ಕಪ್ಪೆ ರಾಗ: ಕಪ್ಪೆಯ ಕುರಿತಾದ ವಿಶಿಷ್ಟ ಸಂಗೀತ ಸಾಕ್ಷ್ಯಚಿತ್ರಕ್ಕೆ ಅಂತಾರಾಷ್ಟ್ರೀಯ ಮನ್ನಣೆ

ಇದೊಂದು ವಿಶಿಷ್ಟ ರೀತಿಯ ಸಂಗೀತ ವಿಡಿಯೊ- ಕಪ್ಪೆ ರಾಗ, ಕುಂಬಾರ ಕಪ್ಪೆ ಅಥವಾ ರಾತ್ರಿ ಕಪ್ಪೆ ಹಾಡು ಅಮೆರಿಕದ ಪ್ರತಿಷ್ಠಿತ ಲಾಸ್ ಏಂಜಲೀಸ್‌ನ ಇಂಡಿಪೆಂಡೆಂಟ್ ಶಾರ್ಟ್ಸ್ ಅವಾರ್ಡ್‌ನಲ್ಲಿ ಅತ್ಯುತ್ತಮ ಸಂಗೀತ ವೀಡಿಯೊಗಾಗಿ ಚಿನ್ನದ ಪ್ರಶಸ್ತಿಯನ್ನು ಗೆದ್ದಿದೆ. 
ಪಶ್ಚಿಮ ಘಟ್ಟದ ಕುಗ್ರಾಮದಲ್ಲಿ ಯಾತ್ರೆ ನಂತರ ಫೋಟೋಗೆ ಫೋಸ್ ನೀಡಿದ ಚಿತ್ರತಂಡ
ಪಶ್ಚಿಮ ಘಟ್ಟದ ಕುಗ್ರಾಮದಲ್ಲಿ ಯಾತ್ರೆ ನಂತರ ಫೋಟೋಗೆ ಫೋಸ್ ನೀಡಿದ ಚಿತ್ರತಂಡ
Updated on

ಹುಬ್ಬಳ್ಳಿ: ಇದೊಂದು ವಿಶಿಷ್ಟ ರೀತಿಯ ಸಂಗೀತ ವಿಡಿಯೊ- ಕಪ್ಪೆ ರಾಗ, ಕುಂಬಾರ ಕಪ್ಪೆ ಅಥವಾ ರಾತ್ರಿ ಕಪ್ಪೆ ಹಾಡು ಅಮೆರಿಕದ ಪ್ರತಿಷ್ಠಿತ ಲಾಸ್ ಏಂಜಲೀಸ್‌ನ ಇಂಡಿಪೆಂಡೆಂಟ್ ಶಾರ್ಟ್ಸ್ ಅವಾರ್ಡ್‌ನಲ್ಲಿ ಅತ್ಯುತ್ತಮ ಸಂಗೀತ ವೀಡಿಯೊಗಾಗಿ ಚಿನ್ನದ ಪ್ರಶಸ್ತಿಯನ್ನು ಗೆದ್ದಿದೆ. 

ಇನ್ನಷ್ಟೇ ಬಿಡುಗಡೆಯಾಗಬೇಕಿರುವ ಸಾಕ್ಷ್ಯಚಿತ್ರವು 13 ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವ 2023 ರಲ್ಲಿ ಅತ್ಯುತ್ತಮ ಸಂಗೀತ ವೀಡಿಯೊ ತೀರ್ಪುಗಾರರ ಪ್ರಶಸ್ತಿಯನ್ನು ಗೆದ್ದಿದೆ.

ಮ್ಯೂಸಿಕ್ ವೀಡಿಯೋದಲ್ಲಿ, ಹೊಸದಾಗಿ ಪತ್ತೆಯಾದ ಕುಂಬಾರ ರಾತ್ರಿ ಕಪ್ಪೆಯನ್ನು ಮೊದಲ ಬಾರಿಗೆ ಸಂಗೀತ ಸ್ವರೂಪದಲ್ಲಿ ಜಗತ್ತಿಗೆ ಪರಿಚಯಿಸುತ್ತದೆ, ಕಪ್ಪೆಯ ವಿಶಿಷ್ಟ ನಡವಳಿಕೆ ಮತ್ತು ಪ್ರವೃತ್ತಿಯನ್ನು ಪ್ರದರ್ಶಿಸುವ ಕಥೆಯೊಂದಿಗೆ.

ನಿರ್ದೇಶಕ ಪ್ರಶಾಂತ್ ಎಸ್ ನಾಯಕ, ನಿರ್ಮಾಪಕ, ಸಂಶೋಧಕ ಗಿರೀಶ್ ಜನ್ನಿ ಅವರು ಭಾರತೀಯ ಪಶ್ಚಿಮ ಘಟ್ಟಗಳಲ್ಲಿ ತಮ್ಮ ಅನ್ವೇಷಣೆಯ ಸಮಯದಲ್ಲಿ ಕುಂಬಾರ ರಾತ್ರಿ ಕಪ್ಪೆಯನ್ನು ಕಂಡು ಅದನ್ನು ಸಂಗೀತ ಮೂಲಕ ಜಗತ್ತಿಗೆ ಪರಿಚಯಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಕುಂಬಾರ ಕಪ್ಪೆ ಭಾರತೀಯ ಪಶ್ಚಿಮ ಘಟ್ಟಗಳ ಜೌಗು ಕಾಡುಗಳಿಗೆ ಸ್ಥಳೀಯವಾಗಿ ಹೊಂದಿಕೊಳ್ಳುವ ಕಪ್ಪೆ ಆಗಿದೆ, ಇದು ವಿಶಿಷ್ಟವಾದ ಪ್ರವೃತ್ತಿಯನ್ನು ಹೊಂದಿದೆ. ಸಂತಾನೋತ್ಪತ್ತಿ ಮಾಡುವಾಗ, ಹೆಣ್ಣು ಕಪ್ಪೆಯ ಬೆನ್ನಿನ ಮೇಲೆ ಗಂಡು ಕಪ್ಪೆ ಕುಳಿತು ಲೈಂಗಿಕ ಕ್ರಿಯೆ ನಡೆಸಿ ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತದೆ. ನಂತರ ತಾಯಿಯು ಮೊಟ್ಟೆ ಮತ್ತು ಗಂಡು ಕಪ್ಪೆಯನ್ನು ಬಿಟ್ಟು ನೀರಿಗೆ ಹೋಗುತ್ತದೆ.

ಸಿಹಿನೀರಿನ ಏಡಿಗಳು ಮತ್ತು ಇತರ ಪರಭಕ್ಷಕಗಳಿಂದ ಮೊಟ್ಟೆಗಳನ್ನು ರಕ್ಷಿಸಲು ಕಾಳಜಿಯುಳ್ಳ ಗಂಡು ಕುಂಬಾರ ಕಪ್ಪೆ ಮೊಟ್ಟೆಯ ಕ್ಲಚ್‌ನ ಹತ್ತಿರ ಹೋಗಿ ಕೆಳಗಿನ ಹೊಳೆಯಿಂದ ತೆಗೆದ ಮಣ್ಣಿನಿಂದ ಅವುಗಳನ್ನು ಪ್ಲ್ಯಾಸ್ಟರ್ ಮಾಡುತ್ತದೆ. ಸುತ್ತಲಿನ ಮಣ್ಣಿನ ಅವಶೇಷಗಳಿಂದ ಮೊಟ್ಟೆಗಳನ್ನು ರಕ್ಷಿಸುತ್ತದೆ. ಈ ರೀತಿ ಮಾಡುವುದು ವಿಶ್ವದ ಏಕೈಕ ಕಪ್ಪೆ ಪ್ರಭೇದ. ಈ ವಿಶಿಷ್ಟ ನಡವಳಿಕೆಯ ಕಪ್ಪೆಯ ಕಥೆಯನ್ನು ಜಗತ್ತಿಗೆ ಮತ್ತು ಮುಖ್ಯವಾಗಿ ಈ ಹೊಳೆಯ ಸುತ್ತ ವಾಸಿಸುವ ಜನರಿಗೆ ಹೇಳಲು ನಾನು ಕಾತರನಾದೆ ಎಂದು ಪ್ರಶಾಂತ್ ಎಸ್ ನಾಯ್ಕ ಹೇಳಿದರು.

ಕುಗ್ರಾಮಗಳಲ್ಲಿ, ಅರಣ್ಯ ಭಾಗಗಳಲ್ಲಿ ವಾಸಿಸುವ ಜನರು ಮಾಧ್ಯಮ ಮತ್ತು ಸಾಕ್ಷ್ಯಚಿತ್ರಗಳು ಅವರಿಗೆ ಹೊಸದು. ದುರದೃಷ್ಟವಶಾತ್ ಅನೇಕ ಸಾಕ್ಷ್ಯಚಿತ್ರಗಳು ಸ್ಥಳೀಯ ಭಾಷೆಗಳಲ್ಲಿ ಬಾರದೆ ಜನರಿಗೆ ತಲುಪುವುದಿಲ್ಲ, ಇದು ಅವರಿಗೆ ಅರ್ಥಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಸಂಗೀತದ ಮೂಲಕ ಹೆಚ್ಚು ಜನರಿಗೆ ಬೇಗನೆ ತಲುಪಬಹುದು ಎಂದು ನಾನು ಕುಂಬಾರ ಕಪ್ಪೆಯನ್ನು ಜಾನಪದ ಸಂಗೀತ ರೂಪದಲ್ಲಿ ಪರಿಚಯಿಸಲು ನಿರ್ಧರಿಸಿದೆ, ಜೊತೆಗೆ ಕಥಾಹಂದರಕ್ಕೆ ಪೂರಕವಾದ ಸಾಹಿತ್ಯದೊಂದಿಗೆ ಪ್ರೇಕ್ಷಕರಿಗೆ ಮಾನವ ಭಾವನೆಗಳು ಮತ್ತು ಹತ್ತಿರವಾಗುವ ಅಂಶಗಳನ್ನು ಸೇರಿಸಿದೆ ಎನ್ನುತ್ತಾರೆ. 

ಸಂಗೀತ ಸಾಕ್ಷ್ಯಚಿತ್ರವನ್ನು ಗೌತಮ್ ಶಂಕರ್ ನಿರ್ಮಿಸಿದ್ದಾರೆ, ಅಶ್ವಿನ್ ಪಿ ಕುಮಾರ್ ಸಂಗೀತ ನೀಡಿದ್ದಾರೆ. ಚಿತ್ರದ ಚಿತ್ರೀಕರಣವನ್ನು ಹುಬ್ಬಳ್ಳಿಯ ವಿಕಾಸ್ ಪಾಟೀಲ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com