ಹೈದರಾಬಾದ್: ಉಪಾಸನಾ ಕಮ್ಮಿನೇನಿ ಕೊನಿದೆಲಾ ಹಾಗೂ ರಾಮ್ ಚರಣ್ ತಮ್ಮ ಪುತ್ರಿಗೆ ನಾಮಕರಣ ಮಾಡಿದ್ದು, ಹೆಸರು ಘೋಷಿಸಿದ್ದಾರೆ.
"ಕ್ಲಿಂಕಾರ ಕೊನಿದೆಲಾ" ರಾಮ್ ಚರಣ್ ದಂಪತಿ ಪುತ್ರಿಯ ಹೆಸರಾಗಿದ್ದು, ವಿಶಿಷ್ಟವಾದ ಹೆಸರಾಗಿದೆ. ಮಗಳ ನಾಮಕರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಚಿರಂಜೀವಿ ಕುಟುಂಬ, "ಚೆಂಚು ಬುಡಗಟ್ಟು ದೇವಿ ಭೌರಮ್ಮ ದೇವಿಯ ಆಶೀರ್ವಾದದಿಂದ ನಾವು ನಮ್ಮ ಮೊಮ್ಮಗಳಿಗೆ ಕ್ಲಿಂಕಾರ ಎಂದು ಲಲಿತಾ ಸಹಸ್ರನಾಮದಿಂದ ಆಯ್ಕೆ ಮಾಡಿದ ಹೆಸರನ್ನು ನಾಮಕರಣ ಮಾಡಿದ್ದೇವೆ. ಆಧ್ಯಾತ್ಮಿಕ ಜಾಗೃತಿಯನ್ನು ತರುವ ಪರಿವರ್ತಕ, ಶುದ್ಧೀಕರಿಸುವ ಶಕ್ತಿ ಎಂಬುದು ಈ ಹೆಸರಿನ ಅರ್ಥವಾಗಿದೆ. ಲಲಿತಾ ಸಹಸ್ರನಾಮ ದೇವಿ ಲಲಿತಾ ದೇವಿಯ 1000 ಹೆಸರುಗಳನ್ನು ಹೊಂದಿದೆ.
ಘೋಷಣೆಗೆ ಚಿರಂಜೀವಿ ದಂಪತಿ, ರಾಮ್ ಚರಣ್ ಪತ್ನಿಯ ಪೋಷಕರು ಘೋಷಣೆಗೆ ಸಹಿ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
Advertisement