ಸ್ಫೂರ್ತಿಯಾದ ವ್ಯಕ್ತಿಗೆ ಎಲ್ಎಎಫ್ ಸಿಎ ಪ್ರಶಸ್ತಿ ಕಾರ್ಯಕ್ರಮದಲ್ಲಿ ಧನ್ಯವಾದ ಅರ್ಪಿಸಿದ ಎಂಎಂ ಕೀರವಾಣಿ
ಲಾಸ್ ಏಂಜಲೀಸ್: ಜಾಗತಿಕವಾಗಿ ಮನ್ನಣೆ ಗಳಿಸಿರುವ ಆರ್ ಆರ್ ಆರ್ ನ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಲಾಸ್ ಏಂಜಲೀಸ್ ಫಿಲ್ಮ್ಸ್ ಕ್ರಿಟಿಕ್ಸ್ ಅಸೋಸಿಯೇಷನ್ (ಎಲ್ಎಎಫ್ ಸಿಎ) ಪ್ರಶಸ್ತಿ ಕಾರ್ಯಕ್ರಮದಲ್ಲಿ ತಮಗೆ ಸ್ಪೂರ್ತಿಯಾದ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ.
ಅಮೇರಿಕನ್ ಸಂಗೀತ ನಿರ್ದೇಶಕ ಜಾನ್ ವಿಲಿಯಮ್ಸ್ ಅವರು ತಮಗೆ ಫಿಲ್ಮ್ ಸೌಂಡ್ ಟ್ರಾಕ್ ನಲ್ಲಿ ಸರಳತೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಟ್ಟರು ಎಂದು ಕೀರವಾಣಿ ಸ್ಮರಿಸಿದ್ದಾರೆ. ಮಿಲೇನಿಯಮ್ ಹೋಟೆಲ್ ಹಾಗೂ ರೆಸಾರ್ಟ್ಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೀರವಾಣಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಎಎಂ ಕೀರವಾಣಿ ಇದೇ ವೇಳೆ ತಮ್ಮಲ್ಲಿ ನಂಬಿಕೆ ಇಟ್ಟು ಸೃಜನಾತ್ಮಕ ಸ್ವಾತಂತ್ರ್ಯ ನೀಡಿದ ನಿರ್ದೇಶಕ ರಾಜಮೌಳಿ ಅವರಿಗೂ ಧನ್ಯವಾದ ತಿಳಿಸಿದ್ದಾರೆ.
ಹೇಗೆ ಸ್ಟೀವನ್ ಸ್ಪಿಲ್ಬರ್ಗ್ ನಿರ್ದೇಶನದ ಹಾರರ್ ಕ್ಲಾಸಿಕ್ ಸಿನಿಮಾ ಜಾಸ್ (Jaws) ತಾವು ಸಿನಿಮಾ ಸಂಗೀತವನ್ನು ನೋಡುವ ರೀತಿಯನ್ನೇ ಬದಲಿಸಿತು ಎಂಬುದನ್ನು ಕೀರವಾಣಿ ವಿವರಿಸಿದ್ದಾರೆ. ಈ ಸಿನಿಮಾದಲ್ಲಿನ ಹಾಡುಗಳನ್ನು ಅಮೇರಿಕನ್ ಸಂಗೀತ ನಿರ್ದೇಶಕ ಜಾನ್ ವಿಲಿಯಮ್ಸ್ ಸಂಯೋಜಿಸಿದ್ದು, ಅವರಿಗೆ ಎರಡನೇ ಅಕಾಡೆಮಿ ಅವಾರ್ಡ್ ಲಭಿಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ