'ಫೀನಿಕ್ಸ್' ಚಿತ್ರದಲ್ಲಿನ ನನ್ನ ಮನೆ ಕೆಲಸದಾಕೆ ಪಾತ್ರ ವಿಶಿಷ್ಟವಾಗಿದೆ: ನಿಮಿಕಾ ರತ್ನಾಕರ್

ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಮುಂಬರುವ ಚಿತ್ರ ಫೀನಿಕ್ಸ್, ಅಕ್ಟೋಬರ್ 26 ರಂದು ಚಿತ್ರೀಕರಣ ಆರಂಭಿಸಲಿದ್ದು, ಗುರುವಾರ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿಸಲು ನಿರ್ಧರಿಸಲಾಗಿದೆ.
ನಿಮಿಕಾ ರತ್ನಾಕರ್
ನಿಮಿಕಾ ರತ್ನಾಕರ್
Updated on

ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಮುಂಬರುವ ಚಿತ್ರ ಫೀನಿಕ್ಸ್, ಅಕ್ಟೋಬರ್ 26 ರಂದು ಚಿತ್ರೀಕರಣ ಆರಂಭಿಸಲಿದ್ದು, ಗುರುವಾರ ಸರಳವಾಗಿ ಚಿತ್ರದ ಮುಹೂರ್ತ ನೆರವೇರಿಸಲು ನಿರ್ಧರಿಸಲಾಗಿದೆ.

ಲಾಕಪ್ ಡೆತ್, ಹುಚ್ಚ, ಎಕೆ 47, ಕಲಾಸಿಪಾಳ್ಯ, ಮತ್ತು ಅಯ್ಯ ಸೇರಿದಂತೆ ಹಲವು ಮಾಸ್ ಚಿತ್ರಗಳನ್ನು ನೀಡಿದ ಓಂ ಪ್ರಕಾಶ್ ಅವರು ಈಗ ಫೀನಿಕ್ಸ್‌ನೊಂದಿಗೆ ಮಹಿಳಾ ಕೇಂದ್ರಿತ ಚಿತ್ರ ಮಾಡುತ್ತಿದ್ದಾರೆ.

ಚಿತ್ರದ ಚಿತ್ರೀಕರಣ ಆರಂಭವಾಗುವ ಮುನ್ನವೇ ನಿರ್ಮಾಪಕರು ಕನ್ನಡದ ನಟಿ ನಿಮಿಕಾ ರತ್ನಾಕರ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದ್ದಾರೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿರುವ ನಿಮಿಕಾ ಅವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ದಸರಾ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರದ ಫಸ್ಟ್ ಲುಕ್ ನಲ್ಲಿ ನಿಮಿಕಾ ಅವರು ದೇವಿಯ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಲುಕ್ ನಲ್ಲಿ ಅವರನ್ನು ಮನೆಗೆಲಸದಾಕೆಯಾಗಿ ತೋರಿಸುತ್ತದೆ. ಒಂದು ಕೈಯಲ್ಲಿ ಪೊರಕೆ ಮತ್ತು ಇನ್ನೊಂದು ಕೈಯಲ್ಲಿ ಚಾಕು ಹಿಡಿದಿದ್ದಾರೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ನಿಮಿಕಾ ರತ್ನಾಕರ್, “ನನ್ನ ದೇವತೆ ಅವತಾರವು ಚಿತ್ರದ ಒಂದು ಭಾಗವಾಗಿದೆ. ಸಂಪೂರ್ಣ ಕಥೆಯು ನೈಜ ಘಟನೆಗಳನ್ನು ಆಧರಿಸಿದೆ ಮತ್ತು ಕ್ರೈಮ್ ಥ್ರಿಲ್ಲರ್ ಆಗಿದ್ದು, ಇದನ್ನು ಮಾಸ್ ಅಂಶಗಳನ್ನು ಒಳಗೊಂಡ ಓಂ ಪ್ರಕಾಶ್ ಅವರ ಶೈಲಿಯಲ್ಲಿಯೇ ಕಾರ್ಯಗತಗೊಳಿಸಲಾಗಿದೆ ಎಂದಿದ್ದಾರೆ.

ಚಿತ್ರದಲ್ಲಿ ನಾನು ಮನೆ ಕೆಲಸದಾಕೆಯಾಗೆ ಅಭಿನಯಿಸಿದ್ದೇನೆ. ದೇವಿಯ ಅವತಾರ ಪೋಸ್ಟರ್ ಸಾಂಕೇತಿಕವಾಗಿದೆ. ಇದು ಭಕ್ತಿಯ ಚಿತ್ರ ಅಲ್ಲ. ಈ ಪಾತ್ರವು ನನಗೆ ಅತ್ಯಂತ ವಿಭಿನ್ನ ಮತ್ತು ವಿಶೇಷವಾಗಿದೆ. ಏಕೆಂದರೆ ನಾನು ಸಾಮಾನ್ಯವಾಗಿ ಗ್ಲಾಮರಸ್ ಪಾತ್ರಗಳನ್ನು ಮಾಡಿದ್ದೇನೆ. ಹೀಗಾಗಿ ಈ ಪಾತ್ರವು ವಿಶಿಷ್ಟವಾದ ಚಿತ್ರಣವನ್ನು ಹೊಂದಿದೆ  ಎಂದು ನಿಮಿಕಾ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com