ಸ್ಯಾಂಡಲ್‌ವುಡ್‌ನಲ್ಲಿ ದಿಗ್ಗಜರ ದೋಸ್ತಿ ಜಪ: ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ 'ಮಾರ್ಮಿಕ' ಪೋಸ್ಟ್ ವೈರಲ್!

ಸ್ಯಾಂಡಲ್‌ವುಡ್‌ನಲ್ಲಿನ ಇತ್ತೀಚಿನ ಕೆಲ ಬದಲಾವಣೆಗಳು ಶುಭ ಸೂಚನೆಯನ್ನು ನೀಡಿದ್ದವು. ದೂರವಾಗಿದ್ದ ಚಂದನವನದ ಬಹುಕಾಲದ ಸ್ನೇಹಿತರು ಮತ್ತೆ ಬಂದಾಗುವ ಸುಳಿವು ಸಿಕ್ಕಿತ್ತು. ಹರಿದಾಡಿದ ವಿಡಿಯೋ ನೋಡಿದ ಅಭಿಮಾನಿಗಳು ಕಿಚ್ಚ, ದರ್ಶನ್‌ ಒಂದಾದರು ಎಂದೇ ಮಾತನಾಡಿಕೊಂಡಿತ್ತು.
ದರ್ಶನ್ ಪೋಸ್ಟ್
ದರ್ಶನ್ ಪೋಸ್ಟ್
Updated on

ಸ್ಯಾಂಡಲ್‌ವುಡ್‌ನಲ್ಲಿನ ಇತ್ತೀಚಿನ ಕೆಲ ಬದಲಾವಣೆಗಳು ಶುಭ ಸೂಚನೆಯನ್ನು ನೀಡಿದ್ದವು. ದೂರವಾಗಿದ್ದ ಚಂದನವನದ ಬಹುಕಾಲದ ಸ್ನೇಹಿತರು ಮತ್ತೆ ಬಂದಾಗುವ ಸುಳಿವು ಸಿಕ್ಕಿತ್ತು. ಹರಿದಾಡಿದ ವಿಡಿಯೋ ನೋಡಿದ ಅಭಿಮಾನಿಗಳು ಕಿಚ್ಚ, ದರ್ಶನ್‌ ಒಂದಾದರು ಎಂದೇ ಮಾತನಾಡಿಕೊಂಡಿತ್ತು.

ಹಿರಿಯ ನಟಿ ಸುಮಲತಾ ಅಂಬರೀಷ್ ಹುಟ್ಟುಹಬ್ಬ ಸಮಾರಂಭದಲ್ಲಿ ನಟರಾದ ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಕಾಣಿಸಿಕೊಂಡ ನಂತರ ಇಬ್ಬರು ಸ್ಯಾಂಡಲ್ ವುಡ್ ದಿಗ್ಗಜರ ಜೋಡಿ ಒಂದಾಗಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ನಡುವೆ ನಟ ದರ್ಶನ್ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿರುವ ಮಾರ್ಮಿಕ ಪೋಸ್ಟ್ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ.  "ಏಕಾಂಗಿಯಾಗಿರಿ, ಸಂತೋಷವಾಗಿರಲು. ಸಂತೋಷವಾಗಿರಿ, ಏಕಾಂಗಿಯಾಗಿರಲು. ನನ್ನ ಸೆಲೆಬ್ರಿಟಿಗಳೊಂದಿಗೆ" ಎಂಬ ಪೋಸ್ಟ್‌ ಹಾಕಿದ್ದಾರೆ. ಈ ಮೂಲಕ ನಾನು ಒಂಟಿ ಎಂಬ ಸುಳಿವು ನೀಡಿದ್ದಾರೆ ದರ್ಶನ್‌.

ದರ್ಶನ್‌ ಅವರ ಈ ಪೋಸ್ಟ್‌ ನೋಡಿದ ಇಬ್ಬರ ಅಭಿಮಾನಿಗಳು ಮತ್ತೆ ಮೌನಕ್ಕೆ ಜಾರಿದ್ದಾರೆ. ಇನ್ನೇನು ಎಲ್ಲವೂ ಒಳ್ಳೆಯದಾಗಲಿದೆ. ಇಬ್ಬರೂ ಒಂದಾಗಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದ್ದಂತೆ, ಅದೆಲ್ಲವೂ ಸುಳ್ಳು ಎಂದು ದರ್ಶನ್‌ ತಮ್ಮ ಪೋಸ್ಟ್‌ ಮೂಲಕ ಹೇಳಿದಂತಿದೆ.

ಆಗಸ್ಟ್ 28 ರಂದು ನಟ ದರ್ಶನ್ ಕಾಲಾಯ ತಸ್ಮೈ ನಮಃ ಎಂಬ ಅಡಿಬರಹದ ಜೊತೆ ಜೋಡೆತ್ತುಗಳ ಜೊತೆ ನಿಂತಿರುವ ಫೋಟೋ ಶೇರ್ ಮಾಡಿದ್ದರು. ಈ ಮೂಲಕ ಒಂದಾಗುವ ಸುಳಿವು ನೀಡಿದ್ದರು. ಈಗ ನನ್ನ ಸೆಲೆಬ್ರಿಟಿಗಳ ಜೊತೆ ಒಂಟಿಯಾಗಿರುವುದೇ ಉತ್ತಮ ಎಂದು ಹೊಸ ಪೋಸ್ಟ್ ಶೇರ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com