ಸಮಂತಾ ರೀತಿ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ 'ನಂದ ಲವ್ಸ್ ನಂದಿತಾ' ಸಿನಿಮಾ ನಾಯಕಿ ನಂದಿತಾ ಶ್ವೇತಾ!

ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಫೇಮಸ್ ಆಗಿರುವ ನಟಿ ನಂದಿತಾ ಶ್ವೇತಾ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರಂತೆ. ಜಿಂಕೆ ಮರಿ ನಾ, ಜಿಂಕೆ ಮರಿ ನಾ ಎಂಬ ಹಾಡಿನ ಮೂಲಕ ನಟಿ ಭಾರೀ ಜನಪ್ರಿಯತೆ ಪಡೆದಿದ್ದಾರೆ.
ನಂದಿತಾ ಶ್ವೇತಾ
ನಂದಿತಾ ಶ್ವೇತಾ

ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಫೇಮಸ್ ಆಗಿರುವ ನಟಿ ನಂದಿತಾ ಶ್ವೇತಾ ವಿಚಿತ್ರ ಕಾಯಿಲೆಗೆ ತುತ್ತಾಗಿದ್ದಾರಂತೆ. ಜಿಂಕೆ ಮರಿ ನಾ, ಜಿಂಕೆ ಮರಿ ನಾ ಎಂಬ ಹಾಡಿನ ಮೂಲಕ ನಟಿ ಭಾರೀ ಜನಪ್ರಿಯತೆ ಪಡೆದಿದ್ದಾರೆ.

ಮೊದಲ ಚಿತ್ರ ಸೂಪರ್ ಹಿಟ್ ಆದರೂ ನಂತರ ಅವರು ಮತ್ತೆ ಸ್ಯಾಂಡಲ್​ವುಡ್​ನಲ್ಲಿ ನಟಿಸಲೇ ಇಲ್ಲ. ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿ ಬ್ಯುಸಿ ಆಗಿದ್ದು, ಕನ್ನಡ ಸಿನಿಮಾ ಮೂಲಕ ಫೇಮಸ್ ಆಗಿದ್ದಾರೆ.

ನಟಿ ನಂದಿತಾ ಶ್ವೇತಾ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅನಿಲ್ ನಿರ್ದೇಶನದ ಹಿಡಿಂಬ ಸಿನಿಮಾದಲ್ಲಿ ಓಂಕಾರ್ ಸಹೋದರ ಅಶ್ವಿನ್ ಬಾಬು ನಾಯಕನಾಗಿ ಹಾಗೂ ನಂದಿತಾ ಶ್ವೇತಾ ನಾಯಕಿಯಾಗಿ ನಟಿಸಿದ್ದಾರೆ. ನಂದಿತಾ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ಹಿಡಿಂಬ ಚಿತ್ರವನ್ನು ಸಸ್ಪೆನ್ಸ್ ಥ್ರಿಲ್ಲರ್ ಪರಿಕಲ್ಪನೆಯಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್​ನಿಂದ ಚಿತ್ರದ ಬಗ್ಗೆ ಉತ್ತಮ ನಿರೀಕ್ಷೆ ಮೂಡಿದೆ. ಈ ಚಿತ್ರ ಜುಲೈ 20 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾ ಪ್ರಚಾರದಲ್ಲಿ ನಟಿ ನಂದಿತಾ ಬ್ಯುಸಿ ಆಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ನಟಿ ನಂದಿತಾ ಶ್ವೇತಾ ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ತಿಳಿಸಿದ್ದಾರೆರೆ. ನಟಿ ನಂದಿತಾ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ.

ನಟಿ ನಂದಿತಾ ಶ್ವೇತಾ ಅವರು ತಮ್ಮ ‘ಹಿಡಿಂಬಾ’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕಾಗಿ ಸಖತ್ ವರ್ಕೌಟ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ತೂಕ ಇಳಿಸಿಕೊಳ್ಳುವ ಅನಿವಾರ್ಯತೆ ಇದ್ದ ಹಿನ್ನೆಲೆಯಲ್ಲಿ ತುಂಬಾ ಕಷ್ಟಪಟ್ಟಿದ್ದಾಗಿ ಹೇಳಿದ್ದಾರೆ.

ನಾನು ಫೈಬ್ರೊಮ್ಯಾಲ್ಗಿಯಾ ಎಂಬ ಸ್ನಾಯು ಅಸ್ವಸ್ಥತೆಯಿಂದ ಬಳಲುತ್ತಿದ್ದೇನೆ. ಇದರಿಂದಾಗಿ ನನ್ನ ಆರೋಗ್ಯದಲ್ಲಿ ಏರುಪೇರಾಗುತ್ತಿರುತ್ತದೆ. ಸ್ವಲ್ಪ ಕೆಲಸ ಮಾಡಿದರೂ ಸ್ನಾಯುಗಳಿಗೆ ತೊಂದರೆ ಉಂಟಾಗುತ್ತದೆ. ಆದ್ದರಿಂದ ಭಾರವಾದ ವ್ಯಾಯಾಮಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಭಾವುಕರಾಗಿರುವ ನಟಿ, ತಾವು ಈ ರಹಸ್ಯ ವಿಷಯವನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಫೈಬ್ರೊಮ್ಯಾಲ್ಗಿಯಾ (Fibromyalgia) ಎಂಬುದು ಸ್ನಾಯುಗಳ ಸಮಸ್ಯೆಯ ಕಾಯಿಲೆಯಾಗಿದ್ದು, ಇದರಿಂದ ಬಳಲುತ್ತಿರುವ ವ್ಯಕ್ತಿಯ ದೇಹದ ಸ್ನಾಯುಗಳು ಮತ್ತು ಕೀಲುಗಳಲ್ಲಿ ನೋವನ್ನು ಉಂಟು ಮಾಡುತ್ತದೆ. ಇದರಿಂದ ತೀವ್ರವಾಗಿ ಬಲು ಬೇಗನೆ ಆಯಾಸವಾಗುತ್ತದೆ. ಅಷ್ಟೇ ಅಲ್ಲದೇ, ನೆನಪಿನ ಶಕ್ತಿ ಕುಂದಿ ಮಾನಸಿಕ ರೋಗ ಲಕ್ಷಣಗಳನ್ನು ಉಂಟು ಮಾಡಬಹುದು ಎಂದು ನಟಿ ಹೇಳಿಕೊಂಡಿದ್ದಾರೆ. ಆದರೆ ‘ಹಿಡಿಂಬಿ’ ಚಿತ್ರಕ್ಕಾಗಿ ಇದನ್ನೆಲ್ಲಾ ಮೀರಿ ಕಸರತ್ತು ಮಾಡಿದ್ದೇನೆ. ನಿದ್ದೆಯಿಲ್ಲದೆ ದುಡಿದಿದ್ದೇನೆ. ಚಿತ್ರಕ್ಕಾಗಿ ಇಷ್ಟೆಲ್ಲ ಸಹಿಸಿಕೊಂಡು ತೂಕ ಇಳಿಸಿಕೊಂಡೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com