ದುಡ್ಡು ತಗೊಂಡು ಸುದೀಪ್ ಸಿನಿಮಾ ಮಾಡಿಕೊಡ್ತಿಲ್ಲ: ನಿರ್ಮಾಪಕರ ಆರೋಪಕ್ಕೆ 'ಕಿಚ್ಚ'ನ ಖಡಕ್ ರಿಯಾಕ್ಷನ್!

ನಟ ಸುದೀಪ್ ಅವರು ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ ಎಂಬ ನಿರ್ಮಾಪಕರ ಆರೋಪಕ್ಕೆ ಟ್ವೀಟ್ ಮೂಲಕ ಕಿಚ್ಚ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸುದೀಪ್
ಸುದೀಪ್
Updated on

ನಟ ಸುದೀಪ್ ಅವರು ನನಗೆ ಸಿನಿಮಾ ಮಾಡಿಕೊಡ್ತೀನಿ ಅಂತ 8 ವರ್ಷದಿಂದ ಹೇಳಿಕೊಂಡು ಬರುತ್ತಿದ್ದಾರೆ ಎಂಬ ನಿರ್ಮಾಪಕರ ಆರೋಪಕ್ಕೆ ಟ್ವೀಟ್ ಮೂಲಕ ಕಿಚ್ಚ ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಡಿಸೆಂಬರ್ 2022 ರಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೂಲಕ ಸುದೀಪ್ ಅವರಿಗೆ ಆರು ಪತ್ರಗಳನ್ನು ಬರೆದಿದ್ದೇನೆ, ಆದರೆ ಅವುಗಳಲ್ಲಿ ಒಂದಕ್ಕೆ ಮಾತ್ರ ಉತ್ತರಿಸಲಾಗಿದೆ ಎಂದು ಎಂಎನ್ ಕುಮಾರ್ ಆರೋಪ ಮಾಡಿದ್ದಾರೆ.

ಆಂಗ್ಲ ಭಾಷೆಯ ವಾಕ್ಯವನ್ನು ಉಲ್ಲೇಖಿಸಿರುವ ಸುದೀಪ್, ‘ಇದು ನಿಮಗೆ ತಿಳಿದಿರಲಿ. ಒಳ್ಳೆಯತನವು ಕುಶಲತೆ ಮತ್ತು ದುರುಪಯೋಗದ ಸಾಧನವಲ್ಲ. ಅದು ನಿಜವಾಗಿ ಪ್ರಕಾಶಿಸುತ್ತದೆ. ದುರಹಂಕಾರವು ಅದರ ಪ್ರಕಾಶವನ್ನು ಹಾಳುಮಾಡಲು ನಾನು ಬಿಡುವುದಿಲ್ಲ. ವಿನಮ್ರರಾಗಿರಿ ಮತ್ತು ಸತ್ಯವಂತರಾಗಿರಿ’ ಎಂದು ಅರ್ಥ ಬರುವ ಮಾತೊಂದನ್ನು ಪೋಸ್ಟ್ ಮಾಡಿರುವ ಸುದೀಪ್ ಈ ಕೋಟ್ ನನಗೆ ಇಷ್ಟವಾಯಿತು. ನೀವೂ ಓದಿ ಎಂದಿದ್ದಾರೆ.

ನಿರ್ಮಾಪಕರು ತಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ಸುದೀಪ್ ಈ ಟ್ವೀಟ್ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗಿವೆ, ಆದರೆ ಅವರ ಹಿತೈಷಿಗಳು ಹಾಗೂ ಹತ್ತಿರದವರು ಹೇಳುವ ಪ್ರಕಾರ, ಸುದೀಪ್ ಯಾರಿಗೂ ಹಿಂಜರಿಯುವುದಿಲ್ಲ, ತಮ್ಮ ವಿರುದ್ಧದ ಆರೋಪಗಳಿಗೆ ಅವರು ನೇರವಾಗಿಯೇ ಉತ್ತರ ತಿಳಿಸಲು ಬಯಸುತ್ತಾರೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com