ಮತ್ತೊಂದು ವಿವಾದದಲ್ಲಿ 'ಬಿಗ್ ಬಾಸ್ 10' ಸ್ಪರ್ಧಿ ವರ್ತೂರ್ ಸಂತೋಷ್!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಬಿಗ್ ಬಾಸ್ 10 ಸೀಸನ್ ನಲ್ಲಿ ಸ್ಪರ್ಧಿಯಾಗಿರುವ ಕೃಷಿಕ ವರ್ತೂರ್ ಸಂತೋಷ್ ಇದೀಗ ಮತ್ತೊಂದು ವಿವಾದದಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಮದುವೆ ಕುರಿತು ಚರ್ಚೆ ನಡೆಯುತ್ತಿದೆ.
ಅಂದಹಾಗೆ 2020 ರಲ್ಲೇ ವರ್ತೂರು ಸಂತೋಷ್ ಎಸ್. ಜಯಶ್ರೀ ಎಂಬುವರನ್ನ ಮದುವೆಯಾಗಿದ್ದಾರೆ ಎನ್ನಲಾಗಿದೆ. ಟ್ರೋಲ್ ಪೇಜ್ ಗಳಲ್ಲಿ ಅವರದ್ದು ಎನ್ನಲಾದ ಮದುವೆ ಫೋಟೋಸ್ ಹಾಗೂ ವಿಡಿಯೋ ದಿಢೀರ್ ವೈರಲ್ ಆಗಿದ್ದು, ನೆಟ್ಟಿಗರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಮದುವೆ ಕುರಿತು ಅವರು ಎಲ್ಲಿಯೂ ಪ್ರಸ್ತಾಪ ಮಾಡಿರಲಿಲ್ಲ.
ಬಿಗ್ ಬಾಸ್’ ಮನೆಯಲ್ಲಿ ವರ್ತೂರು ಸಂತೋಷ್ ಹಾಗೂ ತನಿಷಾ ಕುಪ್ಪಂಡ ಮಧ್ಯೆ ಸ್ನೇಹ, ಆತ್ಮೀಯತೆ ಬೆಳೆದಿದೆ. ಹೀಗಾಗಿ, ಇಬ್ಬರ ಮಧ್ಯೆ ಪ್ರೀತಿ ಅಂಕುರಿಸಿದೆ ಅಂತಲೇ ಉಳಿದ ಸ್ಪರ್ಧಿಗಳು ರೇಗಿಸುತ್ತಿದ್ದಾರೆ. ಕಿಚ್ಚ ಸುದೀಪ್ ಕೂಡಾ ವಾರದ ಪಂಚಾಯಿತಿಯಲ್ಲಿ ಆಗಾಗ್ಗೆ ರೇಗಿಸುತ್ತಿರುತ್ತಾರೆ. ಹೀಗಿರುವಾಗ ಮದುವೆ ಬಗ್ಗೆ, ವೈರಲ್ ಆಗಿರುವ ಫೋಟೋಗಳು ಹಾಗೂ ವಿಡಿಯೋಗಳ ಬಗ್ಗೆ ವರ್ತೂರು ಸಂತೋಷ್ ಅವರೇ ಸ್ಪಷ್ಟನೆ ನೀಡಬೇಕಿದೆ.
ಈ ಹಿಂದೆ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ ಆರೋಪದ ಮೇರೆಗೆ ಈ ಹಿಂದೆ ಅವರು ಆರೆಸ್ಟ್ ಆಗಿ ಒಂದು ವಾರ ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಜಾಮೀನು ಪಡೆದು ಹೊರಗೆ ಬಂದಿದ್ದರು.