ನಮ್ಮ ಅಪ್ಪು ಸದಾ ಶಾಶ್ವತ: ಕಿಚ್ಚ ಸುದೀಪ್ ಸೇರಿದಂತೆ ಹಲವು ಗಣ್ಯರಿಂದ ಸ್ಮರಣೆ

ಅಪ್ಪು ಅಗಲಿ ಇಂದಿಗೆ 2 ವರ್ಷವಾಗಿದ್ದು, ಎಲ್ಲೆಡೆ ಪುನೀತ್‌ ಪುಣ್ಯಸ್ಮರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಿಚ್ಚ ಸುದೀಪ್ ಸೇರಿದಂತೆ ಹಲವು ಗಣ್ಯರು ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ. 
ಸುದೀಪ್, ಅಪ್ಪು ಸಾಂದರ್ಭಿಕ ಚಿತ್ರ
ಸುದೀಪ್, ಅಪ್ಪು ಸಾಂದರ್ಭಿಕ ಚಿತ್ರ

ಬೆಂಗಳೂರು: ಅಪ್ಪು ಅಗಲಿ ಇಂದಿಗೆ 2 ವರ್ಷವಾಗಿದ್ದು, ಎಲ್ಲೆಡೆ ಪುನೀತ್‌ ಪುಣ್ಯಸ್ಮರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಿಚ್ಚ ಸುದೀಪ್ ಸೇರಿದಂತೆ ಹಲವು ಗಣ್ಯರು ಪುನೀತ್ ರಾಜ್ ಕುಮಾರ್ ಅವರನ್ನು ಸ್ಮರಿಸಿದ್ದಾರೆ. 

ಸರ್ವರನ್ನೂ ಪ್ರೀತಿ, ಗೌರವದಿಂದ ಕಾಣುತ್ತಿದ್ದ, ನೊಂದ ಜೀವಗಳಿಗೆ ಸದ್ದಿಲ್ಲದ ನೆರವಿಗೆ ನಿಲ್ಲುತ್ತಿದ್ದ ನಿಷ್ಕಲ್ಮಶ ಹೃದಯದ ಪುನೀತ್ ರಾಜ್‍ಕುಮಾರ್ ನಮ್ಮಿಂದ ಮರೆಯಾದರೂ, ಅವರ ಆದರ್ಶಪ್ರಾಯವಾದ ವ್ಯಕ್ತಿತ್ವ ನಮ್ಮ ನಡುವೆ ಶಾಶ್ವತ ಎಂದು ಮುಖ್ಯಮಂತ್ರಿ ಸ್ಮರಿಸಿದ್ದಾರೆ. 

ಪುನೀತ್ ರಾಜ್ ಕುಮಾರ್ ತಮ್ಮ ಅದ್ಭುತ ನಟನೆ ಹಾಗೂ ಸಮಾಜ ಸೇವೆಯಿಂದ ಎಲ್ಲರ ಮನ ಗೆದ್ದಿದ್ದ ಅಪ್ಪು ಕನ್ನಡಿಗರ ಹೃದಯದಲ್ಲಿ ಸದಾ ಅಮರರಾಗಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸ್ಮರಿಸಿದ್ದಾರೆ.

'ನಮ್ಮ ಅಪ್ಪು ಸದಾ ಶಾಶ್ವತ' ಎಂದು ಎಂದು ನಟ ಕಿಚ್ಚ ಸುದೀಪ್ ಎಕ್ಸ್ ಸಂದೇಶದಲ್ಲಿ ಸ್ಮರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com