ಪಂಜಾಬಿ ಗಾಯಕ ಗಿಪ್ಪಿ ಮನೆ ಮೇಲೆ ಗುಂಡಿನ ದಾಳಿ: ಸಲ್ಮಾನ್ ಖಾನ್ ಗೆ ಎಚ್ಚರಿಕೆ ಕೊಟ್ಟ ಲಾರೆನ್ಸ್ ಬಿಷ್ಣೋಯ್

ಕೆನಡಾದ ವ್ಯಾಂಕೋವರ್‌ನ ವೈಟ್ ರಾಕ್ ಪ್ರದೇಶದಲ್ಲಿ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಮನೆ ಮೇಲೆ ಗುಂಡು ಹಾರಿಸಿರುವುದಾಗಿ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಫೇಸ್‌ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. 
ಲಾರೆನ್ಸ್ ಬಿಷ್ಣೋಯ್-ಗಿಪ್ಪಿ ಗ್ರೆವಾಲ್-ಸಲ್ಮಾನ್ ಖಾನ್
ಲಾರೆನ್ಸ್ ಬಿಷ್ಣೋಯ್-ಗಿಪ್ಪಿ ಗ್ರೆವಾಲ್-ಸಲ್ಮಾನ್ ಖಾನ್

ಕೆನಡಾದ ವ್ಯಾಂಕೋವರ್‌ನ ವೈಟ್ ರಾಕ್ ಪ್ರದೇಶದಲ್ಲಿ ಪಂಜಾಬಿ ಗಾಯಕ ಗಿಪ್ಪಿ ಗ್ರೆವಾಲ್ ಮನೆ ಮೇಲೆ ಗುಂಡು ಹಾರಿಸಿರುವುದಾಗಿ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಫೇಸ್‌ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. 

ಗಿಪ್ಪಿ ಗ್ರೆವಾಲ್ ಪಂಜಾಬಿ ಗಾಯಕ ಮತ್ತು ನಟ. ಇತ ಮೂಲತಃ ಮೊಹಾಲಿಯವರು. ಗ್ರೆವಾಲ್‌ಗೆ ಈ ಹಿಂದೆ ಗ್ಯಾಂಗ್‌ಸ್ಟರ್ ಗಳಿಂದ ಬೆದರಿಕೆಗಳು ಬಂದಿದ್ದವು, ನಂತರ ಅವರಿಗೆ ಭದ್ರತೆಯನ್ನು ಒದಗಿಸಲಾಯಿತು. ಅವರು ಪ್ರಸ್ತುತ ಕೆನಡಾದಲ್ಲಿ ನೆಲೆಸಿದ್ದಾರೆ.

ಲಾರೆನ್ಸ್ ಬಿಷ್ಣೋಯ್ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಸಲ್ಮಾನ್ ಖಾನ್ ಗೆ ನೀನು ತುಂಬಾ ಆತ್ಮೀಯ. ನಿನ್ನನ್ನು ಈಗಲೇ ಕಾಪಾಡು ಎಂದು ನಿನ್ನ ಅಣ್ಣನಿಗೆ ಹೇಳು. ನಮ್ಮಿಂದ ನಿನ್ನನ್ನು ಯಾರೂ ರಕ್ಷಿಸುತ್ತಾರೆ. ಈಗ ನಾವು ನೀಡಿರುವ ಸಂದೇಶ ಸಲ್ಮಾನ್ ಖಾನ್‌ಗಾಗಿ. ನಿನ್ನನ್ನು ನಮ್ಮಿಂದ ದಾವೂದ್ ಇಬ್ರಾಹಿಂ ರಕ್ಷಿಸುತ್ತಾನೆ ಎಂದುಕೊಂಡು ಸುಖವಾಗಿ ಕಾಲ ಕಳೆಯಬೇಡ ಎಂದು ಬರೆದುಕೊಂಡಿದ್ದಾನೆ.

ಗಿಪ್ಪಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಸಲ್ಮಾನ್ ಭಾಗಿ
ಗಿಪ್ಪಿ ಅವರ ಕಾಮಿಡಿ ಚಿತ್ರ ‘ಮೌಜಾ ಹಿ ಮೌಜಾ’ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಇದರ ಟ್ರೇಲರ್ ಲಾಂಚ್ ಆಗಿತ್ತು. ಇದರಲ್ಲಿ ಸಲ್ಮಾನ್ ಖಾನ್ ಕೂಡ ಭಾಗವಹಿಸಿದ್ದರು. ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಗಿಪ್ಪಿ ಗ್ರೆವಾಲ್ ಅವರ 'ಮೌಜಾ ಹಿ ಮೌಜಾ' ಚಿತ್ರದ ಟ್ರೈಲರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ತಂಡಕ್ಕೆ ತಮ್ಮ ಶುಭಾಶಯ ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com