ಬಾಲಿವುಡ್ ಗೆ ಹೊರಟ 'ಕಾಂತಾರ' ಚೆಲುವೆ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ವ್ಯಾಕ್ಸಿನ್ ವಾರ್' ನಲ್ಲಿ ಸಪ್ತಮಿ ಗೌಡ!
ರಿಷಬ್ ಶೆಟ್ಟಿಯ ಕಾಂತಾರ ಚಿತ್ರದ ಅದ್ಭುತ ಯಶಸ್ಸಿನ ನಂತರ ಮನೆಮಾತಾಗಿರುವ ಸಪ್ತಮಿ ಗೌಡ ಅವರಿಗೆ ದೊಡ್ಡ ಬಾಲಿವುಡ್ ಬ್ರೇಕ್ ಸಿಕ್ಕಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ಚಿತ್ರ ದಿ ವ್ಯಾಕ್ಸಿನ್ ವಾರ್ ಮೂಲಕ ಸಪ್ತಮಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
Published: 13th January 2023 02:23 PM | Last Updated: 13th January 2023 07:08 PM | A+A A-

ಸಪ್ತಮಿ ಗೌಡ
ಬೆಂಗಳೂರು: ರಿಷಬ್ ಶೆಟ್ಟಿಯ ಕಾಂತಾರ ಚಿತ್ರದ ಅದ್ಭುತ ಯಶಸ್ಸಿನ ನಂತರ ಮನೆಮಾತಾಗಿರುವ ಸಪ್ತಮಿ ಗೌಡ ಅವರಿಗೆ ದೊಡ್ಡ ಬಾಲಿವುಡ್ ಬ್ರೇಕ್ ಸಿಕ್ಕಿದೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಮುಂಬರುವ ಚಿತ್ರ ದಿ ವ್ಯಾಕ್ಸಿನ್ ವಾರ್ ಮೂಲಕ ಸಪ್ತಮಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ದಿ ವ್ಯಾಕ್ಸಿನ್ ವಾರ್‌ನಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಪಲ್ಲವಿ ಜೋಶಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅನುಪಮ್ ಖೇರ್, ನಾನಾ ಪಾಟೇಕರ್ ಮತ್ತು ದಿವ್ಯಾ ಸೇಠ್ ಇತರರು ಇದ್ದಾರೆ.
ವ್ಯಾಕ್ಸಿನ್ ವಾರ್ ಸಿನಿಮಾದಲ್ಲಿ ಸಪ್ತಮಿ ಗೌಡ ನಟಿಸುತ್ತಿದ್ದಾರೆ. ಲಕ್ನೋ ಭಾಗದ ಶೂಟಿಂಗ್ ಮುಗಿಸಿದ್ದು, ಹೈದರಾಬಾದ್ ಶೆಡ್ಯೂಲ್ ನಲ್ಲಿ ಸಪ್ತಮಿಗೌಡ ಭಾಗವಹಿಸಲಿದ್ದಾರೆ, ಮುಂದಿನ ಕೆಲ ದಿನಗಳಲ್ಲಿ ಶೂಟಿಂಗ್ ಆರಂಭವಾಗಲಿದೆ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.
'ನಾನು 'ಕಾಂತಾರ' ಸಿನಿಮಾವನ್ನು ನೋಡಿದ್ದೆ. ಅದರಲ್ಲಿ ಲೀಲಾ ಪಾತ್ರದಲ್ಲಿ ಸಪ್ತಮಿ ಗೌಡ ಅವರ ನಟನೆಯು ನನಗೆ ತುಂಬ ಇಷ್ಟವಾಗಿತ್ತು. ಹಾಗಾಗಿ, ಅವರನ್ನು ಸಿನಿಮಾಕ್ಕೆ ನಮ್ಮ ಆಯ್ಕೆ ಮಾಡಬೇಕು ಎಂದು ನಿರ್ಧರಿಸಿದೆ. ನಾನು ಈ ಬಗ್ಗೆ ಸಪ್ತಮಿಗೆ ಕರೆಮಾಡಿ, ಅಪ್ರೋಚ್ ಮಾಡಿದೆ. ಕೂಡಲೇ ಅವರು ನಟಿಸಲು ಒಪ್ಪಿಕೊಂಡರು. ಅವರು 'ದಿ ವ್ಯಾಕ್ಸಿನ್ ವಾರ್' ಸಿನಿಮಾದ ಭಾಗವಾಗಿರುವುದು ನನಗೆ ಖುಷಿ ನೀಡಿದೆ..' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 400 ಕೋಟಿ ರೂ. ಬಾಚಿದ ಕಾಂತಾರ: ನಟ ರಿಷಬ್ ಶೆಟ್ಟಿ- ಸಪ್ತಮಿಗೌಡಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತೆ?
ಉತ್ತರ- ದಕ್ಷಿಣ ಭಾರತದ ವಿಭಜನೆ ಮೆಟ್ಟಿ ನಿಂತು, ನಾನು ಭಾರತೀಯ ಚಲನಚಿತ್ರವನ್ನು ಮಾಡುತ್ತಿದ್ದೇನೆ. ಸರಿಯಾದ ಪಾತ್ರವರ್ಗವನ್ನು ತರಲು ಮತ್ತು ಅವರು ಎಲ್ಲಿಂದ ಬಂದರೂ ಉತ್ತಮ ನಟರೊಂದಿಗೆ ಕೆಲಸ ಮಾಡಲು ನಾವು ಬಯಸಿದ್ದೇವೆ ಎಂದಿದ್ದಾರೆ.
ವ್ಯಾಕ್ಸಿನ್ ವಾರ್ ಈ ವರ್ಷ ಆಗಸ್ಟ್ 15 ರಂದು ಹಿಂದಿ, ಇಂಗ್ಲಿಷ್, ಗುಜರಾತಿ, ಪಂಜಾಬಿ, ಭೋಜ್‌ಪುರಿ, ಬೆಂಗಾಲಿ, ಮರಾಠಿ, ತೆಲುಗು, ತಮಿಳು, ಕನ್ನಡ, ಉರ್ದು ಮತ್ತು ಅಸ್ಸಾಮಿ ಸೇರಿದಂತೆ 11 ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.