 27 ದೇಶಗಳ ಒಕ್ಕೂಟ, ಅವರು ಬಹಳ ಅಭಿವೃದ್ಧಿ ಸಾಧಿಸಿದ್ದಾರೆ. ಅವರು ಕೆಳಸ್ತರದಲ್ಲಿ ಇಲ್ಲ. ಬಿಪಿಎಲ್ ಎಂದು ಏನನ್ನು ಕರೀತೀವಿ ಅದು ಯೂರೋಪ್​ನಲ್ಲಿಲ್ಲ. ಅದೇ ರೀತಿಯ ಸ್ವರ್ಗ ನಮ್ಮಲ್ಲೂ ನಿರ್ಮಾಣ ಆಗಬೇಕು. ಬಡತನ ಸಂಪೂರ್ಣವಾಗಿ ನಿರ್ನಾಮವಾಗಬೇಕು, ಅಂತಹ ಸಮಯ ಬೇಗ ಬರಲಿ ಎಂದು ನಾನು ಆಶಿಸುತ್ತೇನೆ, ಯೂರೋಪ್ ಮಾದರಿಯಲ್ಲಿ ನಾವು ಬೆಳೆಯಬೇಕು, ಬಿಲೋ ಪವರ್ಟಿ ಲೈನ್ ಎನ್ನುವ ಪದವೇ ಇರಬಾರದು ಎಂದರು.

ನಿನ್ನೆಯಿಂದ ನಾವು ನೋಡುತ್ತಿದ್ದೇವೆ ನಮ್ಮ ಪಕ್ಕದ ದೇಶದಲ್ಲಿ ಏನಾಗುತ್ತಿದೆ ಎಂದು. ಎಷ್ಟು ಗಲಾಟೆಗಳು ಆಗುತ್ತಿವೆ ಎಂದು. ಅದಕ್ಕೆ ಹೋಲಿಸಿಕೊಂಡರೆ ನಾವು ಬಹಳ ಚೆನ್ನಾಗಿದ್ದೇವೆ, ಗಟ್ಟಿಯಾದ ಪ್ರಜಾಪ್ರಭುತ್ವದ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬಂಧನ ಹಿನ್ನೆಲೆಯಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ಮಾತನಾಡಿದ್ದಾರೆ. 

ಇತ್ತೀಚೆಗೆ ಅನಂತ್ ನಾಗ್ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂದು ಸುದ್ದಿಯಾಗಿತ್ತು. ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿದರು. ಅನಂತ್​ನಾಗ್ ಅವರು ಬಿಜೆಪಿ ಬೆಂಬಲಿಗರಾಗಿದ್ದು, ತಾವು ಮೋದಿಯವರ ಅಭಿಮಾನಿ ಎಂದು ಈ ಹಿಂದೆಯೂ ಹಲವು ಬಾರಿ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com