ನನ್ನ ಇಬ್ರು ಹೆಣ್ಣು ಮಕ್ಕಳು ಗಂಡಂದಿರಿಗೆ ಡಿವೋರ್ಸ್ ಕೊಟ್ಟು ನಿತ್ಯಾನಂದನ ಜೊತೆಗಿದ್ದಾರೆ: ಹಿರಿಯ ನಟನ ಅಳಲು

ದಕ್ಷಿಣ ಭಾರತದ ಹಿರಿಯ ನಟ ಅಶೋಕ್ ಕುಮಾರ್ ಅವರು ನಿತ್ಯಾನಂದ ಸ್ವಾಮಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನನ್ನ ಇಬ್ಬರೂ ಮಕ್ಕಳು ನಿತ್ಯಾನಂದ ಸ್ವಾಮಿ ಜೊತೆ ಇರೋದಾಗಿ ಅಸಲಿ ವಿಚಾರವನ್ನ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
ನಿತ್ಯಾನಂದ
ನಿತ್ಯಾನಂದ

ದಕ್ಷಿಣ ಭಾರತದ ಹಿರಿಯ ನಟ ಅಶೋಕ್ ಕುಮಾರ್ ಅವರು ನಿತ್ಯಾನಂದ ಸ್ವಾಮಿ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ನನ್ನ ಇಬ್ಬರೂ ಮಕ್ಕಳು ನಿತ್ಯಾನಂದ ಸ್ವಾಮಿ ಜೊತೆ ಇರೋದಾಗಿ ಅಸಲಿ ವಿಚಾರವನ್ನ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.

ಪುಟ್ಟಣ್ಣ ಕಣಗಾಲ್ ಅವರ ಆಪ್ತ ಅಶೋಕ್ ಕುಮಾರ್ ಅವರು ತೆಲುಗಿನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ, ಪೋಷಕನಟ, ವಿಲನ್ ಆಗಿ ಜೀವತುಂಬಿದ್ದಾರೆ. ಅವಕಾಶ, ಸಕ್ಸಸ್ ಸಿಗದೇ ಇರೋ ಕಾರಣ ಚಿತ್ರರಂಗದಿಂದ ದೂರ ಸರಿದ್ದರು. ಇದೀಗ ಅಶೋಕ್ ಅವರು, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿದ್ದಾರೆ.

85 ವರ್ಷ ವಯಸ್ಸಿನ ಅಶೋಕ್ ಕುಮಾರ್, ವಧು ನೋಡದೇ ಮದುವೆಯಾಗಿದ್ರಂತೆ. ಆಕೆ ಇಷ್ಟವಿಲ್ಲದೇ ಕುಟುಂಬದವರ ಮಾತಿಗೆ ಕಟ್ಟುಬಿದ್ದು ಮದುವೆಯಾದೆ. ನಮಗೆ ಮೂರು ಜನ ಹೆಣ್ಣು ಮಕ್ಕಳು, ಅವರು ಇಷ್ಟಪಟ್ಟರ ಜೊತೆ ಮದುವೆ ಮಾಡಿಸಿಕೊಟ್ಟೆ, ನನ್ನ ಮೊದಲನೇ ಮಗಳು ಅಮೆರಿಕಾದಲ್ಲಿ ಇದ್ದಾಳೆ.

ಅವಳು ಆಗಾಗ ನಿತ್ಯಾನಂದ ಸ್ವಾಮಿ ಆಶ್ರಮಕ್ಕೆ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ನನ್ನ 2ನೇ ಮಗಳು ರಂಜಿತಾ ಹೋಗಲು ಆರಂಭಿಸಿದ್ದಳು. ನಿತ್ಯಾನಂದ ಸ್ವಾಮಿ ಜೊತೆ ನನ್ನ ಮಗಳು ರಂಜಿತಾ ಇದ್ದಾಳೆ ಅಂತಾ ಜನ ಹೇಳ್ತಾರೆ. ರಂಜಿತಾ- ನಿತ್ಯಾನಂದು ನಡುವಿನ ರಿಲೇಷನ್‌ಶಿಪ್ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಆ ಫೋಟೋಗಳನ್ನ ನೋಡಿದರೆ ಏನೋ ಹೇಳಬೇಕೋ ಗೊತ್ತಾಗುತ್ತಿಲ್ಲ.

ನನ್ನ ಇಬ್ಬರು ಮಕ್ಕಳು ಗಂಡಂದಿರಿಗೆ ಡಿವೋರ್ಸ್ ನೀಡಿ, ನಿತ್ಯಾನಂದ ಸ್ವಾಮಿ ಆಶ್ರಮ ಸೇರಿದ್ದಾರೆ. ಇವತ್ತಿಗೂ ಅವರು ಅಲ್ಲೇ ಇದ್ದಾರೆ ಎಂದು ನಟ ಅಶೋಕ್ ಕುಮಾರ್ ಕಣ್ಣೀರಿಟ್ಟಿದ್ದಾರೆ. ಇಂದಿಗೂ ನನ್ನ ಇಬ್ಬರೂ ಮಕ್ಕಳು ಕರೆ ಮಾಡಲಿಲ್ಲ. ನಮ್ಮ 3ನೇ ಮಗಳು ನನ್ನನ್ನೂ ನೋಡಿಕೊಳ್ತಿದ್ದಾರೆ. ಇಬ್ಬರು ಮಕ್ಕಳು ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರು ಎಂದು ಭಾವುಕರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com