ಆಕೆ ಜೊತೆ ರೊಮ್ಯಾನ್ಸ್ ಮಾಡಲಾರೆ, ಬೇರೆ ಹೀರೋಯಿನ್ ಇದ್ರೆ ನೋಡಿ: ಕರ್ನಾಟಕ ಮೂಲದ ನಟಿಯನ್ನು ತಿರಸ್ಕರಿಸಿದ ವಿಜಯ್ ಸೇತುಪತಿ!

ಕಾಲಿವುಡ್‌ನ ಸ್ಟಾರ್‌ ನಟ ವಿಜಯ್‌ ಸೇತುಪತಿ ಸದ್ಯ ಜವಾನ್‌ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸೌತ್‌ನಲ್ಲಿ ಹವಾ ಸೃಷ್ಟಿಸಿಕೊಂಡಿದ್ದ ಈ ನಟನೀಗ ಉತ್ತರ ಭಾರತದ ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ.
ವಿಜಯ್ ಸೇತುಪತಿ
ವಿಜಯ್ ಸೇತುಪತಿ

ಕಾಲಿವುಡ್‌ನ ಸ್ಟಾರ್‌ ನಟ ವಿಜಯ್‌ ಸೇತುಪತಿ ಸದ್ಯ ಜವಾನ್‌ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಸೌತ್‌ನಲ್ಲಿ ಹವಾ ಸೃಷ್ಟಿಸಿಕೊಂಡಿದ್ದ ಈ ನಟನೀಗ ಉತ್ತರ ಭಾರತದ ಅಪಾರ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ.

ಹೀಗಿರುವಾಗಲೇ ಇದೇ ನಟ ತಮ್ಮ ಹೊಸ ಸಿನಿಮಾವೊಂದರ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ನನ್ನ ಸಿನಿಮಾಕ್ಕೆ ಆ ನಟಿ ಬೇಡ ಎಂದಿದ್ದಾರೆ. ನಟ ವಿಜಯ್‌ ಸೇತುಪತಿ, ಕರ್ನಾಟಕ ಮೂಲದ ನಟಿಯ ಜತೆಗೆ ರೊಮ್ಯಾನ್ಸ್‌ ಮಾಡುವುದು ಅಸಾಧ್ಯ ಎಂದಿದ್ದಾರೆ.

ಕೃತಿ ಶೆಟ್ಟಿ ತೆಲುಗಿನ ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ವಿಜಯ್​ ಸೇತುಪತಿ ಅವರು ನಾಯಕಿ ಕೃತಿ ಶೆಟ್ಟಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿಯ ನಟನೆಯನ್ನು ನೋಡಿ ಸೇತುಪತಿ ಮನಸಾರೆ ಹೊಗಳಿದ್ದರು. ಅಲ್ಲದೆ, ಕೃತಿಯೊಂದಿಗೆ ತಮಿಳು ಚಿತ್ರವೊಂದರಲ್ಲಿ ನಟಿಸಲು ನಿರಾಕರಿಸಿದ್ದಕ್ಕೆ ಕಾರಣ ನೀಡಿರುವ ವಿಡಿಯೋ ತುಣುಕು ವೈರಲ್​ ಆಗಿದೆ. ಇದು ಸೇತುಪತಿ ನಟನೆಯ “ಲಾಭಂ” ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಸಂದರ್ಶನವೊಂದರ ವಿಡಿಯೋ ತುಣುಕಾಗಿದೆ.

ವಿಡಿಯೋದಲ್ಲಿ ಮಾತನಾಡಿರುವ ಸೇತುಪತಿ, ನಾನು ಉಪ್ಪೇನಾ ಚಿತ್ರದಲ್ಲಿ ಕೃತಿಗೆ ತಂದೆಯಾಗಿ ಅಭಿನಯಿಸಿದ್ದೇನೆ ಎಂಬುದು ಚಿತ್ರತಂಡಕ್ಕೆ ಗೊತ್ತಿರಲಿಲ್ಲ. ನನ್ನ ಮಗಳೆಂದು ಭಾವಿಸಿದ ಮೇಲೆ ಅವಳೊಂದಿಗೆ ನಾನ್ಹೇಗೆ ರೊಮ್ಯಾನ್ಸ್​ ಮಾಡಲು ಸಾಧ್ಯ ಎಂದು ಹೇಳಿದ್ದಾಗಿ ತಿಳಿಸಿದೆ. ಉಪ್ಪೇನಾ ಚಿತ್ರದ ಕ್ಲೈಮ್ಯಾಕ್ಸ್​ ಚಿತ್ರೀಕರಣದ ವೇಳೆ ನನ್ನನ್ನು ನಿನ್ನ ತಂದೆಯಂದೇ ಭಾವಿಸು.

ನನ್ನ ಮಗನಿಗೆ ಸುಮಾರು 15 ವರ್ಷ. ಆತ ಕೃತಿಗಿಂತ ಸ್ವಲ ಚಿಕ್ಕವನು. ಕೃತಿಯನ್ನು ಕೂಡ ನಾನು ಮಗಳಂತೆ ಭಾವಿಸುತ್ತೇನೆ. ಆದ್ರೆ ತೆರೆಯ ಮೇಲೆ ನಾನು ಹೇಗೆ ಅವಳೊಂದಿಗೆ ರೊಮ್ಯಾನ್ಸ್​ ಮಾಡಲು ಸಾಧ್ಯ. ಹೀಗಾಗಿ ಚಿತ್ರದ ನಾಯಕಿಯಾಗಿ ಅವಳ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದೇನೆಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com