ಸೂರಿ ನಿರ್ದೇಶನದ ಅಭಿಷೇಕ್ ಅಂಬರೀಶ್ ಅಭಿನಯದ ಆಕ್ಷನ್ ಥ್ರಿಲ್ಲರ್ ಚಿತ್ರ 'ಬ್ಯಾಡ್ ಮ್ಯಾನರ್ಸ್' ಗ್ರ್ಯಾಂಡ್ ರಿಲೀಸ್'ಗೆ ಸಜ್ಜಾಗಿದ್ದು, ಅದರ ಡೈಲಾಗ್ ಪ್ರೋಮೋ ಮಂಗಳವಾರ ರಿಲೀಸ್ ಆಗಿದೆ. ನವೆಂಬರ್ 24 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಮಾಸ್ತಿ ಬರೆದಿರುವ ಸಂಭಾಷಣೆಗಳು ಗಮನ ಸೆಳೆದಿದ್ದು, ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಡೈಲಾಗ್ ಡೆಲಿವರಿಗೆ ಅಭಿಮಾನಿಗಳು ಪಿಧಾ ಆಗಿದ್ದಾರೆ.
ಮತ್ತೊಂದೆಡೆ ಬ್ಯಾಡ್ ಮ್ಯಾನರ್ಸ್ ಅಭಿಷೇಕ್ ಅವರನ್ನು ಕಮರ್ಷಿಯಲ್ ಆಗಿ ಯಶಸ್ವಿ ನಾಯಕನಾಗಿ ಮಾಡುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ ನಿರ್ದೇಶಕ ಸೂರಿ.
Advertisement