ರಮೇಶ್ ಅರವಿಂದ್ ಕೈಗೆ ಲಾಂಗ್ ಕೊಟ್ಟ ಜೋಗಿ ಪ್ರೇಮ್: ಕೆ.ಡಿ ಸಿನಿಮಾದ 'ಧರ್ಮ' ಲುಕ್ ರಿವೀಲ್!

ಪ್ರೇಮ್ ನಿರ್ದೇಶನದ ಕೆ.ಡಿ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಅಭಿನಯಿಸುತ್ತಾರೆ ಎಂಬ ವಿಷಯ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು, ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ ರಮೇಶ್ ಧರ್ಮ ಪಾತ್ರದಲ್ಲಿ ನಟಿಸಿದ್ದಾರೆ.
ಕೆ.ಡಿ ಸಿನಿಮಾ ಸ್ಟಿಲ್
ಕೆ.ಡಿ ಸಿನಿಮಾ ಸ್ಟಿಲ್
Updated on

ಪ್ರೇಮ್ ನಿರ್ದೇಶನದ ಕೆ.ಡಿ ಸಿನಿಮಾದಲ್ಲಿ ನಟ ರಮೇಶ್ ಅರವಿಂದ್ ಅಭಿನಯಿಸುತ್ತಾರೆ ಎಂಬ ವಿಷಯ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಲೇ ಇತ್ತು, ಧ್ರುವ ಸರ್ಜಾ ನಾಯಕನಾಗಿ ನಟಿಸುತ್ತಿರುವ ಚಿತ್ರದಲ್ಲಿ ರಮೇಶ್ ಧರ್ಮ ಪಾತ್ರದಲ್ಲಿ ನಟಿಸಿದ್ದಾರೆ.

ಸಿನಿಮಾದಲ್ಲಿನ ಅವರ ಪಾತ್ರದ ಲುಕ್ ರಿವೀಲ್ ಆಗಿದೆ. ಡಿಫರೆಂಟ್ ಆಗಿ ರಮೇಶ್ ಅರವಿಂದ್ ಕಾಣಿಸಿಕೊಂಡಿದ್ದಾರೆ.‌ ರಮೇಶ್‌ ನಟಿಸಿರುವ ಧರ್ಮ ಪಾತ್ರದ ಲುಕ್‌ ಈಗ ರಿವೀಲ್‌ ಆಗಿದೆ. ರಮೇಶ್ ಅರವಿಂದ್‌ಗೆ, ವೈವಿಧ್ಯಮಯ ಪಾತ್ರಗಳಲ್ಲಿ ಕೆಲಸ ಮಾಡುವುದು ಹೊಸದಲ್ಲ, ಆದರೆ ಅವರು ಮಲ್ಟಿ-ಸ್ಟಾರ್‌ನ ಭಾಗವಾಗಿ ಕೆಲಸ ಮಾಡಿ ಸ್ವಲ್ಪ ಸಮಯವಾಗಿದೆ.

ಬಹು ತಾರಾಗಣದಲ್ಲಿ ಪಾತ್ರಗಳನ್ನು ಒಪ್ಪಿಕೊಳ್ಳುವುದು ಸ್ವಲ್ಪ ಟ್ರಿಕಿ, ಆದರೆ ನುರಿತ ಕಲಾವಿದರೊಂದಿಗೆ ನಟಿಸುವುದು ಒಂದು ಹೊಸ ಅನುಭವ ನೀಡುತ್ತದೆ ಎಂದಿದ್ದಾರೆ. ಪ್ರೇಮ್ ಅವರ ಚಿತ್ರ ಕೆಡಿ, ರವಿಚಂದ್ರನ್, ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಮುಂತಾದವರು ಅಭಿನಯಿಸಿದ್ದಾರೆ.

ಅಮರ್ ಅಕ್ಭರ್ ಆಂಟೋನಿಯಂತಹ ಆಕರ್ಷಕ ತಾರಾಗಣದೊಂದಿಗೆ ನಾವು  ಸಿನಿಮಾಗಳನ್ನು ನೋಡಿದ ಸಂದರ್ಭಗಳಿವೆ.  ಶಂಕರ್ ನಾಗ್, ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರಂತಹ ನಟರಿದ್ದ ಬಹು ತಾರಾಗಣದ ಸಿನಿಮಾದಲ್ಲಿ, ಅವರನ್ನು ದೊಡ್ಡ ಪರದೆಯ ಮೇಲೆ ನೋಡುವ  ಆನಂದವೇ ಬೇರೆ. ನಾನೂ ಸಹ ಅನೇಕ ಮಲ್ಟಿಸ್ಟಾರರ್‌ ಸಿನಿಮಾಗಳ ಭಾಗವಾಗಿದ್ದೇನೆ. ಆದರೆ, ಹತ್ತು ವರ್ಷಗಳಿಂದ ಬಹುತಾರಾಗಣವಿರುವ ಸಿನಿಮಾವನ್ನು ನಾನು ಕೈಗೆತ್ತಿಕೊಂಡಿಲ್ಲ ಎಂದು  ರಮೇಶ್ ಅರವಿಂದ್ ತಿಳಿಸಿದ್ದಾರೆ.

ನಿರ್ದೇಶಕ ಪ್ರೇಮ್ ಪಾತ್ರದ ಬಗ್ಗೆ ಹೇಳಿದಾಗ ನನಗೆ ಕುತೂಹಲ ಹುಟ್ಟಿತು. ನಾನು ಕೆಲವೇ ದಿನಗಳ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದೇನೆ , ಪ್ರೇಮ್ಮ ಎಮೋಶನಲ್  ನಿರ್ದೇಶಕರಾಗಿದ್ದಾರೆ. ಕೆವಿಎನ್ ಉತ್ತಮ ಪ್ರೊಡಕ್ಷನ್ ಹೌಸ್ ಆಗಿದೆ , ಈ ರೀತಿಯ ದೊಡ್ಡ-ಬಜೆಟ್ ಸಿನಿಮಾ ಭಾಗವಾಗಿರುವುದು ಖುಷಿಯ ಸಂಗತಿಯಾಗಿದೆ. ಇದಲ್ಲದೆ, ಎಲ್ಲಾ ಪಾತ್ರಗಳು ಆನ್-ಸ್ಕ್ರೀನ್ ಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ.

ಧರ್ಮ ಪಾತ್ರದ ತನ್ನ ರೆಟ್ರೊ ಲುಕ್‌ ಬಗ್ಗೆ ರಮೇಶ್ ಮಾತನಾಡಿದ್ದಾರೆ, ಚಿತ್ರವು 1970 ರ ದಶಕದ ಕತೆ ಹೊಂದಿದೆ.  ನಟ ರಮೇಶ್ ಅರವಿಂದ್ ಸಖತ್ ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಲಾಂಗ್ ಹಿಡಿದು ಎಂಟ್ರಿ ಕೊಟ್ಟಿದ್ದಾರೆ. ಈ ಹಿಂದೆ ಎಂದೂ ಅವರು ಲಾಂಗ್ ಹಿಡಿದಿಲ್ಲ. ಆದರೆ ಜೋಗಿ ಪ್ರೇಮ್, ಮೊದಲ ಬಾರಿಗೆ ರಮೇಶ್ ಕೈಯಲ್ಲಿ ಲಾಂಗ್ ಹಿಡಿಸಿದ್ದಾರೆ. ‘ಕೆ.ವಿ.ಎನ್‌. ಪ್ರೊಡಕ್ಷನ್ಸ್ ಮತ್ತು ಪ್ರೇಮ್ ಅವರ ‘K.D’ ಚಿತ್ರದಲ್ಲಿ ‘ಧರ್ಮ’ ಪಾತ್ರದಲ್ಲಿ, ಅನೇಕ ಅದ್ಭುತ ಪ್ರತಿಭೆಗಳೊಂದಿಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ

ನನ್ನ ಕಾಲೇಜು ದಿನಗಳಲ್ಲಿ ನನಗೆ ಅಂತಹದ್ದೇ ಒಂದು ಲುಕ್ ಇತ್ತು. ಅದು ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರು ಆ ದಿನಗಳ ಸಿನಿಮಾಗಳಲ್ಲಿ ಉದ್ದನೆಯ ಕೂದಲು ಮತ್ತು ಬೆಲ್-ಬಾಟಮ್ ಪ್ಯಾಂಟ್ ಹಾಕುತ್ತಿದ್ದರು, ಆ ಯುಗ ಮರುಕಳಿಸುತ್ತಿರುವುದು ನನಗೆ ಸಂತೋಷವಾಗಿದೆ ಎಂದು ರಮೇಶ್ ಹೇಳುತ್ತಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com