ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಮಹಿಳಾ ಪ್ರಧಾನ ಸಿನಿಮಾದಲ್ಲಿ ಸಾನ್ವಿ ಶ್ರೀವಾಸ್ತವ್
ರಮೇಶ್ ಅರವಿಂದ್, ಹೇಮಾ ಪಂಚಮುಖಿ ಮತ್ತು ಅಕ್ಷಯ್ ಆನಂದ್ ಅಭಿನಯದ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೇರಿಕಾ ಅಮೇರಿಕಾ (1997) ರ ಬೆಳ್ಳಿ ಮಹೋತ್ಸವದ ವಾರ್ಷಿಕೋತ್ಸವವನ್ನು ಕಳೆದ ವರ್ಷ ಆಚರಿಸಲಾಯಿತು.
Published: 20th January 2023 12:16 PM | Last Updated: 20th January 2023 12:16 PM | A+A A-

ನಾಗತಿಹಳ್ಳಿ ಚಂದ್ರಶೇಖರ್ ಮತ್ತು ಸಾನ್ವಿ ಶ್ರೀವಾಸ್ತವ್
ರಮೇಶ್ ಅರವಿಂದ್, ಹೇಮಾ ಪಂಚಮುಖಿ ಮತ್ತು ಅಕ್ಷಯ್ ಆನಂದ್ ಅಭಿನಯದ ನಾಗತಿಹಳ್ಳಿ ಚಂದ್ರಶೇಖರ್ ಅವರ ಅಮೇರಿಕಾ ಅಮೇರಿಕಾ (1997) ರ ಬೆಳ್ಳಿ ಮಹೋತ್ಸವದ ವಾರ್ಷಿಕೋತ್ಸವವನ್ನು ಕಳೆದ ವರ್ಷ ಆಚರಿಸಲಾಯಿತು.
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕೌಟುಂಬಿಕ ಸಿನಿಮಾ ಮಾಡಲಿದ್ದಾರೆ ಎಂದು ಸಿನಿಮಾ ಎಕ್ಸ್ ಪ್ರೆಸ್ ಈ ಹಿಂದೆ ವರದಿ ಮಾಡಿತ್ತು, ಈಗ, ನಿರ್ದೇಶಕರು ಈ ಯೋಜನೆಯನ್ನು ಕಿಕ್‌ಸ್ಟಾರ್ಟ್ ಮಾಡಲು ಸಜ್ಜಾಗುತ್ತಿದ್ದಾರೆ, ಇದು ಫೆಬ್ರವರಿಯಲ್ಲಿ ಆರಂಭವಾಗಲಿದ್ದು, ಏಪ್ರಿಲ್‌ನಲ್ಲಿಶೂಟಿಂಗ್ ಗಾಗಿ ಯುಎಸ್‌ಎಗೆ ತೆರಳುವ ನಿರೀಕ್ಷೆಯಿದೆ.
ಈಗಾಗಲೇ ಕಥೆ ಸಿದ್ಧವಾಗಿದ್ದು, ಮಹಿಳಾ ಪ್ರಧಾನ ಸಿನಿಮಾ ಇದಾಗಿದೆ, ಅವನೇ ಶ್ರೀಮನ್ನಾರಾಯಣ ನಟಿ ಶಾನ್ವಿ ಶ್ರೀವಾಸ್ತವ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಉಳಿದ ಕಲಾವಿದರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದ್ದಾರೆ.
ಶೇಕಡ ಅರವತ್ತಕ್ಕೂ ಹೆಚ್ಚು ಶೂಟಿಂಗ್ ಅಮೆರಿಕಾದಲ್ಲಿ ನಡೆಯಲಿದೆ. ಸಿಯಾಟಲ್‌ನ ಸ್ಥಳಗಳಲ್ಲಿ ಶೂಟಿಂಗ್ ಮಾಡಲು ನಿರ್ದೇಶಕರು ಬಯಸಿದ್ದಾರೆ, ಇನ್ನೂ ಹೆಸರಿಡದ ಈ ಚಿತ್ರಕ್ಕೆ ಅಮೇರಿಕಾ ಅಮೇರಿಕಾ ಸಂಗೀತ ಸಂಯೋಜಕ ಮನೋ ಮೂರ್ತಿ ಸಂಗೀತ ನೀಡಲಿದ್ದಾರೆ. ಮಾನ್‌ಸೂನ್ ರಾಗ ಸಿನಿಮಾಕ್ಕಾಗಿ ಸಾಕಷ್ಟು ಪ್ರಶಂಸೆ ಗಳಿಸಿದ ಛಾಯಾಗ್ರಾಹಕ ಎಸ್‌ಕೆ ರಾವ್ ಕೂಡ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.