ವಿನೋದ್ ಪ್ರಭಾಕರ್
ವಿನೋದ್ ಪ್ರಭಾಕರ್

ಧ್ರುವ-ದರ್ಶನ್ ಮುನಿಸು: 'ಡಿ ಬಾಸ್' ಗಾಗಿ ಇಡೀ ಪ್ರಪಂಚವನ್ನೇ ಎದುರು ಹಾಕಿಕೊಳ್ತೇನೆ; ವಿನೋದ್ ಪ್ರಭಾಕರ್

ನಾನು ಒಂದು ವಿಷಯ ಹೇಳ್ಲಾ? ನಾನು ಇಡೀ ಪ್ರಪಂಚನಾ ಎದುರು ಹಾಕಿಕೊಳ್ತೀನಿ. ಒನ್‌ ಅಂಡ್ ಓನ್ಲಿ ಡಿ ಬಾಸ್‌ಗಾಗಿ. ಯಾಕಂದ್ರೆ, ಅವರು ನನ್ನ ಅಣ್ಣ. ಪ್ರತಿಯೊಂದು ಹಂತದಲ್ಲಿಯೂ ಅವರು ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ.
Published on

ಬೆಂಗಳೂರು: ಕಾವೇರಿ ಹೋರಾಟದ ವೇಳೆ ಧ್ರುವ ಸರ್ಜಾ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಮನಸ್ತಾಪ ಇರೋದು ಮೇಲ್ನೋಟಕ್ಕೆ ಅನಿಸಿತ್ತು. ವೇದಿಕೆ ಮೇಲೆ ಶಿವಣ್ಣನೊಂದಿಗೆ ಕೂತಿದ್ದ ಧ್ರುವ ಸರ್ಜಾ ಮುಖಕ್ಕೆ ಮುಖ ಕೊಟ್ಟು ಮಾತಾಡಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರುತ್ತಿದ್ದಂತೆ ಎದ್ದು ಹೋಗಿದ್ದರು.

ಚಿತ್ರರಂಗದಲ್ಲಿ ಈಗ ಸ್ಟಾರ್ ವಾರ್ ಸಾಮಾನ್ಯ‌ ಎನಿಸಿಬಿಟ್ಟಿದೆ. ಯಾವುದೋ ಕಾರಣಕ್ಕೆ ನಟರ ನಟಿಯರ ನಡುವೆ ಉಂಟಾದ ಚಿಕ್ಕ ಮುನಿಸು ಹೆಮ್ಮರವಾಗಿ ಬೆಳೆಯುತ್ತದೆ. ನಟ ದರ್ಶನ್ ಹಾಗೂ ಸುದೀಪ್ ನಡುವೆ ಮನಸ್ತಾಪ ಇರುವುದು ತಿಳಿದಿರುವ ವಿಚಾರ. ಆದರೆ ಧ್ರುವ ಸರ್ಜಾ ಹಾಗೂ ದರ್ಶನ್ ನಡುವೆ ಕೂಡಾ ಮನಸ್ತಾಪ ಇರುವುದು ಇತ್ತೀಚೆಗೆ ಬಹಿರಂಗವಾಗಿದೆ.

ಇತ್ತೀಚೆಗೆ ಕರ್ನಾಟಕ ಬಂದ್ ಸಮಯದಲ್ಲಿ ದರ್ಶನ್ ವೇದಿಕೆ ಮೇಲೆ ಬಂದಾಗ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದರು. ಆದರೆ ಧ್ರುವ ಒಲ್ಲದ ಮನಸ್ಸಿನಿಂದ ಎದ್ದು ನಿಂತಿದ್ದರು. ವೇದಿಕೆ ಮೇಲಿರುವವರನ್ನು ದರ್ಶನ್ ಮಾತನಾಡಿಸುವಾಗ ಧ್ರುವ ಬೇರೆಲ್ಲೋ ನೋಡುತ್ತಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇವರ ನಡುವೆ ಏನೂ ಸರಿ ಇಲ್ಲ ಎಂಬುದು ಎಲ್ಲರಿಗೂ ಗೊತ್ತಾಯ್ತು. ಧ್ರುವ ಕೂಡಾ ಇದನ್ನು ಒಪ್ಪಿಕೊಂಡಿದ್ದರು. ಇದೀಗ ನಟ ವಿನೋದ್ ಪ್ರಭಾಕರ್ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಕೆಲವು ದಿನಗಳಿಂದ‌ ನಾನು ಪ್ರಮೋಶನ್ ಕೆಲಸದಲ್ಲಿ ಬ್ಯುಸಿ‌ ಇದ್ದೆ. ವಿಚಾರ ತಿಳಿಯದೆ ನಾನು ಏನೂ ಮಾತನಾಡುವುದಿಲ್ಲ. ಆದರೆ ಒಂದು ಮಾತನ್ನು ಹೇಳಲು ಇಷ್ಟಪಡುತ್ತೇನೆ. ದರ್ಶನ್ ಅವರಿಗಾಗಿ ನಾನು ಇಡೀ ಪ್ರಪಂಚವನ್ನು ಎದುರು ಹಾಕಿಕೊಳ್ಳಲು ರೆಡಿ ಇದ್ದೇನೆ ಎಂದು ವಿನೋದ್ ಪ್ರಭಾಕರ್ ಪ್ರತಿಕ್ರಿಯಿಸಿದ್ದಾರೆ.

ನಾನು ಒಂದು ವಿಷಯ ಹೇಳ್ಲಾ? ನಾನು ಇಡೀ ಪ್ರಪಂಚನಾ ಎದುರು ಹಾಕಿಕೊಳ್ತೀನಿ. ಒನ್‌ ಅಂಡ್ ಓನ್ಲಿ ಡಿ ಬಾಸ್‌ಗಾಗಿ. ಯಾಕಂದ್ರೆ, ಅವರು ನನ್ನ ಅಣ್ಣ. ಪ್ರತಿಯೊಂದು ಹಂತದಲ್ಲಿಯೂ ಅವರು ಸಪೋರ್ಟ್ ಮಾಡಿಕೊಂಡು ಬಂದಿದ್ದಾರೆ. ಯಾರು ಏನೇ ಹೇಳಲಿ. ನನಗೆ ಡಿ ಬಾಸ್ ಮುಖ್ಯ. ನನ್ನ ಅಣ್ಣನಾದ ಡಿ ಬಾಸ್ ಮುಖ್ಯ ಅವರ ಪರವಾಗಿ ಯಾವಾಗ ಬೇಕಾದರೂ ಇರುತ್ತೇನೆ.

ಶುಕ್ರವಾರ ವಿನೋದ್ ಪ್ರಭಾಕರ್ ಅಭಿನಯದ ಫೈಟರ್ ಸಿನಿಮಾ ರಿಲೀಸ್ ಆಗಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್ ಪ್ರಭಾಕರ್, ಅಭಿಮಾನಿಗಳು‌‌ ನನ್ನ ಮೊದಲ‌ ಸಿನಿಮಾದಿಂದ ಇಲ್ಲಿವರೆಗೂ ಇದೇ ಪ್ರೀತಿ ತೋರಿಸುತ್ತಾ ಬಂದಿದ್ದಾರೆ. ಅವರಿಗೆ ನಾನು ಎಂದಿಗೂ ಕೃತಜ್ಞನಾಗಿರುತ್ತೇನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com