ಕನ್ನಡ ಭಾಷೆಯಲ್ಲಿ ಇಷ್ಟೊಂದು ಪ್ರೀತಿ ಸಿಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ: ನಿರ್ದೇಶಕ ಮಂಸೋರೆ

ವಿಮರ್ಶಕರ ಮೆಚ್ಚುಗೆಯ ನಿರ್ದೇಶಕರಾದ ಮಂಸೋರೆ 19.20.21 ಸಿನಿಮಾ ಮೂಲಕ ಕನ್ನಡಕ್ಕೆ ಮತ್ತೊಂದು ಹಿಟ್ ಸಿನಿಮಾ ನೀಡಿದ್ದಾರೆ. ಮಾರ್ಚ್ 3 ರಂದು ಬಿಡುಗಡೆಯಾದ ಮಾನವ ಹಕ್ಕುಗಳ ಉಲ್ಲಂಘನೆಯ ಕಠಿಣ ಕಥೆಗೆ ಎಲ್ಲೆಡೆ ಪ್ರಶಂಸೆ ಗಳಿಸುತ್ತಿದೆ
ಮಂಸೋರೆ
ಮಂಸೋರೆ

ವಿಮರ್ಶಕರ ಮೆಚ್ಚುಗೆಯ ನಿರ್ದೇಶಕರಾದ ಮಂಸೋರೆ 19.20.21 ಸಿನಿಮಾ ಮೂಲಕ ಕನ್ನಡಕ್ಕೆ ಮತ್ತೊಂದು ಹಿಟ್ ಸಿನಿಮಾ ನೀಡಿದ್ದಾರೆ. ಮಾರ್ಚ್ 3 ರಂದು ಬಿಡುಗಡೆಯಾದ ಮಾನವ ಹಕ್ಕುಗಳ ಉಲ್ಲಂಘನೆಯ ಕಠಿಣ ಕಥೆಗೆ ಎಲ್ಲೆಡೆ ಪ್ರಶಂಸೆ ಗಳಿಸುತ್ತಿದೆ.

ಕನ್ನಡ ಭಾಷೆಯಲ್ಲಿ ಈ ರೀತಿಯ ಚಿತ್ರವು ಇಷ್ಟೊಂದು ಪ್ರೀತಿಯನ್ನು ಪಡೆಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಮ್ಮ ಇಡೀ ತಂಡವು ಸಂತೋಷವಾಗಿದೆ. 19.20.21 ಒಂದು ನೈಜ ಕಥೆಯಾಗಿದೆ ಎಂದು ಮಂಸೋರೆ ಹೇಳುತ್ತಾರೆ. ಸ್ವಲ್ಪ ಸಮಯದ ನಂತರ ಕನ್ನಡದಲ್ಲಿ ಮಾನವೀಯ ಮೌಲ್ಯಗಳ ಕುರಿತ ಸಿನಿಮಾ ಇದಾಗಿದೆ ಎಂದು ಹೇಳಲಾಗಿದೆ.

ಇದು ಮೂಲಭೂತ ಹಕ್ಕುಗಳಿಗಾಗಿ ಹೋರಾಡುವ ಜನರ ಸಣ್ಣ ಸಮುದಾಯದ ಕಥೆಯಾಗಿದೆ . ಅವರ ಧೈರ್ಯವು ಭಾರತದ ಪ್ರತಿಯೊಬ್ಬ ನಾಗರಿಕರನ್ನು ಪ್ರೇರೇಪಿಸುತ್ತದೆ. ಇದು ನಮ್ಮ ಸಂವಿಧಾನ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ತಿಳಿದಿಲ್ಲದ ಜನಸಾಮಾನ್ಯರಿಂದ ವೀಕ್ಷಿಸಬೇಕಾದ  ಚಿತ್ರವಾಗಿದೆ. ತಮ್ಮ ಮೂಲಭೂತ ಅಗತ್ಯಗಳಿಗಾಗಿ ಆಳುವ ಸರ್ಕಾರವನ್ನು ಪ್ರಶ್ನಿಸುವ ಹಕ್ಕು ತಮಗಿದೆ ಎಂಬುದನ್ನು ಬಹುತೇಕ ಮರೆತಿದ್ದಾರೆ. ನಮ್ಮ ಚಲನಚಿತ್ರವು ಆ ಜನರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸುತ್ತದೆ ಎಂದಿದ್ದಾರೆ.

19.20.21 ಸಿನಿಮಾ ಆಗಾಜ್ ಎಂಟರ್‌ಟೈನ್‌ಮೆಂಟ್ ಪ್ರಸ್ತುತಪಡಿಸಿದೆ. ನಿರ್ದೇಶಕ ಮನ್ಸೋರೆ ಮತ್ತು ನಿರ್ಮಾಪಕ ದೇವರಾಜ್ ಆರ್ ಎರಡನೇ ಬಾರಿಗೆ ಒಂದಾಗಿದ್ದಾರೆ. ಶೃಂಗ ಬಿ ವಿ, ಬಾಲಾಜಿ ಮನೋಹರ್, ಎಂ ಡಿ ಪಲ್ಲವಿ, ರಾಜೇಶ್ ನಟರಂಗ, ಅವಿನಾಶ್, ಮಹದೇವ್ ಹಡಪದ್ ಮತ್ತು ವೆಂಕಟೇಶ್ ಪ್ರಸಾದ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರೇಕ್ಷಕರು ತಮ್ಮ ಜೀವನದಲ್ಲಿ ಇದುವರೆಗೂ ನೋಡದ ಅಥವಾ ಕೇಳದ ಅನುಭವ ಈ ಸಿನಿಮಾದಲ್ಲಿದೆ. ಸಾಮಾನ್ಯ ಮನುಷ್ಯನ ಮೌಲ್ಯ, ನಮ್ಮ ಸಂವಿಧಾನದಲ್ಲಿ ಅವರು ಹೊಂದಿರುವ ಪ್ರಮುಖ ಬೆಂಬಲ ಮತ್ತು ಸಂವಿಧಾನವು ಸಾಮಾನ್ಯ ಮನುಷ್ಯನನ್ನು ಹೇಗೆ ರಕ್ಷಿಸುತ್ತದೆ ಎಂಬ ಬಗ್ಗೆ ಸಿನಿಮಾದಲ್ಲಿ ಮನ್ಸೋರೆ ತೋರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com