ಪ್ರಪ್ರಥಮ ಬಾರಿಗೆ ಸ್ಯಾಂಡಲ್ ವುಡ್ ಗೆ ತೆಲುಗು ನಟ ಸುನೀಲ್ ಎಂಟ್ರಿ: ಪ್ರಜ್ವಲ್ ದೇವರಾಜ್ ಜೊತೆ ಶೃತಿ ಹರಿಹರನ್!
ಖ್ಯಾತ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಟಿಸಲಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿತ್ತು.
ರಾಜಲಕ್ಷ್ಮಿ ಎಂಟರ್‌ಟೈನ್‌ಮೆಂಟ್‌ಗಾಗಿ ಪ್ರತಿಭಾ ನರೇಶ್ ನಿರ್ಮಿಸುತ್ತಿರುವ ಚಿತ್ರವು ನವೆಂಬರ್ ಮೊದಲ ವಾರದಲ್ಲಿ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಅದೇ ತಿಂಗಳಲ್ಲಿ ಶೂಟಿಂಗ್ ಶುರುವಾಗಲಿದೆ.
ಸದ್ಯ, ಚಿತ್ರತಂಡ ಶೂಟಿಂಗ್ ಸ್ಥಳಗಳನ್ನು ಅಂತಿಮಗೊಳಿಸುತ್ತಿದ್ದು, ಸಂಪೂರ್ಣ ಶೂಟಿಂಗ್ ಒಂದೇ ಸ್ಟ್ರೆಚ್‌ನಲ್ಲಿ ನಡೆಯಲಿದೆ. ಪ್ರಜ್ವಲ್ ದೇವರಾಜ್ ನಟನೆಯ ಇನ್ನೂ ಹೆಸರಿಡ ಈ ಸಿನಿಮಾ ಮೂಲಕ ತೆಲುಗು ನಟ ಸುನೀಲ್ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
180 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಸುನಿಲ್, ಪ್ರಸ್ತುತ ಜೈಲರ್‌ನಲ್ಲಿನ ಪಾತ್ರಕ್ಕಾಗಿ ಗಮನ ಸೆಳೆದಿದ್ದಾರೆ, ವಿಜಯ್ ಕಾರ್ತಿಕೇಯ ನಿರ್ದೇಶನದ ಸುದೀಪ್ ಅವರ ಬಹುಭಾಷಾ ಚಿತ್ರ ಮ್ಯಾಕ್ಸ್ ನಲ್ಲಿಯೂ ಅಭಿನಯಿಸುತ್ತಿದ್ದಾರೆ.
ಹೆಡ್ ಬುಷ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಶ್ರುತಿ ಹರಿಹರನ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವೈವಿಧ್ಯಮಯ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಅವರು ಮತ್ತೊಮ್ಮೆ ವಿಶಿಷ್ಟ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸದ್ಯ ನಿರ್ದೇಶಕರು, ಪಾತ್ರದ ವಿವರಗಳನ್ನು ಹಾಗೂ ತಾರಾಗಣದ ವಿವರ ಮುಚ್ಚಿಟ್ಟಿದ್ದಾರೆ.
ಕಲೈ ಮಾಸ್ಟರ್ ಜೊತೆಗಿನ ಈ ಪ್ರಾಜೆಕ್ಟ್ ಜೊತೆಗೆ ಪ್ರಜ್ವಲ್ ನಟನೆಯ ಗಣ ಮತ್ತು ಮಾಫಿಯಾ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ನಟ ಎಚ್ ಲೋಹಿತ್ ಅವರೊಂದಿಗೆ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ