ಪುನೀತ್ ರಾಜ್‌ಕುಮಾರ್ ಅಗಲಿಕೆಯ ನೋವಿನಿಂದ ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಇನ್ನು ದೊಡ್ಮನೆ ಸದಸ್ಯರಿಗೆ ಆ ನೋವು ನೂರು ಪಟ್ಟು ಹೆಚ್ಚಿದೆ. ರಾಘಣ್ಣ ಸಹೋದರನ ನೆನಪಿನಲ್ಲೇ ದಿನದೂಡುತ್ತಿದ್ದಾರೆ. ಇದೀಗ ಸಹೋದರನ ಹೆಸರನ್ನು ಎದೆಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
ರಾಘಣ್ಣ ಎದೆಯ ಮೇಲೆ ಅಪ್ಪು, ಟೊಟೊ ಮತ್ತು ನುಕ್ಕಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾರೆ. ಪವರ್ ಸ್ಟಾರ್ ದೊಡ್ಡ ಮಗಳು ವಂದಿತಾ ಅವರನ್ನು ಪ್ರೀತಿಯಿಂದ ಟೊಟೊ ಎಂದು ಕರೆಯುತ್ತಾರೆ. ಎರಡನೇ ಮಗಳು ಧೃತಿ ಅವರನ್ನು ನುಕ್ಕಿ ಎಂದು ಕರೆಯುತ್ತಾರೆ. ನಿಕ್ ನೇಮ್ ಅನ್ನೇ ಎದೆಯ ಮೇಲೆ ಹಾಕಿಸಿಕೊಂಡಿದ್ದಾರೆ ರಾಘವೇಂದ್ರ ರಾಜ್ ಕುಮಾರ್.
ಅಪ್ಪು ಪ್ರೀತಿಯ ಸಹೋದರರಾದ ರಾಘವೇಂದ್ರ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಯಾವುದೇ ಕಾರ್ಯಕ್ರಮ ಅಥವಾ ಸಮಾರಂಭಗಳಲ್ಲಿ ತಮ್ಮನನ್ನು ನೆನೆದು ಕಣ್ಣೀರು ಹಾಕುತ್ತಾರೆ. ತಮ್ಮನ ನೆನಪುಗಳಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ
ಅಪ್ಪು ಜೊತೆಗೆ ಅವರ ಮಕ್ಕಳಾದ ಧೃತಿ, ವಂದಿತಾ ಮುದ್ದಿನ ಹೆಸರನ್ನು ಕೂಡ ಎದೆ ಮೇಲೆ ಅಚ್ಚೆ ಹಾಕಿಸಿಕೊಂಡಿದ್ದಾರೆ. ಅಪ್ಪು ಅಗಲಿಕೆಯ ಆಘಾತ ಹೆಚ್ಚು ಆಗಿದ್ದು ರಾಘಣ್ಣನಿಗೆ. ಪ್ರತಿಬಾರಿ ಸಹೋದರನ ಬಗ್ಗೆ ಮಾತನಾಡುವಾಗ ರಾಘಣ್ಣ ಭಾವುಕರಾಗುತ್ತಾರೆ. ಪ್ರತಿದಿನ ಅಪ್ಪು ಫೋಟೊ ಇರುವ ಬ್ಯಾಡ್ಜ್ ಅನ್ನು ರಾಘಣ್ಣ ಧರಿಸುತ್ತಾ ಬರುತ್ತಿದ್ದಾರೆ. ಇದೀಗ ತಮ್ಮ ಎದೆ ಮೇಲೆ ಅಪ್ಪು ಟ್ಯಾಟೂ ಹಾಕಿಸಿಕೊಂಡು ಸಹೋದರನನ್ನು ತಮ್ಮ ಎದೆಯಲ್ಲಿ ಇಟ್ಟುಕೊಂಡಿದ್ದಾರೆ.
Advertisement