ಸಿಹಿ ಸುದ್ದಿ ಕೊಟ್ಟ ನಟಿ ಮೇಘನಾ ರಾಜ್: 'ತತ್ಸಮ ತದ್ಭವ' ಮೂಲಕ ಕಮ್ ಬ್ಯಾಕ್

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಆ ಪೋಸ್ಟ್ ಎಲ್ಲೆಡೆ ಹರಿದಾಡ್ತಾ ಇದ್ದು, ಜನ ಏನದು ಎಂದು ಕುತೂಹಲದಿಂದ ಚರ್ಚಿಸುತ್ತಿದ್ದರು.
ತತ್ಸಮ ತದ್ಭವ ಸಿನಿಮಾ ಸ್ಟಿಲ್
ತತ್ಸಮ ತದ್ಭವ ಸಿನಿಮಾ ಸ್ಟಿಲ್
Updated on

ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದರು. ಆ ಪೋಸ್ಟ್ ಎಲ್ಲೆಡೆ ಹರಿದಾಡ್ತಾ ಇದ್ದು, ಜನ ಏನದು ಎಂದು ಕುತೂಹಲದಿಂದ ಚರ್ಚಿಸುತ್ತಿದ್ದರು.

2020, ಭಾನುವಾರದ ದಿನ ನನ್ನ ಬದುಕು ಬದಲಾಯ್ತು. ಆಗಿನಿಂದಲೂ ನನಗೆ ಒಂದು ಪ್ರಶ್ನೆಯನ್ನು ಕೇಳಲಾಗುತ್ತಿದೆ. ಆ ಒಂದು ಪ್ರಶ್ನೆಗೆ ಉತ್ತರ ನೀಡುವ ಸಮಯ ಬಂದಿದೆ ಎಂದು ಮೇಘನಾ ರಾಜ್  ಪೋಸ್ಟ್ ಹಾಕಿದ್ದರು. ನೀವೆಲ್ಲರೂ ಕೇಳುತ್ತಿರುವ ಪ್ರಶ್ನೆಗೆ ಭಾನುವಾರ ಅಂದ್ರೆ ಇಂದು 10.35ಕ್ಕೆ ಉತ್ತರ ನೀಡಲಿದ್ದೇನೆ ಎಂದು ನಟಿ ಮೇಘನಾ ರಾಜ್ ಪೋಸ್ಟ್ ಹಾಕಿಕೊಂಡಿದ್ದಾರೆ.

ಮೇಘನಾ ಮತ್ತೆ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅವರು ವಿಶಾಲ್ ಅತ್ರೇಯ ಅವರ ತತ್ಸಮ ತದ್ಭವ ಎಂಬ ತನಿಖಾ ಕ್ರೈಮ್ ಥ್ರಿಲ್ಲರ್‌ ಸಿನಿಮಾವಾಗಿದೆ.  ಚಿತ್ರೀಕರಣ ಪೂರ್ಣಗೊಂಡ ನಂತರನಿರ್ಮಾಪಕರು ಚಿತ್ರದ ಶೀರ್ಷಿಕೆಯ ಜೊತೆಗೆ ಫಸ್ಟ್ ಲುಕ್ ಬಹಿರಂಗಪಡಿಸಿದ್ದಾರೆ.

ಕುತೂಹಲಕಾರಿಯಾಗಿ, ಶೀರ್ಷಿಕೆ ಪೋಸ್ಟರ್ ಅನ್ನು ನೂರಾರು ಸೆಲೆಬ್ರಿಟಿಗಳು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಏಕಕಾಲದಲ್ಲಿ ಅನಾವರಣಗೊಳಿಸಿದ್ದಾರೆ. ಅಷ್ಟೇ ಅಲ್ಲ ಜಗತ್ತಿನ 30ಕ್ಕೂ ಹೆಚ್ಚು ದೇಶಗಳಲ್ಲಿ ಕನ್ನಡಪರ ಸಂಘಟನೆಗಳೂ ತಮ್ಮ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಿವೆ.

ಗೆ ಈ ಸಿನಿಮಾ ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರ ಆತ್ಮೀಯ ಗೆಳೆಯ ಪನ್ನಗಾಭರಣ ಹಾಗೂ ಸ್ನೇಹಿತರು ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಈ ಸಿನಿಮಾದ ಬಗ್ಗೆ ಹೇಳಿರುವ ನಟಿ ಮೇಘನಾ ರಾಜ್‌, ‘ಈ ಚಿತ್ರದಲ್ಲಿ ನಾನು ಮಧ್ಯಮ ವರ್ಗದ ಹುಡುಗಿಯ ಪಾತ್ರದಲ್ಲಿದ್ದೇನೆ. ಇದೊಂದು ಥ್ರಿಲ್ಲರ್‌ ಕಥಾನಕ. ಆಡಿಯನ್ಸ್‌ ಸಹ ಈ ಕಥೆಯ ಜತೆಗೆ ಟ್ರಾವೆಲ್‌ ಮಾಡುವಂತಹ ಸಿನಿಮಾವಿದು.

ಆಟಗಾರ ಸಿನಿಮಾದ ನಂತರ ನಾನು ಥ್ರಿಲ್ಲರ್‌ ಸಬ್ಜೆಕ್ಟ್ಗಳನ್ನು ಟ್ರೈ ಮಾಡಿರಲಿಲ್ಲ. ತತ್ಸಮ ತದ್ಭವ ಸಿನಿಮಾ ನನ್ನ ಕರಿಯರ್‌ನಲ್ಲಿ ಇದುವರೆಗೆ ಟ್ರೈ ಮಾಡದೇ ಇದ್ದಂತಹ ಸಿನಿಮಾವಾಗಲಿದೆ. ಈ ಸಿನಿಮಾ ಮತ್ತು ಪಾತ್ರದ ಜತೆಗೆ ನನಗೆ ಪರ್ಸನಲ್‌ ಕನೆಕ್ಟ್ ಇದೆ’ ಎಂದಿದ್ದಾರೆ.

‘ಕಳೆದ ವರ್ಷ ಪನ್ನಗಭರಣ ಅವರು ವಿಶಾಲ್‌ ಅತ್ರೇಯರನ್ನು ಕಳುಹಿಸಿ ನನಗೆ ಕಥೆ ಕೇಳಲು ಹೇಳಿದರು. ಅವರು ಬಂದಾಗ ನನ್ನ ಅಭಿಪ್ರಾಯಕ್ಕಾಗಿ ಬಂದಿದ್ದಾರೆ ಎಂದುಕೊಂಡೆ. ಆದರೆ ಕಥೆ ಕೇಳಿದ ತಕ್ಷಣ ನಾನು ಆ ಪಾತ್ರಕ್ಕೆ ಕನೆಕ್ಟ್ ಆದೆ. ನಾನೇ ಆ ಪಾತ್ರವಾದೆ. ಪನ್ನಗರಿಗೆ ಕರೆ ಮಾಡಿ ಇದೊದು ಅದ್ಭುತ ಸ್ಕ್ರಿಪ್ಟ್‌. ನೀನು ಮುಂದುವರೆಯಬಹುದು ಎಂದೆ.

ಆಗ ಅವರು ನೀನು ಸಿದ್ಧವಾದರೆ ನಾನು ಈ ಸಿನಿಮಾ ಮಾಡುತ್ತೇನೆ ಎಂದರು. ಆಗ ನನಗೂ ಒಂದೊಳ್ಳೆಯ ಪ್ರಾಜೆಕ್ಟ್ ಮೂಲಕ ಕಮ್‌ಬ್ಯಾಕ್‌ ಮಾಡಬೇಕು ಎಂದಿತ್ತು. ಅದನ್ನು ಈ ಸಿನಿಮಾ ಮೂಲಕ ಮಾಡುತ್ತಿದ್ದೇನೆ’ ಎಂದು ಮೇಘನಾ ರಾಜ್‌ ವಿವರಿಸಿದ್ದಾರೆ.

ವಿಶಾಲ್ ಆತ್ರೇಯ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಈ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಆಗ ಟೈಟಲ್‌ ಬಗ್ಗೆ ಮಾತ್ರ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಈಗ ಮಹಾಶಿವರಾತ್ರಿಯ ಈ ಸಂದರ್ಭದಲ್ಲಿ ಟೈಟಲ್ ಅನೌನ್ಸ್ ಮಾಡಿದ್ದಾರೆ.

ಸದ್ಯ ಟೈಟಲ್ ಬಗ್ಗೆ ಕುತೂಹಲ ಮೂಡಿಸಿದ್ದು, " ಭಯ ನಿಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡಾಗ, ಭಯವಿಲ್ಲದ ಹೊರಬರುವುದೇ ನಿಮಗೆ ಉಳಿದಿರುವ ದಾರಿ" ಎಂದು ಪೋಸ್ಟರ್ ಶೇರ್ ಮಾಡಿ, ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ತತ್ಸಮ ತದ್ಭವ ಚಿತ್ರದಲ್ಲಿ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದ ಮೇಘನಾ, “ನಾನು ಕೇವಲ ನಟಿಯಾಗಿ ಸೆಟ್‌ಗೆ ಹೋಗಿಲ್ಲ. ಇದು ನನ್ನ ಹೋಮ್ ಬ್ಯಾನರ್‌ ನಂತಿದೆ,  ನಾನು ಚಲನಚಿತ್ರ ನಿರ್ಮಾಣದ ಪ್ರತಿಯೊಂದು  ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದೇನೆ. ಇದು ತುಂಬಾ ವೈಯಕ್ತಿಕ ಅನಿಸಿತು. ಈ ಪಾತ್ರಕ್ಕೆ ಭಾವನಾತ್ಮಕ ಅಂಶ ಅವಶ್ಯಕತೆಯಿತ್ತು, ನಾನು ಈ ಸಿನಿಮಾಗಾಗಿ ಶೇ.100 ರಷ್ಠು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com