'ಗಾಡ್ ಫಾದರ್', 'ಹಿಟ್ಲರ್' ಸಿನಿಮಾಗಳ ಖ್ಯಾತಿಯ ನಿರ್ದೇಶಕ ಸಿದ್ಧಿಕಿ ವಿಧಿವಶ

ಮಲಯಾಳಂ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಡೈರೆಕ್ಟರ್ ಸಿದ್ಧಿಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಸಿದ್ಧಿಕಿ
ಸಿದ್ಧಿಕಿ

ಕೊಚ್ಚಿ: ಮಲಯಾಳಂ, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಡೈರೆಕ್ಟರ್ ಸಿದ್ಧಿಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಗಾಡ್​ಫಾದರ್​’, ‘ಕಾಬೂಲಿವಾಲಾ’ ಸೇರಿದಂತೆ ಅನೇಕ ಸೂಪರ್ ಹಿಟ್​  ಸಿನಿಮಾ ನಿರ್ದೇಶನ ಮಾಡಿದ ಸಿದ್ಧಿಕಿ ಅವರಿಗೆ ಸೋಮವಾರ ಹೃದಯಾಘಾತ ಆಗಿತ್ತು, ನಿನ್ನೆ ರಾತ್ರಿ 9.10ಕ್ಕೆ ಮೃತಪಟ್ಟಿದ್ದಾರೆ. ಅವರಿಗೆ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು ಇದ್ದಾರೆ.

ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಅವರು ಸುಮಾರು ಒಂದು ತಿಂಗಳಿನಿಂದ ಅಮೃತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ಹೃದಯಾಘಾತವಾಗಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಸಿದ್ಧಿಕಿ ಅವರ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ರಾಜೀವ್‌ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಈಗ ಸಿದ್ಧಿಕಿ ಅವರಿಗೆ 68 ವರ್ಷ ವಯಸ್ಸಾಗಿದ್ದು, ಹಲವು ವರ್ಷಗಳಿಂದ ಸಿದ್ಧಿಕಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಗೆಳೆಯ ಲಾಲ್​ ಜೊತೆ ಸೇರಿ ಅವರು ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.

1986ರಲ್ಲಿ ತೆರೆಕಂಡ 'ಪಪ್ಪನ್ ಪ್ರಿಯಪ್ಪೆತ್ತ ಪಪ್ಪನ್‌' ಸಿನಿಮಾಗೆ ಚಿತ್ರಕತೆ ಬರೆಯುವುದರೊಂದಿಗೆ ಸಿನಿ ಪಯಣ ಆರಂಭಿಸಿದ ಸಿದ್ಧಿಕಿ, 1989ರಲ್ಲಿ ಬಿಡುಗಡೆಯಾದ 'ರಾಮ್‌ಜಿ ರಾವ್‌ ಸ್ಪೀಕಿಂಗ್‌' ಸಿನಿಮಾ ಮೂಲಕ ನಿರ್ದೇಶಕರಾದರು. ಅವರು ನಿರ್ದೇಶನ ಮಾಡಿರುವ ಕೊನೇ ಸಿನಿಮಾ 'ಬಿಗ್‌ ಬ್ರದರ್‌' 2020ರಲ್ಲಿ ಬಿಡುಗಡೆಯಾಗಿದೆ. ಮಲಯಾಳಂ ಮಾತ್ರವಲ್ಲದೆ ತಮಿಳು, ಹಿಂದಿಯಲ್ಲೂ ಸಿನಿಮಾ ನಿರ್ದೇಶಿಸಿದ ಖ್ಯಾತಿ ಅವರದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com