ಪ್ರಜ್ವಲ್ ದೇವರಾಜ್ ಮುಂದಿನ ಚಿತ್ರಕ್ಕೆ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಆ್ಯಕ್ಷನ್ ಕಟ್!
ಖ್ಯಾತ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಬದಲಾಗಿರುವ ತಂತ್ರಜ್ಞರ ಸಾಲಿಗೆ ಸೇರಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಮುಂದಿನ ಚಿತ್ರಕ್ಕೆ ಡ್ಯಾನ್ಸ್ ಮಾಸ್ಟರ್ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ.
Published: 17th July 2023 12:13 PM | Last Updated: 17th July 2023 01:27 PM | A+A A-

ಕಲೈಕುಮಾರ್ ಜೊತೆ ಪ್ರಜ್ವಲ್ ದೇವರಾಜ್
ಖ್ಯಾತ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಬದಲಾಗಿರುವ ತಂತ್ರಜ್ಞರ ಸಾಲಿಗೆ ಸೇರಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಮುಂದಿನ ಚಿತ್ರಕ್ಕೆ ಡ್ಯಾನ್ಸ್ ಮಾಸ್ಟರ್ ಆ್ಯಕ್ಷನ್ ಕಟ್ ಹೇಳಲು ಸಿದ್ಧರಾಗಿದ್ದಾರೆ.
ಜೂನಿಯರ್ ಡ್ಯಾನ್ಸರ್ ಮತ್ತು ಸಹಾಯಕರಾಗಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದ ಕಲೈ ಮಾಸ್ಟರ್, ತಮ್ಮ 23 ವರ್ಷಗಳ ವೃತ್ತಿ ಜೀವನದಲ್ಲಿ ಸುಮಾರು 13 ವರ್ಷಗಳ ಕಾಲ ನೃತ್ಯ ಸಂಯೋಜನೆ ಮಾಡುವ ಮೂಲಕ ಚಿತ್ರರಂಗಕ್ಕೆ ಕೊಡುಗೆ ನೀಡಿದ್ದಾರೆ.
ಇದನ್ನೂ ಓದಿ: ನಟ ಪ್ರಜ್ವಲ್ ದೇವರಾಜ್ ಜನ್ಮದಿನಕ್ಕೆ 'ಗಣ' ಸಿನಿಮಾದ ಟೀಸರ್ ಬಿಡುಗಡೆ!
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಅವರು ನಿರ್ದೇಶನದ ಚಿಂತನೆ ಪ್ರಾರಂಭಿಸಿದರು, ಉತ್ತಮ ಕಥಾಹಂದರದೊಂದಿಗೆ ಬಂದರು. ಈ ಯೋಜನೆಗಾಗಿ ಕೆಲವು ಬರಹಗಾರರೊಂದಿಗೆ ಚರ್ಚೆ ನಡೆಸಿದರು. ಈ ಹಿಂದೆ 1975 ಮತ್ತು ಇನ್ನೂ ಹೆಸರಿಡದ ಮತ್ತೊಂದು ಚಲನಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕಿ ಪ್ರತಿಭಾ, ರಾಜಲಕ್ಷ್ಮಿ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಮುಂಬರುವ ಈ ಚಿತ್ರವು ಕಮರ್ಷಿಯಲ್ ಎಂಟರ್‌ಟೈನರ್ ಆಗಲಿದೆ ಎಂದು ನಿ ಹೇಳಲಾಗಿದೆ.
ಅಕ್ಟೋಬರ್‌ನಲ್ಲಿ ಚಿತ್ರೀಕರಣವನ್ನು ಪ್ರಾರಂಭಿಸಲು ನಿರ್ದೇಶಕರು ಯೋಜಿಸುತ್ತಿದ್ದಾರೆ. ಸಂಪೂರ್ಣ ಶೂಟಿಂಗ್ ನಡೆಯುವ ಬೃಹತ್ ಸೆಟ್ ರಚಿಸಲು ಎರಡು ತಿಂಗಳ ಮುಂಚಿತವಾಗಿ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ. ಶೀರ್ಷಿಕೆ, ಉಳಿದ ತಾರಾಗಣ ಮತ್ತು ತಂತ್ರಜ್ಞರು ಸೇರಿದಂತೆ ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು.
ಇದನ್ನೂ ಓದಿ: ‘ಒಳ್ಳೆಯ ಕಂಟೆಂಟ್ ಬಹು ಭಾಷೆಗಳಲ್ಲಿ ಬಿಡುಗಡೆಯಾಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ’: ಪ್ರಜ್ವಲ್ ದೇವರಾಜ್
ಪ್ರಜ್ವಲ್ ಅಭಿನಯಿಸಿರುವ ಗಣ ಮತ್ತು ಮಾಫಿಯಾ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಗೆ ಕಾಯುತ್ತಿವೆ, ಇದರ ಜೊತೆಗೆ ಎಚ್ ಲೋಹಿತ್ ನಿರ್ದೇಶನದ ಮತ್ತೊಂದು ಸಿನಿಮಾದಲ್ಲಿಯೂ ಪ್ರಜ್ವಲ್ ನಟಿಸದ್ದಾರೆ. ಜಾಥಾರೆ ಎಂಬ ಪ್ಯಾನ್ ಇಂಡಿಯಾ ಯೋಜನೆಗಾಗಿ ಉದಯ್ ನಂದನವನಂ ಅವರೊಂದಿಗೆ ಕೈಜೋಡಿಸಲಿದ್ದಾರೆ.