ಯಶ್ 19ನೇ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕಿ ಗೀತು ಮೋಹನ್ ದಾಸ್ ಡೈರೆಕ್ಷನ್!
ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ 1 ವರ್ಷ ಆದ ಹಿನ್ನೆಲೆಯಲ್ಲಿ ಯಶ್ ಮುಂದಿನ ಸಿನಿಮಾ ಸುದ್ದಿ ಮಾಡುತ್ತಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂದು ಸಿನಿಮಾ ಎಕ್ಸ್ ಪ್ರೆಸ್ ಗೆ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
Published: 17th April 2023 12:15 PM | Last Updated: 17th April 2023 02:44 PM | A+A A-

ಯಶ್ ಮತ್ತು ಗೀತು ಮೋಹನ್ ದಾಸ್
ಕೆಜಿಎಫ್ 2 ಸಿನಿಮಾ ರಿಲೀಸ್ ಆದ ನಂತರ ಯಶ್ ಅವರ 19ನೇ ಚಿತ್ರದ ಬಗ್ಗೆ ದಿನಕ್ಕೊಂದು ಸುದ್ದಿ ಹೊರಬರುತ್ತಿದೆ. ಅವರ ಮುಂದಿನ ಚಿತ್ರವನ್ನು ಯಾರೆಲ್ಲ ನಿರ್ದೇಶನ ಮಾಡಲಿದ್ದಾರೆ ಎನ್ನುವ ಕುರಿತಾಗಿ ನಾನಾ ಹೆಸರುಗಳು ಕೇಳಿ ಬಂದವು. ನರ್ತನ್, ಶಂಕರ್ ಹೀಗೆ ಹಲವಾರು ನಿರ್ದೇಶಕರ ಹೆಸರುಗಳು ಕೇಳಿ ಬಂದಿದ್ದವು.
ಕೆಜಿಎಫ್-2 ಸಿನಿಮಾ ರಿಲೀಸ್ ಆಗಿ 1 ವರ್ಷ ಆದ ಹಿನ್ನೆಲೆಯಲ್ಲಿ ಯಶ್ ಮುಂದಿನ ಸಿನಿಮಾ ಸುದ್ದಿ ಮಾಡುತ್ತಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರೆ ಎಂದು ಸಿನಿಮಾ ಎಕ್ಸ್ ಪ್ರೆಸ್ ಗೆ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಎಲ್ಲವೂ ಸರಿ ಹೋದರೆ ಈ ಇಬ್ಬರ ಕಾಂಬಿನೇಷನ್ ಸಿನಿಮಾ ನೋಡುವುದು ಪ್ರೇಕ್ಷಕರ ಕಣ್ಣಿಗೆ ಹಬ್ಬವಾಗಲಿದೆ.
ಲೈಯರ್ಸ್ ಡೈಸ್ ಸಿನಿಮಾಗಾಗಿ ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದಿರುವ ಗೀತು ಅವರ ಸ್ಕ್ರಿಪ್ಟ್ ಬಗ್ಗೆ ಯಶ್ ಒಲವು ತೋರಿದ್ದಾರೆ ಎಂದು ವರದಿಯಾಗಿದೆ. ಸತತ ಆರು ತಿಂಗಳಿಂದ ಗೀತು ಮತ್ತು ಯಶ್ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮಾಡುತ್ತಲೇ ಇದ್ದಾರೆ ಎಂದು ಅವರ ಆಪ್ತರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: KGF 2 ಗೆ ವರ್ಷದ ಸಂಭ್ರಮ; 'ಕೆಜಿಎಫ್ 3' ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸುಳಿವು
ಲೈಯರ್ಸ್ ಡೈರಿ ಜೊತೆಗೆ ನಿವಿನ್ ಪಾಲಿ-ನಟನೆಯ ಮೂಥೋನ್‌ನಲ್ಲಿನ ಕೆಲಸಕ್ಕಾಗಿ ಗೀತು ಹೆಸರುವಾಸಿಯಾಗಿದ್ದಾರೆ, ಅವರು ಈಗಾಗಲೇ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸರ್ಕ್ಯೂಟ್‌ನಲ್ಲಿ ತಮ್ಮ ಕೆಲಸಕ್ಕೆ ಹೆಸರು ಮಾಡಿದ್ದಾರೆ. ಪ್ರಶಸ್ತಿ ವಿಜೇತ ವಿಜೇತ ಛಾಯಾಗ್ರಾಹಕ ಹಾಗೂ ಗೀತು ಅವರ ಪತಿ ರಾಜೀವ್ ರವಿ ಅವರೇ ಯಶ್ ಸಿನಿಮಾ ನಿರ್ದೇಶಿಸುವ, ರಾಜೀವ್ ರವಿ ಲೈಯರ್ಸ್ ಡೈಸ್ ಮತ್ತು ಮೂಥೋನ್ ಎರಡರಲ್ಲೂ ಕೆಲಸ ಮಾಡಿದ್ದಾರೆ.
ಇದುವರೆಗೂ ಯಶ್ ಹಲವು ನಿರ್ದೇಶಕರ ಬಳಿ ಕೆಲಸ ಮಾಡಿದ್ದು, ಕೆಲವರು ಒಂದು ಅಥವಾ ಎರಡು ಸಿನಿಮಾ ಡೈರೆಕ್ಟ್ ಮಾಡಿರುವವರಾಗಿದ್ದಾರೆ. ಸಂತೋಷ್ ಆನಂದ್ ರಾಮ್ ಚೊಚ್ಚಲ ನಿರ್ದೇಶನದ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ, ಒಂದು ಸಿನಿಮಾ ನಿರ್ದೇಶಿಸಿದ್ದ ಪ್ರಶಾಂತ್ ನೀಲ್ ಜೊತೆ ಯಶ್ ಕೆಲಸ ಮಾಡಿ ಹಿಟ್ ಪಡೆದಿರುವುದು ವಿಶೇಷ. ಹೀಗಾಗಿ ಯಶ್ ಅವರ ಮುಂದಿನ ಸಿನಿಮಾವೂ ಬ್ಲಾಕ್ ಬಸ್ಟರ್ ಆಗಲಿದೆ ಎಂದು ಅವರ ಅಭಿಮಾನಿಗಳು ನಿರೀಕ್ಷೆಯಲ್ಲಿದ್ದಾರೆ.