ಸೌತ್ ಸ್ಟಾರ್ ವಿಜಯ್ ಪುತ್ರ ಜೇಸನ್​ ಸಂಜಯ್​ ನಿರ್ದೇಶಕನಾಗಿ ಕಾಲಿವುಡ್ ಗೆ ಎಂಟ್ರಿ

ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.
ಜೇಸನ್​ ಸಂಜಯ್ -  ವಿಜಯ್
ಜೇಸನ್​ ಸಂಜಯ್ - ವಿಜಯ್

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರು ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಜೇಸನ್​ ಸಂಜಯ್​ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಪ್ರತಿಷ್ಠಿತ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆ ಬಂಡವಾಳ ಹೂಡಲಿದೆ. ಸೋಶಿಯಲ್​ ಮೀಡಿಯಾ ಮೂಲಕ ಈ ಹೊಸ ಸುದ್ದಿಯನ್ನು ‘ಲೈಕಾ ಪ್ರೊಡಕ್ಷನ್ಸ್​’ ಹಂಚಿಕೊಂಡಿದೆ.

ಕತ್ತಿ, ದರ್ಬಾರ್, ವಡಾ ಚೆನ್ನೈ, ಪೊನ್ನಿಯಿನ್ ಸೆಲ್ವನ್ ಮತ್ತು ಇಂಡಿಯನ್ 2 ನಂತಹ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ಮಿಸಿದ ಖ್ಯಾತಿ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆಗೆ ಸಲ್ಲುತ್ತದೆ.

ನಮ್ಮ ಮುಂದಿನ ಸಿನಿಮಾ ಜೇಸನ್ ಸಂಜಯ್ ಜೊತೆ ಎಂಬುದನ್ನು ತಿಳಿಸಲು ಖುಷಿ ಆಗುತ್ತಿದೆ. ಜೇಸನ್ ಅವರು ಲಂಡನ್‌ನಲ್ಲಿ ಶಿಕ್ಷಣ ಪಡೆದುಕೊಂಡಿದ್ದಾರೆ. ಟೊರಾಂಟೋ ಫಿಲ್ಮ್​ ಸ್ಕೂಲ್​ನಲ್ಲಿ ಸಿನಿಮಾ ಮೇಕಿಂಗ್​ ಬಗ್ಗೆ ಡಿಪ್ಲೊಮಾ ಪಡೆದಿದ್ದಾರೆ. ಅವರು ತಮ್ಮ ಸ್ಕ್ರಿಪ್ಟ್​ ವಿವರಿಸಿದಾಗ ನಮಗೆ ಒಂದು ಸಿನಿಮೀಯ ಅನುಭವ ನೀಡಿತು. ಆದ್ದರಿಂದ ನಾವು ನಿರ್ಮಾಣ ಮಾಡಲು ಮುಂದಾದೆವು. ನಿರ್ದೇಶಕರಿಗೆ ಇರಬೇಕಾದ ಎಲ್ಲ ಮುಖ್ಯ ಗುಣಗಳು ಜೇಸನ್​ ಸಂಜಯ್​ ಅವರಿಗೆ ಇದೆ ಎಂದು ನಿರ್ಮಾಪಕ ಸುಭಾಸ್ಕರ್ ಅವರು​ ಹೇಳಿದ್ದಾರೆ.

ಜೇಸನ್ ಸಂಜಯ್ ಅವರು ಈ ಹಿಂದೆ ಪುಲ್ ದಿ ಟ್ರಿಗರ್ ಎಂಬ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com