ಮೇಘನಾ ರಾಜ್ ಕಮ್ ಬ್ಯಾಕ್ ಸಿನಿಮಾ 'ತತ್ಸಮ-ತದ್ಭವ' ರಿಲೀಸ್ ಡೇಟ್ ಫಿಕ್ಸ್!
ಮೇಘನಾ ರಾಜ್ ಅಭಿನಯದ ಕ್ರೈಮ್ ಥ್ರಿಲ್ಲರ್ ಸಿನಿಮಾ ತತ್ಸಮ-ತದ್ಭವ ಸಿನಿಮಾ ಶೂಟಿಂಗ್ ಮುಗಿದಿದ್ದು ಬಿಡುಗಡೆಗೆ ಸಜ್ಜಾಗಿದೆ. ಕನ್ನಡ ಚಿತ್ರರಂಗದಲ್ಲಿ ಬಹು ಸಮಯದಿಂದ ಗುರುತಿಸಿಕೊಂಡಿರುವ ನಟಿ ಮೇಘನಾ ರಾಜ್ ಸಣ್ಣ ಬ್ರೇಕ್ ಬಳಿಕ ಸಿನಿಮಾಗೆ ಮರಳಿದ್ದಾರೆ. ವಿಶಾಲ್ ಆತ್ರೇಯ ನಿರ್ದೇಶನ ಮಾಡಿರುವ 'ತತ್ಸಮ ತದ್ಭವ' ಸೆಪ್ಟಂಬರ್ 15 ರಂದು ಥಿಯೇಟರ್ ಗಳಲ್ಲಿ ರಿಲೀಸ್ ಆಗಲಿದೆ.
ಈ ಹಿಂದೆ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು ಮೆಚ್ಚುಗೆ ಪಡೆದಿತ್ತು, ಸಿನಿಮಾದಲ್ಲಿ ಮೇಘನಾ ತನ್ನ ಪತಿ ನಾಪತ್ತೆಯಾಗಿದ್ದಾರೆಂದು ದೂರು ಸಲ್ಲಿಸುವ ದೃಶ್ಯವಿದೆ, ಪೊಲೀಸ್ ಅಧಿಕಾರಿಯಾಗಿ ಪ್ರಜ್ವಲ್ ದೇವರಾಜ್ ನಟಿಸಿದ್ದಾರೆ.
ಚಿತ್ರವು ಮೇಘನಾ ರಾಜ್ ಅವರ ಸ್ನೇಹಿತರ ಗುಂಪನ್ನು ಒಟ್ಟುಗೂಡಿಸುತ್ತದೆ, PBS studios 4 ಬ್ಯಾನರ್ ಅಡಿಯಲ್ಲಿ ನಿರ್ದೇಶಕ ಪನ್ನಗ ಭರಣ ಅವರು ನಿರ್ಮಾಪಕರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ, ವಾಸುಕಿ ವೈಭವ್ ಅವರ ಸಂಗೀತ ಸಂಯೋಜನೆ ಮತ್ತು ಶ್ರೀನಿವಾಸ್ ರಾಮಯ್ಯ ಅವರ ಛಾಯಾಗ್ರಹಣವಿದೆ.
ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಮೇಘನಾ ರಾಜ್, ಉಪೇಂದ್ರ ಅವರ ಬುದ್ಧಿವಂತ 2 ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ