'ವಾಗರಹ' ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ತಿಲಕ್

'ಗಂಡ ಹೆಂಡತಿ' ಮತ್ತು ಉಗ್ರಂ ಖ್ಯಾತಿಯ ನಟ ತಿಲಕ್ ಶೇಖರ್ ಅವರು ವಾಗರಹ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಅದರ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ. 
ತಿಲಕ್
ತಿಲಕ್
Updated on

'ಗಂಡ ಹೆಂಡತಿ' ಮತ್ತು ಉಗ್ರಂ ಖ್ಯಾತಿಯ ನಟ ತಿಲಕ್ ಶೇಖರ್ ಅವರು ವಾಗರಹ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಮತ್ತು ಅದರ ಬಗ್ಗೆ ಸಾಕಷ್ಟು ಉತ್ಸುಕರಾಗಿದ್ದಾರೆ. 

"ನಾನು ಈ ಹಿಂದೆ ಪೋಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ, ಆದರೆ ಈ ಬಾರಿಯ ಪೊಲೀಸ್ ಅಧಿಕಾರಿಯ ಪಾತ್ರ ತುಂಬಾ ಆಸಕ್ತಿದಾಯಕವಾಗಿದೆ. ಅಶುತೋಷ್ ಪವಾರ್ ಈ ಕಥೆ ಬರೆದಿದ್ದಾರೆ. ಚಿತ್ರದ ಕಥಾವಸ್ತು ಮಾದಕ ದ್ರವ್ಯ ತಂಡ ಮತ್ತು ಪೊಲೀಸ್ ಇಲಾಖೆಯ ನಡುವಿನ ತೀವ್ರವಾದ ಮುಖಾಮುಖಿಯ ಸುತ್ತ ಸುತ್ತುತ್ತದೆ” ಎಂದು ತಿಲಕ್ ಹೇಳಿದ್ದಾರೆ.

ಹೊಸ ತಂಡದೊಂದಿಗೆ ಕೆಲಸ ಮಾಡುತ್ತಿರುವುದು ಖುಷಿ ತಂದಿದೆ ಎಂದ ತಿಲಕ್, “ಇಂದಿನ ಪೀಳಿಗೆಯು ಕಮರ್ಷಿಯಲ್ ಅಂಶಗಳತ್ತ ಗಮನಹರಿಸುತ್ತಿಲ್ಲ. ಅವರು ಪ್ರೇಕ್ಷಕರಿಗೆ ಹೊಸದನ್ನು ನೀಡಲು ಬಯಸುತ್ತಾರೆ. ಸಿನಿಮಾ ನಿರ್ಮಾಣದಲ್ಲಿ ಈಗ ಬಹಳಷ್ಟು ಬದಲಾಗಿದೆ. ಇಂದಿನ ನಿರ್ದೇಶಕರು ವಾಸ್ತವಿಕ ವಿಷಯಗಳೊಂದಿಗೆ ಪ್ರಯೋಗ ಮಾಡುತ್ತಿದ್ದಾರೆ ಎಂದಿದ್ದಾರೆ.

ವಾಗರಹ ಎಂದರೆ ಒಂಟಿ ತೋಳ ಎಂದು ಅರ್ಥ. ಅಶುತೋಷ್ ಅವರು ಈ ಚಿತ್ರದ ಮೂಲಕ ನಿರ್ಮಾಪಕರಾಗಿ ಬಡ್ತಿ ಪಡೆಯುತ್ತಿದ್ದಾರೆ ಮತ್ತು ಅವರು ಅಶುತೋಷ್ ಪವನ್ ಮೀಡಿಯಾವರ್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದಾರೆ.

ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದರೆ, ಮಫ್ತಿ ಖ್ಯಾತಿಯ ನವೀನ್ ಕುಮಾರ್ ಛಾಯಾಗ್ರಹಣ ನೀಡಲಿದ್ದಾರೆ.

ಈ ಚಿತ್ರದ ಹೊರತಾಗಿ, ತಿಲಕ್ ಅವರು ದ್ವಂದ್ವ ಮತ್ತು ಗ್ಯಾಂಗ್‌ಸ್ಟರ್ ಅಲ್ಲಾ ಪ್ರಾಂಕ್‌ಸ್ಟರ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com