KRG ಸ್ಟುಡಿಯೋಸ್ ಗೆ 6ರ ಸಂಭ್ರಮ: ಟಿವಿಎಫ್ ಸಂಸ್ಥೆಯ ಜೊತೆ ಮಹತ್ವದ ಒಪ್ಪಂದ

ದಕ್ಷಿಣ ಭಾರತದ ಹೆಸರಾಂತ ಸಂಸ್ಥೆ, ಪ್ರಾದೇಶಿಕ ಭಾಷೆಗಳ ಮೇಲೆ ನಿರ್ದಿಷ್ಟ ಗಮನ ಹೊಂದಿರುವ ಟಿವಿಎಫ್​​ ಮೋಷನ್ ಪಿಕ್ಚರ್ಸ್‌ನೊಂದಿಗೆ ಕೆಆರ್​ಜಿ ಸ್ಟುಡಿಯೋಸ್​ ಕೈ ಜೋಡಿಸಿದೆ. 
ಕಾರ್ತಿಕ್ ಗೌಡ ಮತ್ತು ಯೋಗಿ ರಾಜ್ ಜೊತೆ ಟಿವಿಎಫ್ ತಂಡ
ಕಾರ್ತಿಕ್ ಗೌಡ ಮತ್ತು ಯೋಗಿ ರಾಜ್ ಜೊತೆ ಟಿವಿಎಫ್ ತಂಡ
Updated on

ಕನ್ನಡ ಚಿತ್ರರಂಗದಲ್ಲಿ ಸಿನಿಪ್ರಿಯರಿಗೆ ವಿವಿಧ ರೀತಿಯ ಸಿನಿಮಾಗಳನ್ನು ಪರಿಚಯಿಸುತ್ತಿರುವ ಕೆಆರ್​ಜಿ ಸ್ಟುಡಿಯೋಸ್ ಸಂಸ್ಥೆ 6ನೇ ವರ್ಷದ ಸಂಭ್ರಮದಲ್ಲಿದೆ. ಈ ಖುಷಿ ವೇಳೆಯಲ್ಲಿ ಸಿನಿ ಪ್ರಿಯರಿಗೆ ಗುಡ್ ನ್ಯೂಸ್ ಒಂದನ್ನು ಕೊಟ್ಟಿದೆ.

ದಕ್ಷಿಣ ಭಾರತದ ಹೆಸರಾಂತ ಸಂಸ್ಥೆ, ಪ್ರಾದೇಶಿಕ ಭಾಷೆಗಳ ಮೇಲೆ ನಿರ್ದಿಷ್ಟ ಗಮನ ಹೊಂದಿರುವ ಟಿವಿಎಫ್​​ ಮೋಷನ್ ಪಿಕ್ಚರ್ಸ್‌ನೊಂದಿಗೆ ಕೆಆರ್​ಜಿ ಸ್ಟುಡಿಯೋಸ್​ ಕೈ ಜೋಡಿಸಿದೆ.

ತಮ್ಮ 6ನೇ ವರ್ಷದ ಸಂಭ್ರಮದ ಸಲುವಾಗಿ ಕೆಆರ್​ಜಿ ಸಂಸ್ಥೆಯು ಈ ಸಹಯೋಗವನ್ನು ಘೋಷಿಸಿ, ಎರಡೂ ಸಂಸ್ಥೆಯು ಇನ್ನು ಮುಂದೆ ವಿಶಿಷ್ಟ ಕಥೆಗಳನ್ನು ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುತ ಚಿತ್ರಗಳನ್ನು ಸಿನಿ ಪ್ರೇಕ್ಷಕರಿಗೆ ಪರಿಚಯಿಸುವುದ್ದಕ್ಕೆ ಸಜ್ಜಾಗಿದೆ ಎಂದು ತಿಳಿಸಿದೆ.

ಕೆಆರ್​ಜಿ ಸ್ಟುಡಿಯೋಸ್ ಕಥೆಗಳ ಸೃಜನಾತ್ಮಕ ಬೆಳವಣಿಗೆ, ಅದರ ಕಾರ್ಯಗತಗೊಳಿಸುವಿಕೆ ಮತ್ತು ಎಲ್ಲೆಡೆ ಪ್ರೇಕ್ಷಕರಿಗೆ ಪ್ರಸ್ತುತಪಡಿಸುವಿಕೆಯಿಂದ ಚಲನಚಿತ್ರ ನಿರ್ಮಾಣದ ಸಂಪೂರ್ಣ ವ್ಯಾಪ್ತಿಯನ್ನು ಒಳಗೊಳ್ಳುವ ವಿಚಾರದಲ್ಲಿ ಬದ್ಧವಾಗಿದೆ. ಹೊಸ ಧ್ವನಿಗಳು, ತಾಜಾ ಮತ್ತು ವೈವಿಧ್ಯಮಯ ಕಥೆ ಹೇಳುವಿಕೆ ಮತ್ತು ಆಳವಾದ, ಅರ್ಥಪೂರ್ಣ ಮೈತ್ರಿಗಳನ್ನು ಪ್ರೋತ್ಸಾಹಿಸುವುದು ಇವರ ಗುರಿಯಾಗಿದೆ

6 ವರ್ಷಗಳ ಹಿಂದೆ ನಾವು ಕನ್ನಡ ಮತ್ತು ಇತರ ಪ್ರಾದೇಶಿಕ ಭಾಷೆಯ ಚಿತ್ರರಂಗಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡುವ ಉದ್ದೇಶದಿಂದ ಕೆಆರ್‌ಜಿಯನ್ನು ಆರಂಭಿಸಿದ್ದೇವೆ. ಕಥೆಯ ಬೆಳವಣಿಗೆ, ಉತ್ತಮ ಗುಣಮಟ್ಟದ ನಿರ್ವಹಣಾ ಮತ್ತು ವ್ಯಾಪಕ ವಿತರಣೆಗೆ ಗಮನ ಹರಿಸುತ್ತಾ ಬರ್ತಿದ್ದೇವೆ. ನಮ್ಮ ಪ್ರಯತ್ನವು ಯಾವಾಗಲೂ ವೈವಿಧ್ಯಮಯ ಕಥೆಗಳು ಮತ್ತು ಕಥೆಗಾರರನ್ನು ಪ್ರೋತ್ಸಾಹಿಸುವುದಾಗಿದೆ ಮತ್ತು TVFನೊಂದಿಗೆ ನಮ್ಮ ಸಹಯೋಗವು - ಬಲವಾದ ಮತ್ತು ವಿಶಿಷ್ಟವಾದ ಪಾತ್ರ-ಆಧಾರಿತ ಕಥೆ ಹೇಳುವಿಕೆಯಲ್ಲಿ ಮುಂದುವರಿದಿದೆ. ಇದು ನಮ್ಮ ಹಂಚಿಕೆಯ ದೃಷ್ಟಿಗೆ ಸಾಕ್ಷಿಯಾಗಿದೆ ಎಂದು  KRG ಸ್ಟುಡಿಯೋಸ್‌ನ ಸಂಸ್ಥಾಪಕ ಕಾರ್ತಿಕ್ ಗೌಡ  ತಿಳಿಸಿದ್ದಾರೆ.

TVF ನ ಸಂಸ್ಥಾಪಕರಾದ ಅರುಣಾಭ್ ಕುಮಾರ್ ಅವರು KRG ಸ್ಟುಡಿಯೋಸ್ ಜೊತೆ ಸೇರಿ ಕನ್ನಡ, ತಮಿಳು, ಮಲಯಾಳಂ ಮತ್ತು ಹೆಚ್ಚಿನವುಗಳಲ್ಲಿ ತೊಡಗಿಸಿಕೊಳ್ಳುವ ಚಲನಚಿತ್ರಗಳನ್ನು ನಿರ್ಮಿಸಲು ಅಪಾರ ಉತ್ಸಾಹ ಹೊಂದಿರುವುದಾಗಿ ಹೇಳಿದ್ದಾರೆ.

TVF ಅಧ್ಯಕ್ಷ ವಿಜಯ್ ಕೋಶಿ ಈ ಕುರಿತು ಮಾತನಾಡಿ, "ನಮ್ಮ ಸಂಸ್ಥೆ ಮೊದಲಿನಿಂದಲೂ ವೀಕ್ಷಕರ ಮನಮುಟ್ಟುವಂತಹ ನೈಜ ಕಥೆಗಳನ್ನು ಪ್ರಸ್ತುತ ಪಡಿಸುತ್ತಾ ಬಂದಿದೆ. ನಮ್ಮಂತೆಯೇ ಜನರ ಸದಭಿರುಚಿಯನ್ನ ಅರಿತು ಇದುವರೆಗೂ ಒಳ್ಳೆ ಸಂದೇಶ ಇರುವ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ KRG ಸಂಸ್ಥೆಯ ಜೊತೆ ಕೈ ಜೋಡಿಸಲು ಬಹಳ ಉತ್ಸುಕರಾಗಿದ್ದೇವೆ. ಬೇರೆ ರಾಜ್ಯಗಳಿಂದ ಬಂದಿದ್ದರೂ, ಈ ನಮ್ಮ ಸಿನಿ ಪ್ರೇಮ ಹಾಗೂ ಯಾವುದೋ ಒಂದು ಶಕ್ತಿ ನಮ್ಮನ್ನು ಒಂದುಗೂಡಿಸಿದೆ ಎಂದರೆ ತಪ್ಪಾಗಲ್ಲ ಎಂದು ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com