
80 ದಶಕದ ಟಾಪ್ ನಟಿಯರ ಪೈಕಿ ಮಹಾಲಕ್ಷ್ಮಿ ಕೂಡ ಒಬ್ಬರು. ಸ್ವಾಭಿಮಾನ, ಪರಶು ರಾಮ, ಸಂಸಾರ ನೌಕೆಯಂತಹ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದ ಮಹಾಲಕ್ಷ್ಮಿ ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರು. ಈಗ ಸುಮಾರು 30 ವರ್ಷಗಳ ನಂತರ ಕನ್ನಡ ಧಾರಾವಾಹಿಯ ಮೂಲಕ ಮರಳುತ್ತಿದ್ದಾರೆ.
ಸ್ಟಾರ್ ಸುವರ್ಣದಲ್ಲಿ ಹೊಸ ಧಾರಾವಾಹಿ ಪ್ರಸಾರ ಆಗುತ್ತಿದೆ. ಅದುವೇ 'ಕಾವೇರಿ ಕನ್ನಡ ಮೀಡಿಯಂ'. ಈ ಧಾರಾವಾಹಿಯಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ. ಇಡೀ ಮನೆಯ ಮುಖ್ಯಸ್ಥೆ ಅಜ್ಜಿಯ ಪಾತ್ರದಲ್ಲಿ ಮಹಾಲಕ್ಷ್ಮಿ ನಟಿಸುತ್ತಿದ್ದಾರೆ.
ಧಾರಾವಾಹಿಯಲ್ಲಿ ಇವರದ್ದು ಮೋಸ್ಟ್ ಪವರ್‌ಫುಲ್ ಪಾತ್ರ. ಎಲ್ಲರನ್ನೂ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವ ಪಾತ್ರವಿದೆ. ಶಿಸ್ತಿನ ಅಜ್ಜಿ. ಕಾವೇರಿಗೆ ಸದಾ ಬೆಂಬಲವಾಗಿ ನಿಲ್ಲುವ ಅಜ್ಜಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕಾವೇರಿ ಕನ್ನಡ ಮೀಡಿಯಂ' ಇದೇ ಆಗಸ್ಟ್ 28ರಿಂದ ರಾತ್ರಿ 7.30 ಕ್ಕೆ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗಲಿದೆ.
Advertisement