ಗೆಳೆತನದ ಅಂಶದ ಜೊತೆಗೆ 'ತತ್ಸಮ -ತದ್ಭವ' ಚಿತ್ರದಲ್ಲಿನ ಪಾತ್ರದ ಬಗ್ಗೆ ನನಗೆ ತೃಪ್ತಿ ಇದೆ: ಪ್ರಜ್ವಲ್ ದೇವರಾಜ್

ಸೆಪ್ಟೆಂಬರ್ 15 ರಂದು ತೆರೆಗೆ ಬರಲಿರುವ ತತ್ಸಮ ತತ್ಭವ ಚಿತ್ರದಲ್ಲಿ ಪ್ರಜ್ವಲ್ ಮತ್ತೊಮ್ಮೆ ಖಾಕಿ ಧರಿಸಿದ್ದಾರೆ. ಕನ್ನಡ ನಟಿ ಮೇಘನಾ ರಾಜ್ ಸರ್ಜಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವುದು 'ತತ್ಸಮ ತದ್ಭವ' ಸಿನಿಮಾದ ಮೂಲಕ. ನಟಿ ಮೇಘನಾ ರಾಜ್ ಸರ್ಜಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ.
ಪ್ರಜ್ವಲ್ ದೇವರಾಜ್
ಪ್ರಜ್ವಲ್ ದೇವರಾಜ್

ಪೊಲೀಸ್ ಪಾತ್ರಕ್ಕೂ ನಟ ಪ್ರಜ್ವಲ್ ದೇವರಾಜ್ ಗೂ ಅವಿನಾಭಾವ ನಂಟಿದೆ ಎಂದು ತೋರುತ್ತದೆ, ಏಕೆಂದರೆ  ಕೋಟೆ ಸಿನಿಮಾದಲ್ಲಿ ಮೊದಲ ಬಾರಿಗೆ ಪೊಲೀಸ್ ಪಾತ್ರದಲ್ಲಿ ನಟಿಸಿದ ಪ್ರಜ್ವಲ್ ಇದುವರೆಗೆ ಸುಮಾರು ನಾಲ್ಕು ಚಿತ್ರಗಳಲ್ಲಿ ಖಾಕಿ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಗಮನಾರ್ಹ ಅಂಶವೆಂದರೆ, ಈ ಪಾತ್ರಗಳು ಉದ್ದೇಶಪೂರ್ವಕ ಆಯ್ಕೆಯಾಗಿರಲಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ.

ಸೆಪ್ಟೆಂಬರ್ 15 ರಂದು ತೆರೆಗೆ ಬರಲಿರುವ ತತ್ಸಮ ತತ್ಭವ ಚಿತ್ರದಲ್ಲಿ ಪ್ರಜ್ವಲ್ ಮತ್ತೊಮ್ಮೆ ಖಾಕಿ ಧರಿಸಿದ್ದಾರೆ. ಕನ್ನಡ ನಟಿ ಮೇಘನಾ ರಾಜ್ ಸರ್ಜಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವುದು 'ತತ್ಸಮ ತದ್ಭವ' ಸಿನಿಮಾದ ಮೂಲಕ. ನಟಿ ಮೇಘನಾ ರಾಜ್ ಸರ್ಜಾ ಕಮ್ ಬ್ಯಾಕ್ ಮಾಡುತ್ತಿದ್ದಾರೆ.

ಬೇರೆ ಎಲ್ಲಾ ನಿರ್ದೇಶಕರಂತೆ  ವಿಶಾಲ್ ಅತ್ರೇಯ ಅವರು ಪನ್ನಾ (ಪನ್ನಗ ಭರಣ) ಅವರಿಗೆ ತಮ್ಮ ಕಥೆಯ ಬಗ್ಗೆ ವಿವರ ನೀಡಿದರು. ಸಿನಿಮಾ ನಿರ್ಮಾಣ ಮಾಡಬೇಕೆಂದು ಕನಸು ಹೊಂದಿದ್ದ ಪನ್ನಗ, ಮೇಘನಾ ಅವರೊಂದಿಗೆ ಪ್ರೊಡಕ್ಷನ್ ಆರಂಭಿಸಲು ನಿರ್ಧರಿಸಿದರು. ನಂತರ ನನ್ನ ಅಭಿಪ್ರಾಯ ಕೇಳಲು ನಿರ್ದೇಶಕರನ್ನು ಕಳುಹಿಸಿದರು ಎಂದು ಪ್ರಜ್ವಲ್ ವಿವರಿಸಿದ್ದಾರೆ.

ಈ ಸಿನಿಮಾ ಅವರ ಚೊಚ್ಚಲ ನಿರ್ಮಾಣದ ಕಾರಣ, ನಾನು ಸ್ಕ್ರಿಪ್ಟ್ ಪರಿಶೀಲಿಸಲು ಒಪ್ಪಿಕೊಂಡೆ. ನಾನು ವಿಶಾಲ್ ಅವರ ನಿರೂಪಣೆಯಿಂದ ಆಕರ್ಷಿತನಾದೆ ಮತ್ತು ಪೋಲೀಸ್ ಪಾತ್ರ ಮಾಡುವವರು ಯಾರು ಎಂಬ ಬಗ್ಗೆ  ವಿಚಾರಿಸಿದೆ. ಈ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡುವ ಆಸಕ್ತಿಯನ್ನು ಅವರು ಬಹಿರಂಗಪಡಿಸಿದರು. ಆಗಲೇ ನಾನು ಮೇಘನಾ ಜೊತೆ ಚರ್ಚಿಸಿದ್ದು, ‘ಡಿಜೆ ನನಗಾಗಿ ಹೀಗೆ ಮಾಡು’ ಎಂದಾಗ ನಾನು ಒಪ್ಪಿದೆ. ಸ್ನೇಹಕ್ಕಾಗಿ ಪಾತ್ರ ಒಪ್ಪಿಕೊಂಡರೂ ವಿಶಾಲ್ ರೂಪಿಸಿದ ಪಾತ್ರದಲ್ಲಿ ನನಗೆ ಅಪಾರ ತೃಪ್ತಿ ಸಿಕ್ಕಿದೆ ಎಂದಿದ್ದಾರೆ. ‘ಪನ್ನಗ ನಿರ್ಮಾಪಕನಾಗಿ ಪರಿವರ್ತನೆಯಾಗುವ ವಿಷಯವನ್ನು ಚಿರು (ಚಿರಂಜೀವಿ ಸರ್ಜಾ), ನಾನು ಮತ್ತು ಇತರರು ಯಾವಾಗಲೂ ಚರ್ಚಿಸುತ್ತಿದ್ದೆವು ಎಂದಿದ್ದಾರೆ.

ತತ್ಸಮ ತತ್ಭವ ಒಂದು ತನಿಖಾ ಥ್ರಿಲ್ಲರ್ ಆಗಿದ್ದು, ಟ್ರೈಲರ್ ಸೂಚಿಸುವಂತೆ, ಇದು ಮೇಘನಾ ಪಾತ್ರದ ಗಂಡನ ನಿಗೂಢ ಕಣ್ಮರೆಯ ಸುತ್ತ ಸುತ್ತುತ್ತದೆ. ಇದುವರೆಗೂ ನಾನು ಮಾಡದ ಪಾತ್ರಕ್ಕಿಂತ ಭಿನ್ನವಾಗಿದೆ. ಇದು ಸಂಪೂರ್ಣವಾಗಿ ಹೊಸದು. ಸಿನಿಮಾ ಸಂಪೂರ್ಣ ವಾಸ್ತವದಲ್ಲಿ ಬೇರೂರಿದೆ. ಈ ಪಾತ್ರಕ್ಕಾಗಿ ತಯಾರಿ ನಡೆಸಲು ಒಂದು ವಾರ ಮೀಸಲಿಟ್ಟಿದ್ದೇನೆ. ಯಾವುದೇ ಅಬ್ಬರದ ಸಂಭಾಷಣೆಗಳಿಲ್ಲ.ಕೇವಲ ಪ್ರಕರಣದ ತನಿಖೆ ಮತ್ತು ಕಾರ್ಯಕ್ಷಮತೆಯ ಮೇಲಷ್ಟೇ ಗಮನ ಎಂದು  ಪ್ರಜ್ವಲ್ ಹೇಳಿದ್ದಾರೆ.

ವಯಕ್ತಿಕವಾಗಿ, ಪ್ರಜ್ವಲ್ ದೇವರಾಜ್ ಹಾಸ್ಯದ ಕಡೆಗೆ ವಾಲುತ್ತಾರೆ, ಆದರೆ ಅವರಿಗೆ ಕ್ರೈಮ್ ಥ್ರಿಲ್ಲರ್‌ಗಳು ಅಪಾರ ಆನಂದ ನೀಡುತ್ತವೆ. ಹಲವು ಚಲನಚಿತ್ರಗಳು ಊಹಿಸಬಹುದಾಗಿರುತ್ತವೆ, ಮುಂದೆ ಏನಾಗುತ್ತದೆ ಎಂಬುದನ್ನು ಒಬ್ಬ ಪ್ರೇಕ್ಷಕ ಸುಲಭವಾಗಿ ಊಹಿಸುತ್ತಾನೆ.

ಆದರೆ, ತತ್ಸಮ ತತ್ಭವವೇ ಬೇರೆ, ಅದೇ ನನ್ನನ್ನು ಚಿತ್ರದತ್ತ ಸೆಳೆಯಿತು. ವಿಶಾಲ್ ಈ ಪಾತ್ರವನ್ನು ಬೆಳೆಸಿದ ರೀತಿಯನ್ನು ನಾನು ಪ್ರಶಂಸಿಸುತ್ತೇನೆ. ಅಡುಗೆ ಮಾಡುವುದನ್ನು ಇಷ್ಟಪಡುವ ಮತ್ತು ಪ್ರಕರಣಗಳನ್ನು ಪರಿಹರಿಸುವಲ್ಲಿ ಕುಕ್ಕಿಂಗ್ ವಿಧಾನ ಅನ್ವಯಿಸುವ ಪೋಲೀಸ್ ಪಾತ್ರ. ಪ್ರತಿಯೊಂದು ಪ್ರಕರಣವನ್ನು ವಿಭಿನ್ನ ಕೋನದಿಂದ ನೋಡುತ್ತಾರೆ ಎಂದು ಪ್ರಜ್ವಲ್ ತಮ್ಮ ಪಾತ್ರದ ಬಗ್ಗೆ ಸಂಕ್ಷಿಪ್ತವಾಗಿ ಹೇಳುತ್ತಾರೆ.

ವಿಶಾಲ್ ಅವರ ತೇಜಸ್ಸು ಅವರ ಬರವಣಿಗೆಯಲ್ಲಿ ಹೊಳೆಯುತ್ತದೆ. ಭವಿಷ್ಯದಲ್ಲಿ ಅವರ ಜೊತೆ ಮತ್ತಷ್ಟು ಹೆಚ್ಚಿನ ಕೆಲಸ ಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆಯಿದೆ ಎಂದು ಪ್ರಜ್ವಲ್ ತಿಳಿಸಿದ್ದಾರೆ. ಇದರ ಜೊತೆಗೆ ಪ್ರಜ್ವಲ್ ಗಣ, ಮಾಫಿಯಾ ಮತ್ತು ಲೋಹಿತ್ ಹೆಚ್ ಜೊತೆಗಿನ ಮತ್ತೊಂದು ಸಿನಿಮಾಗೂ ಸಹಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com