ಸಿಂಪಲ್ ಸುನಿ ನಿರ್ದೇಶನದ ಸಿನಿಮಾದಲ್ಲಿ ವಿನಯ್ ರಾಜ್ ಗೆ ಸ್ವಾತಿಷ್ಠ ಕೃಷ್ಣನ್ ನಾಯಕಿ!
ಸಿಂಪಲ್ ಸುನಿ ಮತ್ತು ವಿನಯ್ ರಾಜಕುಮಾರ್ ಇದೇ ಮೊದಲ ಬಾರಿ ಜೊತೆಯಾಗಿರುವ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಕನ್ನಡತಿ ಎನ್ನುವುದು ವಿಶೇಷವೇನಲ್ಲ. ಏಕೆಂದರೆ ಎಂದಿನಂತೆ ಸುನಿ ಕನ್ನಡದ ಹುಡುಗಿಯನ್ನೇ ಹುಡುಕಿದ್ದಾರೆ.
Published: 23rd January 2023 01:17 PM | Last Updated: 23rd January 2023 02:06 PM | A+A A-

ಸ್ವಾತಿಷ್ಠ ಕೃಷ್ಣನ್ ಮತ್ತು ವಿನಯ್ ರಾಜ್
ಸಿಂಪಲ್ ಸುನಿ ಮತ್ತು ವಿನಯ್ ರಾಜಕುಮಾರ್ ಇದೇ ಮೊದಲ ಬಾರಿ ಜೊತೆಯಾಗಿರುವ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಕನ್ನಡತಿ ಎನ್ನುವುದು ವಿಶೇಷವೇನಲ್ಲ. ಏಕೆಂದರೆ ಎಂದಿನಂತೆ ಸುನಿ ಕನ್ನಡದ ಹುಡುಗಿಯನ್ನೇ ಹುಡುಕಿದ್ದಾರೆ.
ಕಮಲ್ ಹಾಸನ್ ಅಭಿನಯದ ವಿಕ್ರಮ್ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವ ನಟಿ ಕನ್ನಡಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಆ ಚಿತ್ರದಲ್ಲಿ ನಟಿಸಿರುವ ಸ್ವತ್ತಿಷ್ಟ ನನ್ನ ಚಿತ್ರದ ಪಾತ್ರಕ್ಕೆ ಸೂಟ್ ಆಗುತ್ತಾರೆ ಎನಿಸಿತು. ಆಕೆಯ ವಿವರ ಜಾಲಾಡಿದಾಗ ಇನ್ನೂ ಖುಷಿಯಾಯಿತು. ಆಕೆ ಕನ್ನಡದ ಹುಡುಗಿ. ಉತ್ತರ ಕರ್ನಾಟಕವರು. ಪೂರ್ತಿ ಹೆಸರು ಸ್ವಾತಿಷ್ಠ ಕೃಷ್ಣನ್. ಸದ್ಯಕ್ಕೆ ಚೆನ್ನೈ ನಿವಾಸಿ. ವಿಕ್ರಂ ಚಿತ್ರದಲ್ಲಿ ಸ್ವಾತಿಷ್ಠ ಮಾಡಿದ್ದುದು ಪುಟ್ಟ ಪಾತ್ರ. ಕಮಲ್ ಹಾಸನ್ ಮಗ ಪ್ರಭಂಜನ್ ಇರುತ್ತಾನಲ್ಲ, ಆತನ ಪತ್ನಿಯ ಪಾತ್ರ. ನಿಮಿಷಗಳಷ್ಟೇ ತೆರೆಯ ಮೇಲಿದ್ದರೂ ಸ್ವಸ್ತಿಷ್ಟ ಗಮನ ಸೆಳೆದಿದ್ದರು.
ಮೈಸೂರು ರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ಹೊಸ ಸಿನಿಮಾ ಕಲಾವಿದರು ಮತ್ತು ತಂತ್ರಜ್ಞರು ಸೇರಿದಂತೆ ಹಲವು ಮಾಹಿತಿಗಳನ್ನು ಶೀಘ್ರದಲ್ಲೇ ನೀಡಲಿದ್ದಾರೆ. ವಿನಯ್ ರಾಜ್‌ಕುಮಾರ್ ಕೀರ್ತಿ ನಿರ್ದೇಶನದ ಅಂದೊಂದಿತ್ತು ಕಾಲ, ಶ್ರೀಲೇಶ್ ನಾಯರ್ ಅವರ ಪೆಪೆ ಮತ್ತು ಗ್ರಾಮಾಯಣ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ವಿನಯ್ ಚಿತ್ರದ ಹೊರತಾಗಿ, ಸುನಿಲ್ ಅವರ ಗತ ವೈಭವದಲ್ಲಿಯೂ ನಟಿಸುತ್ತಿದ್ದಾರೆ. ಫ್ಯಾಂಟಸಿ ಡ್ರಾಮಾದಲ್ಲಿ ದುಷ್ಯಂತ್ ಮತ್ತು ಆಶಿಕಾ ರಂಗನಾಥ್ ಮುಖ್ಯ ತಾರಾಗಣದಲ್ಲಿ ನಟಿಸಿದ್ದಾರೆ.