'ಬಾನದಾರಿಯಲ್ಲಿ' ಸಿನಿಮಾದ ಕಾದಂಬರಿ ಪಾತ್ರದಲ್ಲಿ ನಾನು ಕಳೆದು ಹೋಗಿದ್ದೆ: ರೀಷ್ಮಾ ನಾಣಯ್ಯ

ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೂಲಕ ತನ್ನ ಸಿನಿಮಾ ಪ್ರಯಾಣ ಆರಂಭಿಸಿದ ರೀಷ್ಮಾ ನಾಣಯ್ಯ, ಹಲವು ಸಿನಿಮಾಗಳ ಭಾಗವಾಗಿದ್ದಾರೆ. ಇತ್ತೀಚೆಗೆ ಉಪೇಂದ್ರ ಅವರ ಬಹು ನಿರೀಕ್ಷಿತ ನಿರ್ದೇಶನದ ಯು ಐ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.
ಬಾನದಾರಿಯಲ್ಲಿ ಸಿನಿಮಾ ಸ್ಟಿಲ್
ಬಾನದಾರಿಯಲ್ಲಿ ಸಿನಿಮಾ ಸ್ಟಿಲ್

ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೂಲಕ ತನ್ನ ಸಿನಿಮಾ ಪ್ರಯಾಣ ಆರಂಭಿಸಿದ ರೀಷ್ಮಾ ನಾಣಯ್ಯ, ಹಲವು ಸಿನಿಮಾಗಳ ಭಾಗವಾಗಿದ್ದಾರೆ.  ಇತ್ತೀಚೆಗೆ ಉಪೇಂದ್ರ ಅವರ ಬಹು ನಿರೀಕ್ಷಿತ ನಿರ್ದೇಶನದ ಯು ಐ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ ಧ್ರುವ ಸರ್ಜಾ ನಟನೆಯ ಕೆಡಿ ಮತ್ತು ವಾಮನ ಸಿನಿಮಾಗಳಲ್ಲಿ ನಟಸಿದ್ದು ರಿಲೀಸ್ ಆಗಲು ಸಿದ್ದವಾಗಿವೆ.

ಸದ್ಯ ಪ್ರೀತಂ ಗುಬ್ಬಿ ನಿರ್ದೇಶನದ ಬಾನದಾರಿಯಲ್ಲಿ ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಪರದೆ ಹಂಚಿಕೊಂಡಿದ್ದಾರೆ, ಸೆಪ್ಟಂಬರ್ 28 ರಂದು ಸಿನಿಮಾ ರಿಲೀಸ್ ಆಗಲಿದೆ. ನಾನು ಕೇವಲ 2 ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದೇನೆ, ಆದರೆ ನಿರ್ದೇಶಕರು ನನ್ನ ಮೇಲೆ ವಿಶ್ವಾಸವಿರಿಸಿ ಉತ್ತಮ ಪಾತ್ರ ನೀಡುತ್ತಿದ್ದಾರೆ. ಪ್ರಸಿದ್ಧ ನಟರೊಂದಿಗೆ ನಾನು ಕೆಲಸ ಮಾಡುತ್ತಿರುವುದು ನನ್ನ ಅದೃಷ್ಟ, ನಾನು ಬ್ಲೆಸ್ಡ್ ಪರ್ಸನ್, ಇದರಿಂದ ನಾನು ಮತ್ತಷ್ಟು ಕಷ್ಟ ಪಟ್ಟು ಕೆಲಸ ಮಾಡಲು ಮೋಟಿವೇಟ್ ಮಾಡುತ್ತದೆ ಎಂದು ರೀಷ್ಮಾ ಹೇಳಿದ್ದಾರೆ.

ಬಾನದಾರಿಯಲ್ಲಿ, ಸಿನಿಮಾದಲ್ಲಿ ಗಣೇಶ್ ಜೊತೆಗೆ ರುಕ್ಷ್ಮಿಣಿ ವಸಂತ್ ಕೂಡ ನಟಿಸಿದ್ದಾರೆ, ರೀಷ್ಮಾ ಕಾದಂಬರಿ ಪಾತ್ರದಲ್ಲಿ ನಟಿಸಿದ್ದಾರೆ. “ಇಂದಿನ ಯುವಕರಲ್ಲಿ ಬ್ಲಾಗಿಂಗ್ ಸಾಮಾನ್ಯ ಹವ್ಯಾಸವಾಗಿದೆ, ಆದರೆ ಅಂತಹ ಪಾತ್ರವನ್ನು ಚಲನಚಿತ್ರದಲ್ಲಿ ಚಿತ್ರಿಸುವುದು ವಿಶಿಷ್ಟವಾಗಿದೆ.

ಪ್ರತಿ ಕ್ಷಣವನ್ನು ಸೆರೆ ಹಿಡಿಯುವುದು ಮತ್ತು ಅವುಗಳನ್ನು ನೆನೆಪುಗಳಾಗಿರಿಸಿಕೊಳ್ಳುವುದು ಚಿತ್ರದಲ್ಲಿ ನನ್ನ ಪಾತ್ರವಾಗಿದೆ. ಈ ಪಾತ್ರ ನನಗೆ ಅಸಂಖ್ಯಾತ ಸುಂದರ ನೆನಪುಗಳನ್ನು ಒದಗಿಸಿದೆ ಎಂದು ರೀಷ್ಮಾ ಅಭಿಪ್ರಾಯ ಪಟ್ಟಿದ್ದಾರೆ.

ನಟ ಗಣೇಶ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ರೀಷ್ಮಾ, ಗಣೇಶ್ ನಮ್ಮ ಕುಟುಂಬದ ಫೇವರಿಟ್ ನಾಯಕ, ನಾನು ನನ್ನ ಕುಟುಂಬಸ್ಥರೊಂದಿಗೆ ಸೇರಿ ಅವರ ಸಿನಿಮಾಗಳನ್ನು ನೋಡಿ ಎಂಜಾಯ್ ಮಾಡುತ್ತಿದ್ದೆ, ಕೆಲವು ಸಿನಿಮಾಗಳಲ್ಲಿ ಅವರ ನಟನೆ ನೋಡಿ ಎಮೋಷನ್ ಆಗಿದ್ದೆ, ಆದರೆ ಇಂದು ಅವರ ಜೊತೆ ನಟಿಸಿದ್ದೇನೆ, ಇದನ್ನು ನಾನು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ ಎಂದು ರೀಷ್ಮಾ ತಿಳಿಸಿದ್ದಾರೆ.

ಗಣೇಶ್ ನಂಬಲಾಗದಷ್ಟು ಪಾಸಿಟಿವ್ ವ್ಯಕ್ತಿ, ಅವರಿಗೆ ವಿಶಿಷ್ಟವಾದ ಮ್ಯಾನರಿಸಂಗಳಿವೆ. ‘ನಮಸ್ಕಾರ, ನಮಸ್ಕಾರ, ನಮಸ್ಕಾರ ಎಂಬ ಅವರ ಕಾಮಿಕ್ ಟೈಮ್ ಅದ್ಭುತ. ಅವರ ನಟನೆಯು ತುಂಬಾ ನೈಜವಾಗಿದೆ.

ಬಾನದಾರಿಯಲ್ಲಿ ನೀವು ಗಣೇಶ್ ಅವರ ವಿಭಿನ್ನ ಮುಖ ನೋಡುತ್ತೀರಿ, ಅವರೊಂದಿಗೆ ಕೆಲಸ ಮಾಡಿರುವುದು ಸಂತೋಷವಾಗಿದೆ. ಗಣೇಶ್ ಅವರೊಂದಿಗೆ ತೆರೆ ಹಂಚಿಕೊಳ್ಳುವುದು ನಿಸ್ಸಂದೇಹವಾಗಿ ರೋಮಾಂಚನಕಾರಿಯಾದರೂ, ನಿರ್ದೇಶಕ ಪ್ರೀತಂ ಗುಬ್ಬಿ  ಭಾವನೆಗಳನ್ನು ಸುಂದರವಾಗಿ ಚಿತ್ರಿಸುವ ಸಾಮರ್ಥ್ಯವನ್ನು ರೀಷ್ಮಾ ಹೊಗಳಿದ್ದಾರೆ.

ಚಿತ್ರದಲ್ಲಿ ಪ್ರೀತಂ ನನಗೆ ಕಾದಂಬರಿಯ ಪಾತ್ರ ನೀಡಿದರು, ಪಾತ್ರದ ಬಗ್ಗೆ ಕೇಳಿದ  ಕೂಡಲೇ ನಾನು ಆಕರ್ಷಿತಳಾದೆ.  ಕಾದಂಬರಿಯು ನಿಮ್ಮನ್ನು ನಗುವಂತೆ ಮಾಡುತ್ತದೆ ಮತ್ತು ಸವಾಲಿನ ಸಂದರ್ಭಗಳಲ್ಲಿಯೂ ಸಹ ಜೀವನವನ್ನು ಪೂರ್ಣವಾಗಿ ಬದುಕುವ ವ್ಯಕ್ತಿತ್ವ ಆ ಪಾತ್ರ ಮಾಡುವ ಮೂಲಕ ನನಗೆ ರಿಪ್ರೆಶ್ ಮೆಂಟ್ ಸಿಕ್ಕಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೀನ್ಯಾ, ನೈರೋಬಿ ಮತ್ತು ಮಸಾಯಿ ಮಾರಾ ಸೇರಿದಂತೆ ಆಫ್ರಿಕಾದ ಉಸಿರುಕಟ್ಟುವ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವ ಅವಕಾಶವು ರೀಷ್ಮಾಗೆ ಅತ್ಯಂತ ರೋಮಾಂಚನಕಾರಿ ಕ್ಷಣಗಳಲ್ಲಿ ಒಂದಾಗಿದೆ. ಸಫಾರಿ ಅನುಭವವು ವಿಸ್ಮಯಕಾರಿಯಾಗಿತ್ತು. ಅಭಿಲಾಶ್ ಕಲಾತಿ ಅವರ ಅದ್ಭುತ ಕೆಲಸಕ್ಕಾಗಿ ನಾನು ಅವರನ್ನು ತುಂಬಾ ಗೌರವಿಸುತ್ತೇನೆ. ಅವರು ಪ್ರತಿ ಶಾಟ್ ನ ಪ್ರತಿ ಫ್ರೇಮಿನಲ್ಲಿ ಪ್ರಾಣಿಗಳು, ಬೆಳಕು ಮತ್ತು ಇತರ ಅಂಶಗಳನ್ನು ಪರಿಗಣಿಸಿ, ಅದ್ಭುತವಾಗಿ ರೂಪಿಸಿದ್ದಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com