ದೊಡ್ಮನೆಯಿಂದ ಪ್ರದೀಪ್ ಈಶ್ವರ್ ಔಟ್: ಬಿಗ್ ಬಾಸ್ ಗೆ ತೆರಳಿದ್ದಕ್ಕೆ ಶಾಸಕರನ್ನು ವಜಾಗೊಳಿಸುವಂತೆ ದೂರು!

ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಮನೆಗೆ ಹೋದ ಮೊದಲ ದಿನವೇ ಸಾಕಷ್ಟು ಸುದ್ದಿ ಮಾಡಿದ್ದರು ಪ್ರದೀಪ್ ಈಶ್ವರ್.
ಪ್ರದೀಪ್ ಈಶ್ವರ್
ಪ್ರದೀಪ್ ಈಶ್ವರ್

ಬೆಂಗಳೂರು: ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಮನೆಗೆ ಹೋದ ಮೊದಲ ದಿನವೇ ಸಾಕಷ್ಟು ಸುದ್ದಿ ಮಾಡಿದ್ದರು ಪ್ರದೀಪ್ ಈಶ್ವರ್. ಹಲವು ದಿನಗಳ ಕಾಲ ಸ್ಪರ್ಧಿಯಾಗಿಯೇ ಅವರು ಮನೆಯಲ್ಲಿ ಉಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಹೋದದ್ದು ಅತಿಥಿಯಾಗಿ ಎನ್ನುವುದು ಈಗ ಗೊತ್ತಾಗಿದೆ.

ಬಿಗ್‌ ಬಾಸ್‌ ಮನೆಯಲ್ಲಿ ಎರಡನೇ ದಿನ ಎಲ್ಲರಿಗೂ ಬಿಗ್‌ ಸರ್‌ಪ್ರೈಸ್‌ ಒಂದು ಕಾದಿತ್ತು. ಅಲ್ಲೊಬ್ಬ ಹೊಸ ವ್ಯಕ್ತಿಯ ಆಗಮನವಾಗಿತ್ತು. ಎಲ್ಲರೂ ಅವರು ಸಹ ಬಿಗ್‌ ಬಾಸ್‌ ಸ್ಪರ್ಧಿಯೇ ಎಂದು ಭಾವಿಸಿದ್ದರು. ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್‌ ಈಶ್ವರ್‌ ಎಂಟ್ರಿ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿ ಮಾಡಿತ್ತು.

ಪ್ರದೀಪ್‌ ಈಶ್ವರ್‌ ಮನೆಗೆ ಬಂದು, ಸ್ಪರ್ಧಿಗಳ ಜೊತೆ ಮಾತನಾಡುತ್ತಿದ್ದರು. ಎಲ್ಲರನ್ನೂ ತಾವು ಸ್ಪರ್ಧಿ ಎಂದೇ ನಂಬಿಸಿದ್ದರು. ಆದರೆ ಕೆಲ ಹೊತ್ತಿನ ಬಳಿಕ ಬಿಗ್‌ ಬಾಸ್‌ ಮಾತನಾಡಿದರು. ಪ್ರದೀಪ್‌ ಈ ಸೀಸನ್‌ನ ಮೊದಲ ಅತಿಥಿ ಎಂದು ತಿಳಿಸಿದರು.

ಆ ಬಳಿಕ ಶಾಸಕ ಪ್ರದೀಪ್‌ ಈಶ್ವರ್‌ ಸ್ಪರ್ಧಿಗಳಿಗೆಂದು ಸಿಹಿ ತಂದಿದ್ದರು. ಆದರೆ ಅದನ್ನು ಪಡೆಯಲು ಕಂಟೆಸ್ಟಂಟ್ಸ್‌ ಗೆ ಟಾಸ್ಕ್‌ ಒಂದನ್ನು ಆಡಿಸಿದರು. ಆ ಬಳಿಕ ಸ್ಪರ್ಧಿಗಳಿಗೆ ಸಿಹಿ ನೀಡಿದರು. ನಂತರ ಪ್ರದೀಪ್‌ ಈಶ್ವರ್‌ ಬಿಗ್‌ ಬಾಸ್‌ ಆದೇಶದಂತೆ ಮನೆಯಿಂದ ಹೊರಬಂದರು.

ಪ್ರದೀಪ್ ಈಶ್ವರ್ ಬಿಗ್ ಬಾಸ್ ಮನೆಗೆ ಹೋಗಿದ್ದರ ಹಿನ್ನೆಲೆಯಲ್ಲಿ ವಂದೇ ಮಾತರಂ ಸಮಾಜ ಸೇವಾ ಸಂಸ್ಥೆ ವಿಧಾನಸಭೆ ಸ್ಪೀಕರ್​ಗೆ ದೂರು ನೀಡಿದೆ. ಪ್ರದೀಪ್‌ ಈಶ್ವರ್‌ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ಸೇವಾ ಸಂಸ್ಥೆಯು ಆಗ್ರಹಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com