ಹಳೆ ಮುನಿಸು ಮರೆತು ಮತ್ತೆ ಒಂದಾದರೇ ಕಿಚ್ಚ ಸುದೀಪ್-ದರ್ಶನ್?: ಸಂಸದೆ ಸುಮಲತಾ ಹುಟ್ಟುಹಬ್ಬ ಪಾರ್ಟಿಯಲ್ಲಿ ಇಬ್ಬರು ಮುಖಾಮುಖಿ

ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್(Kichcha Sudeep) ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star Darshan) ಅಭಿಮಾನಿಗಳಿಗೆ ಇದು ಖುಷಿಯ ಸಂಗತಿ ಎನ್ನಬಹುದು. ಈ ಇಬ್ಬರು ನಾಯಕ ನಟರು ಕೆಲವು ವೈಯಕ್ತಿಕ ಕಾರಣಗಳಿಂದ ಆರು ವರ್ಷಗಳ ಹಿಂದೆ ಮುನಿಸಿಕೊಂಡು ದೂರವಾಗಿದ್ದರು. 
ಸಂಸದೆ ಸುಮಲತಾ ಹುಟ್ಟುಹಬ್ಬ ಪಾರ್ಟಿಯಲ್ಲಿ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮತ್ತು ದರ್ಶನ್
ಸಂಸದೆ ಸುಮಲತಾ ಹುಟ್ಟುಹಬ್ಬ ಪಾರ್ಟಿಯಲ್ಲಿ ವೇದಿಕೆಯಲ್ಲಿ ಕಿಚ್ಚ ಸುದೀಪ್ ಮತ್ತು ದರ್ಶನ್
Updated on

ಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್(Kichcha Sudeep) ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star Darshan) ಅಭಿಮಾನಿಗಳಿಗೆ ಇದು ಖುಷಿಯ ಸಂಗತಿ ಎನ್ನಬಹುದು. ಈ ಇಬ್ಬರು ನಾಯಕ ನಟರು ಕೆಲವು ವೈಯಕ್ತಿಕ ಕಾರಣಗಳಿಂದ ಆರು ವರ್ಷಗಳ ಹಿಂದೆ ಮುನಿಸಿಕೊಂಡು ದೂರವಾಗಿದ್ದರು. 

ಎಷ್ಟರ ಮಟ್ಟಿಗೆ ಎಂದರೆ ಯಾವುದೇ ಕಾರ್ಯಕ್ರಮಗಳಲ್ಲಿ ಕೂಡ ಪರಸ್ಪರ ಮುಖಾಮುಖಿಯಾಗುತ್ತಿರಲಿಲ್ಲ. ಒಬ್ಬರ ಬಗ್ಗೆ ಮತ್ತೊಬ್ಬರು ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಾಗಲಿ, ಮಾತನಾಡುವುದು ಕೂಡ ಮಾಡುತ್ತಿರಲಿಲ್ಲ. ಆದರೆ ನಿನ್ನೆ ನಡೆದ ಬೆಳವಣಿಗೆ ಇಬ್ಬರ ಸಿನಿವೃತ್ತಿಗೆ, ವೈಯಕ್ತಿಕ ಜೀವನಕ್ಕೆ ಮತ್ತು ಸ್ಯಾಂಡಲ್ ವುಡ್ ಪಾಲಿಗೂ ಉತ್ತಮ ಬೆಳವಣಿಗೆ ಎನ್ನಬಹುದು.

ಕಳೆದ ರಾತ್ರಿ ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಸಂಸದೆ ಹಾಗೂ ನಟಿ ಸುಮಲತಾ ಅಂಬರೀಷ್ ಅವರ 60ನೇ ವರ್ಷದ ಹುಟ್ಟುಹಬ್ಬ ಕಾರ್ಯಕ್ರಮ ಸಂಭ್ರಮದಿಂದ ನಡೆದಿತ್ತು. ಅದರಲ್ಲಿ ದರ್ಶನ್ ಮತ್ತು ಕಿಚ್ಚ ಸುದೀಪ್ ಇಬ್ಬರೂ ಕಾಣಿಸಿಕೊಂಡಿದ್ದಾರೆ. ಸುಮಲತಾ ಮಧ್ಯಸ್ಥಿಕೆಯಲ್ಲಿ ರಾಕ್ ಲೈನ್ ವೆಂಕಟೇಶ್ ಮುಂದಾಳತ್ವದಲ್ಲಿ ಇಬ್ಬರ ಮಧ್ಯೆ ರಾಜಿ ಸಂಧಾನ ನಡೆದಿತ್ತಾ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.

ಸುಮಲತಾ ಅವರೇ ಸಂಧಾನ ಮಾಡಿಸಿದ್ದಾರೆ ಎನ್ನುವ ಮಾತು ಕೇಳಿಬಂದಿದ್ದು ಅದಕ್ಕೆ ಪೂರಕವೆಂಬಂತೆ ಪಾರ್ಟಿಯಲ್ಲಿ ಇಬ್ಬರೂ ಕಾಣಿಸಿಕೊಂಡಿದ್ದ ವಿಡಿಯೋಗಳೂ, ಫೋಟೋಗಳು ಇಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. 

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com