ವಿವೇಕ್​ ಅಗ್ನಿಹೋತ್ರಿ ನಿರ್ದೇಶನದಲ್ಲಿ ಸಿನಿಮಾ ಆಗ್ತಿದೆ ಎಸ್​.ಎಲ್​. ಭೈರಪ್ಪ ಅವರ ‘ಪರ್ವ’; ಪ್ರಮುಖ ಪಾತ್ರದಲ್ಲಿ ನಟ ಯಶ್!

‘ದಿ ಕಾಶ್ಮೀರ್​ ಫೈಲ್ಸ್​’, ‘ದಿ ವ್ಯಾಕ್ಸಿನ್​ ವಾರ್​’ ರೀತಿಯ ಸಿನಿಮಾಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿರುವ ವಿವೇಕ್​ ಅಗ್ನಿಹೋತ್ರಿ ಅವರು ಈಗ ‘ಪರ್ವ’ ಕೃತಿಯನ್ನು ಕೈಗೆತ್ತಿಕೊಂಡಿರುವುದು ವಿಶೇಷ. ಪ್ರಮುಖ ಪಾತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಸಿನಿಮಾವಾಗುತ್ತಿದೆ ಎಸ್ ಎಲ್ ಭೈರಪ್ಪ ಅವರ ಪರ್ವ
ಸಿನಿಮಾವಾಗುತ್ತಿದೆ ಎಸ್ ಎಲ್ ಭೈರಪ್ಪ ಅವರ ಪರ್ವ

ಬೆಂಗಳೂರು: ಎಸ್​.ಎಲ್​. ಭೈರಪ್ಪ ಅವರ ‘ಪರ್ವ’ ಕಾದಂಬರಿ ಸಿನಿಮಾ ರೂಪ‌ ಪಡೆದುಕೊಳ್ಳುತ್ತಿದೆ. ಆಧುನಿಕ ಮಹಾಭಾರತ ಎಂದೇ ಈ ಕಾದಂಬರಿ ಜನಪ್ರಿಯ. ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.

ಅಕ್ಟೋಬರ್​ 21 ರಂದು ಬೆಂಗಳೂರಿನಲ್ಲಿ ಸಿನಿಮಾದ ಟೈಟಲ್​ ಲಾಂಚ್​ ಮಾಡಲಾಗಿದೆ. ನಟ ಪ್ರಕಾಶ್ ಬೆಳವಾಡಿ, ಬಾಲಿವುಡ್ ನಟಿ ಪಲ್ಲವಿ ಜೋಶಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಇತ್ತೀಚೆಗೆ ಇದೇ ಕೃತಿಯನ್ನು ಇಟ್ಟುಕೊಂಡು ನಟ, ರಂಗಕರ್ಮಿ ಪ್ರಕಾಶ್​ ಬೆಳವಾಡಿ ಅವರು ಇಂಗ್ಲಿಷ್​ನಲ್ಲಿ ನಾಟಕ ಪ್ರದರ್ಶನ ಮಾಡಿದ್ದರು. ಈಗ ಬಾಲಿವುಡ್​ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ‘ದಿ ಕಾಶ್ಮೀರ್​ ಫೈಲ್ಸ್​’, ‘ದಿ ವ್ಯಾಕ್ಸಿನ್​ ವಾರ್​’ ರೀತಿಯ ಸಿನಿಮಾಗಳ ಮೂಲಕ ಅಪಾರ ಜನಪ್ರಿಯತೆ ಪಡೆದಿರುವ ವಿವೇಕ್​ ಅಗ್ನಿಹೋತ್ರಿ  ಅವರು ಈಗ ‘ಪರ್ವ’ ಕೃತಿಯನ್ನು ಕೈಗೆತ್ತಿಕೊಂಡಿರುವುದು ವಿಶೇಷ.

ಒಂದು ವರ್ಷದ ಹಿಂದೆ ಪ್ರಕಾಶ್ ಬೆಳವಾಡಿ ನನಗೆ ಕರೆ ಮಾಡಿದ್ದರು. ಭೈರಪ್ಪನವರ ಜೊತೆ ಮಾತನಾಡುವಂತೆ ಹೇಳಿದ್ದರು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಅವರು ಪರ್ವ ಸಿನಿಮಾ ಮಾಡುವಂತೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್​ಗಳಲ್ಲಿ ಬರುತ್ತದೆ’ ಎಂದು ವಿವೇಕ್​ ಅಗ್ನಿಹೋತ್ರಿ ಹೇಳಿದ್ದಾರೆ.

ವಿವೇಕ್ ಅಗ್ನಿಹೋತ್ರಿ ಮಾತನಾಡಿ ಭೈರಪ್ಪನವರು ನಮ್ಮ ಮೇಲೆ ನಂಬಿಕೆ ಇಟ್ಟಿದ್ದಾರೆ. ಪರ್ವ ಕಾದಂಬರಿಗೆ ಸಿನಿಮಾ ಟಚ್ ಕೊಡಲು ನಿರ್ಧರಿಸಿದ್ದೇನೆ. ಹಿಂದಿ ಹಾಗೂ ಕನ್ನಡ ಭಾಷೆಯಲ್ಲಿ ಪರ್ವ ಸಿನಿಮಾ ಮೂಡಿಬರಲಿದೆ. ಸಾಧ್ಯವಾದ್ರೆ ಮುಂದಿನ ದಿನಗಳಲ್ಲಿ ಸ್ಪ್ಯಾನಿಷ್ ಹಾಗು ಇಂಗ್ಲಿಷ್ ಭಾಷೆಯಲ್ಲಿ ಪರ್ವ ರಿಲೀಸ್ ಆಗಲಿದೆ. ಈ ಸಿನಿಮಾ ಮಾಡಲು ನನಗೆ ಚಾಲೆಂಜ್ ಎಂದು ಅನ್ನಿಸಿಲ್ಲ. ಈ ಕಾದಂಬರಿಯನ್ನು ಸಿನಿಮಾವಾಗಿ ತೆರೆಗೆ ತರುವುದು ನನ್ನ ಕನಸಾಗಿತ್ತು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ ಎಂದರು.

ಎಸ್  ಎಲ್ ಭೈರಪ್ಪ ಮಾತನಾಡಿ 34ವರ್ಷಗಳ ಹಿಂದೆ ಇದೇ ಹಾಲ್‌ನಲ್ಲಿ ಮಹಾಭಾರತವನ್ನು ಸಿನಿಮಾವಾಗಿ ನೋಡಿದ್ದೆ. ಪರ್ವ ನಾಟಕವನ್ನು ಪ್ರಕಾಶ್ ಬೆಳವಾಡಿ ನಿರ್ದೇಶಿಸಿ ನಟನೆ ಸಹ ಮಾಡಿದ್ದರು. ನಿರ್ದೇಶಕ ವಿವೇಕ್ ಮಾಡಿರುವ ಸಿನಿಮಾಗಳು ಸಕ್ಸಸ್ ಫುಲ್ ಆಗಿವೆ. ಭಾರತಕ್ಕೆ ಮಾತ್ರ ಪರ್ವ ಸಿನಿಮಾ ಸೀಮಿತವಾಗಬಾರದು. ಕನ್ನಡ, ಹಿಂದಿ ಮಾತ್ರವಲ್ಲದೆ ಆಂಗ್ಲ ಭಾಷೆಯಲ್ಲೂ ನನ್ನ ಕಾದಂಬರಿ ಸಿನಿಮಾವಾಗಿ ತೆರೆಗೆ ಬರಬೇಕು. ಪರ್ವ ಕಾದಂಬರಿ ಸಿನಿಮಾವಾಗಿ ಮೂಡಿಬರಲು ವಿವೇಕ್ ಅವರಿಗೆ ನನ್ನ ಒಪ್ಪಿಗೆ ಹಾಗೂ ಹಾರೈಕೆಯಿದೆ. ಪರ್ವ ಕಾದಂಬರಿಯನ್ನು ಈ ಮುಂಚೆ ಸಿನಿಮಾವಾಗಿ ಮಾಡುತ್ತೇವೆ ಎಂದು ಯಾರು ಬಂದು ಕೇಳಿಲ್ಲ. ಆ ಧೈರ್ಯ ಯಾರಿಗೂ ಇರಲಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com