ತತ್ಸಮ-ತದ್ಭವ ಸಂಭಾಷಣೆಯ ಗಾಂಭೀರ್ಯತೆಗೆ ಸಂಗೀತದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ಸವಾಲಾಗಿತ್ತು: ವಾಸುಕಿ ವೈಭವ್

ರಾಮಾ ರಾಮಾ ರೇ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾದ, ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಹುಮುಖ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. 
ವಾಸುಕಿ ವೈಭವ್
ವಾಸುಕಿ ವೈಭವ್

ರಾಮಾ ರಾಮಾ ರೇ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಪರಿಚಯವಾದ, ಬಿಗ್ ಬಾಸ್ ಸ್ಪರ್ಧಿ ವಾಸುಕಿ ವೈಭವ್ ಕಂಟೆಂಟ್ ಆಧಾರಿತ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಹುಮುಖ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. 

ಇತ್ತೀಚೆಗೆ ಬಡವ ರಾಸ್ಕಲ್ ಸಿನಿಮಾ ಮೂಲಕ ಕಮರ್ಷಿಯಲ್ ಸಿನಿಮಾದಲ್ಲಿ ಕೆಲಸ ಮಾಡಿದ್ದರು. 

"ನಾನು ನನ್ನ ದಾರಿಯಲ್ಲಿ ಬರುವ ಅತ್ಯುತ್ತಮ ಅವಕಾಶಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಪ್ರಾರಂಭದಲ್ಲಿ ಕಂಟೆಂಟ್ ಮುಖ್ಯವಾಗಿರುವ ಸಿನಿಮಾಗಳು ಅರಸಿ ಬರುತ್ತಿದ್ದವು. ಆದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂತರ ನನ್ನ ವಿಧಾನ ಬದಲಾಯಿತು. ಮುಂದಿನ ನಿಲ್ದಾಣ ಸಿನಿಮಾಗೆ ನೀಡಿದ ಸಂಗೀತ ನನ್ನನ್ನು ಹೆಚ್ಚು ರೋಮ್ಯಾಂಟಿಕ್ ಥೀಮ್ಗಳಲ್ಲಿ ತಲ್ಲೀನಗೊಳಿಸಿತು. ಬಳಿಕ ಬಡವ ರಾಸ್ಕಲ್ ನಾನು ಸಂಗೀತ ನೀಡಿದ ಮೊದಲ ಕಮರ್ಷಿಯಲ್ ಸಿನಿಮಾ ಆಗಿದೆ. ಅಂತೆಯೇ ಈಗ ನನ್ನ ಬಳಿ ಟಗರು ಪಲ್ಯ ಹಾಗೂ ಅಣ್ಣಾ ಫ್ರಮ್ ಮೆಕ್ಸಿಕೋ, ಜಿಮ್ಮಿ ಸಿನಿಮಾಗಳಿಗೆ ಸಂಗೀತ ನೀಡುತ್ತಿದ್ದೇನೆ. ಪ್ರತಿಯೊಂದು ಸಿನಿಮಾವೂ ವಿಭಿನ್ನವಾಗಿದೆ ಎನ್ನುತ್ತಾರೆ ವಾಸುಕಿ.

ಕನ್ನಡ ಹಾಗೂ ಮಲಯಾಳಂಗಳಲ್ಲಿ ಸೆ.15 ರಂದು ಬಿಡುಗಡೆಯಾಗಲಿರುವ ಅವರ ಮುಂದಿನ ಸಿನಿಮಾ ತತ್ಸಮ ತದ್ಭವ ಬಗ್ಗೆ ಮಾತನಾಡಿರುವ ವಾಸುಕಿ, ಪರಿಚಯವಿರುವ ತಂಡದೊಂದಿಗೆ ಸೇರಿ ಕೆಲಸ ಮಾಡುವುದಕ್ಕೆ ಉತ್ಸುಕನಾಗಿದ್ದಾನೆ ಎಂದು ಹೇಳಿದ್ದಾರೆ.

ಸಿನಿಮಾ ತನಿಖಾ ಥ್ರಿಲ್ಲರ್ ಕಥಾಹಂದರ ಹೊಂದಿದ್ದು, ಅತ್ಯಂತ ಕಡಿಮೆ ಹಾಡುಗಳಿದ್ದು, ಒಂದೇ ಒಂದು ಪ್ರೊಮೋಷನಲ್ ಹಾಡಿದೆ ಮತ್ತೊಂದು ಕ್ರೆಡಿಟ್ಸ್ ಗಾಗಿ ಇರುವ ಹಾಡಾಗಿದೆ. ನನ್ನ ಸಂಪೂರ್ಣ ಗಮನ ಹಿನ್ನೆಲೆ ಸಂಗೀತವನ್ನು ರೂಪಿಸಲು ಮೀಸಲಾಗಿತ್ತು.

ಸಿನಿಮಾದ ಗಾಂಭೀರ್ಯತೆ ಹಾಗೂ ಸಂಭಾಷಣೆಯ ಸನ್ನಿವೇಶದ ಪರಿಧಿಯಲ್ಲಿ ಹಿನ್ನೆಲೆಯ ಸಂಗೀತದಲ್ಲಿ ಸಮತೋಲನ ಕಾಯ್ದುಕೊಳ್ಳುವುದು ನನಗೆ ಅತಿ ದೊಡ್ಡ ಸವಾಲಾಗಿತ್ತು ಆದರೆ ನನ್ನ ಸಂಗೀತದ ಮೂಲಕ ನಿರೂಪಣೆಯನ್ನು ತಿಳಿಸುವಲ್ಲಿ ನಾನು ಅಪಾರ ಆನಂದವನ್ನು ಕಂಡುಕೊಂಡೆ ಎಂದು ವಾಸುಕಿ ವೈಭವ್ ಹೇಳಿದ್ದಾರೆ. ತತ್ಸಮ ತತ್ಭವ ಚಿತ್ರದಲ್ಲಿ ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದು, ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com